ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚರ ಮಾಡಿ ಕೊಲೆಗೈದ ಆರೋಪಿಗಳಿಗೆ ಕಠಿಣ ಕಾನೂನು ಕ್ರಮ ಆಗ್ರಹಿಸಿ-ಪ್ರತಿಭಟನೆ-Chitradurga
ಇದೆ ದಿನಾಂಕ 23-07-2021ರಂದು ಚಿತ್ರದುರ್ಗ ಜಿಲ್ಲೆಯ ಬ್ರಹ್ಮಸಾಗರ ಹೋಬಳಿಯ ಇಸಾಮುದ್ರ ಗ್ರಾಮದ ನಿವಾಸಿ,ಉಪ್ಪಾರ ಜನಾಂಗದ ಶಶಿಕಲಾ ಎಂಬ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚರ ಮಾಡಿ ಕೊಲೆಗೈದ ಆರೋಪಿಗಳಿಗೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ.ಇಂದು ಇಂಡಿ ನಗರದಲ್ಲಿ ಶ್ರೀ ಭಗೀರಥ ಸಮಾಜ ಸೇವಾ ಸಂಘ ಇಂಡಿ ಹಾಗೂ ಗಿರೀಶ್ ಉಪ್ಪಾರ ಅಭಿಮಾನಿ ಬಳಗ ಇಂಡಿ ತಾಲ್ಲೂಕ ವತಿಯಿಂದ ಉಗ್ರವಾದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ಬೆಳಗೆ ಹತ್ತು ಘಂಟೆಗೆ ಸಮಾಜದ ನೂರಾರು ಜನ ಸೇರಿಕೊಂಡು ಇಂಡಿ ನಗರದ ಹೃದಯ ಭಾಗದಲ್ಲಿರುವ ಶ್ರೀ ಬಸವೇಶ್ವರ ವೃತ್ತದ ಬಳಿ ಪ್ರತಿಭಟನೆ ನಡೆಸಿದರು,ನಂತರ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಿನಿ ವಿಧಾನಸೌಧದ ಬಳಿ ಪ್ರತಿಭಟನೆ ನಡೆಸಿದರು.
ಹಿಂತಾ ಹಿನಕೃತ್ಯವನ್ನು ಗೈದ ಆರೋಪಿಗಳಿಗೆ ಕಠಿಣ ಗಲ್ಲು ಶಿಕ್ಷೆಯನ್ನು ನೀಡಬೇಕು ಎಂದು ಆಗ್ರಹಿಸಿದರು, ನಂತರ ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಇಂಡಿ ತಾಲ್ಲೂಕ ದಂಡಾಧಿಕಾರಿ ಯವರ ಪರವಾಗಿ ರೇವಡಿಗಾರ ಸರ್ ಯವರು ಮನವಿ ಸ್ವೀಕರಿಸಿದರು,ಈ ಪ್ರತಿಭಟನೆಯಲ್ಲಿ ಮಾಜಿ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆರಾದ ಸೋಮಶೇಖರ ಬ್ಯಾಳಿ,ಬಾಳು ಮುಳಜಿ, ಸುರೇಶ್ ಕರಾಂಡೆ,ಅಶೋಕ ಬಗಲಿ, ಚಿದಾನಂದ ಉಪ್ಪಾರ, ಮಳಸಿದ್ದಪ್ಪ ಗಬ್ಬೂರು, ಚಂದ್ರಶೇಖರ ಸೊನ್ನ, ಶ್ರೀಶೈಲ ಮದರಿ, ಶಿವು ಉಪ್ಪಾರ,ಅನೀಲ ರೇಬಿನಾಳ, ಈರಣ್ಣ ಉಪ್ಪಾರ.ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Reported By: Sachin (Vijayapura)

No comments: