.

ಚಿಕ್ಕೋಡಿ ಜಿಲ್ಲೆ ಮಾಡದಿದ್ರೆ ಮುಂದಿನ ದಿನಗಳಲ್ಲಿದೆ ಬಿಜೆಪಿಗೆ ಮಾರಿಹಬ್ಬ..

ಚಿಕ್ಕೋಡಿ: ನಿಪ್ಪಾಣಿಯಲ್ಲಿ ಸಚಿವರು, ಈ ಭಾಗದಲ್ಲಿ, ಸಂಸದರು, ಮಾಜಿ ರಾಜ್ಯ ಸಭಾ ಸದಸ್ಯರು ಹೀಗೆ ಹಲವರ ರಾಜಕರಣಿ ದಂಡು ಇರುವಾಗಲೂ ಗ್ರಾ.ಪಂ ಚುನಾವಣೆ  ಫಲಿತಾಂಶ ಬಿ.ಜೆ.ಪಿಗೆ ಭಾರಿ ಹಿನ್ನಡೆಯಾಗಿದ್ದು, ಇನ್ನು ಜಿಲ್ಲಾ ಘೋಷಣೆ ಯಾಗದಿದ್ದರೆ ಮುಂದಿನ ಹೋರಾಟದ ರೂಪುರೇಷೆ ಬದಲಾಗಲಿದೆ. ಬಜೇಟ್ ಒಳಗಾಗಿ ಚಿಕ್ಕೋಡಿ ಜಿಲ್ಲೆ ಯಾಗದಿದ್ದರೆ ಅಮರಣ ಉಪವಾಸ ಸತ್ಯಾಗ್ರಹವನ್ನು ಕೈಗೋಳ್ಳಲಾಗುವದು ಎಂದು  ಜಿಲ್ಲಾ ಹೋರಾಟ ಸಮೀತಿ ಅಧ್ಯಕ್ಷ ಬಿ.ಆರ್ ಸಂಗಪ್ಪಗೋಳ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಚಿಕ್ಕೋಡಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧಾವಾರ ಕರೆದ ಪತ್ರೀಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು ೩೦ ಲಕ್ಷ ಜನರ ಹಿತದೃಷ್ಟಿಯಿಂದ,  ಹಲವು ದಶಕಗಳಿಂದ ಜಿಲ್ಲಾ ಕೂಗು ಕೇಳಿ ಬರುತ್ತಿದ್ದರು, ಸಾಕಷ್ಟು ಪ್ರತಿಭಟಣೆ ಹೋರಾಟ ನಡೆಯುತ್ತ ಬಂದರು ಬ್ರಿಟಿಷ್ ಕಾಲದಲ್ಲಿ ಸಿಕ್ಕ ಮಹತ್ವ ಚಿಕ್ಕೋಡಿ ಗೆ ಯಾವ ಸರಕಾರ ಬಿಡಲಿಲ್ಲ.ಅಧಿಕಾರ ದುಡ್ಡಿನ  ರಾಜಕಾರಣ ಮಾಡುವದು ಸರಿಯಲ್ಲ, ಜನರ ಅನೂಕುಲಕ್ಕೆ ಚಿಕ್ಕೋಡಿ ಜಿಲ್ಲೆಯನ್ನಾಗಿಸಿ. ಅಗದಿದ್ದಲ್ಲಿ ಪ್ರತಿ ಹಳ್ಳಿ ಹಳ್ಳಿಗೂ ಪಾದಯಾತ್ರೆ ಕೈಗೊಂಡು ಜನ ಸಮೂಹ ದೊಂದಿಗೆ ಪ್ರತಿಭಟಿಸಲಾಗೂವದು. 

ನಾಟಕೀಯ ಮಾತುಗಳು ಸಾಕು ಸತೀಷ ಜಾರಕೀಹೋಳಿ, ಮಾಜಿ ಸಿ.ಎಂ ಸಿದ್ಧರಾಮಯ್ಯ ಕಾಂಗ್ರೆಸ್ ಆಡಳಿತ ಇದ್ದಾಗ ಜಿಲ್ಲೆ ಘೋಷಿಸುವ ಬಗ್ಗೆ ಮಾತು ಕೊಟ್ಟಿದ್ದರು, ಅಷ್ಟೇ ಅಲ್ಲದೆ ದೇಶದ ಪ್ರಧಾನಿ ಚಿಕ್ಕೋಡ ಚುನಾವಣೆ ಪ್ರಚಾರ ಸಂದರ್ಭದಲ್ಲಿ ಸಂಸದ ಅಣ್ಣಾಸಾಹೇಬ  ಜೊಲ್ಲೆ ಜಿಲ್ಲೆ ಮಾಡುವ ಬಗ್ಗೆ ಮಾತನಾಡಿದ್ದ ಎಂದು ಏಕ ವಚನದಲ್ಲಿ ಗುಡುಗಿದರು. ಆದರೆ  ಅಧಿಕಾರ ಸಿಕ್ಕ ಕೂಡಲೆ ಯಾರು ಈ ಮಾತು ಎತ್ತುತಿಲ್ಲಾ. ಸ್ಥಳಿಯ ನಾಯಕರ ಹಿತಾಸಕ್ತಿ ಕೊರತೇಯಿಂದ ಚಿಕ್ಕೋಡಿ ಜಿಲ್ಲೆ ರಚಣೆಗೆ ಹಿನ್ನಡೆಯಾಗುತ್ತಿದ್ದು.

ಅಥಣಿ, ಕಾಗವಾಡ, ನಿಪ್ಪಾಣಿ, ರಾಯಭಾಗ ಎಲ್ಲರಿಗೂ ಜಿಲ್ಲಾ ಆಸಕ್ತಿ ಇದ್ದು ಜನರ ಹಿತಕ್ಕಾಗಿ ರಾಜಕಾರಣಿ ಹಿಂದೇಟು ಏಕೆ ಹಾಕುತ್ತಿದ್ದಾರೆ. ಇದರ ಹಿಂದಿನ ರಾಜಕೀಯ ದುರುದ್ದೇಶ ಏನು ಎಂದು ಪ್ರಶ್ನಿಸಿದರು.

ಈ ಸಂಧರ್ಭದಲ್ಲಿ ಹಿರಿಯ  ಸಾಹಿತಿ ಎಸ್.ವಾಯ್  ಹಂಜಿ,ರೇವಪ್ಪಾ ತಳವಾರ,ಸುರೇಶ ಬ್ಯಾಕೂಡೆ, ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ, ಸಂಜು ಬಡಿಗೇರ, ಸಂಜು ಹಿರೇಮಠ ಇದ್ದರು.
ಚಿಕ್ಕೋಡಿ ಜಿಲ್ಲೆ ಮಾಡದಿದ್ರೆ ಮುಂದಿನ ದಿನಗಳಲ್ಲಿದೆ ಬಿಜೆಪಿಗೆ ಮಾರಿಹಬ್ಬ.. ಚಿಕ್ಕೋಡಿ ಜಿಲ್ಲೆ ಮಾಡದಿದ್ರೆ ಮುಂದಿನ ದಿನಗಳಲ್ಲಿದೆ ಬಿಜೆಪಿಗೆ ಮಾರಿಹಬ್ಬ.. Reviewed by News10Karnataka Admin on January 06, 2021 Rating: 5

No comments:

Powered by Blogger.