.

ಸಚಿವ ರಮೇಶ ಜಾರಕಿಹೊಳಿ‌ ಅವರಿಂದ ಮತ್ತೊಂದು ಹೊಸ ಬಾಂಬ್...ಎನ್ ಗೊತ್ತಾ...?ಬೆಳಗಾವಿ : ಮಾರ್ಚ್ ಎಪ್ರಿಲ್ ನಲ್ಲಿ ದೊಡ್ಡ ಮಟ್ಟದಲ್ಲಿ ಸಂಪುಟ ಪುನಾರಚನೆ ಆಗಲಿದೆ ಎಂದು ಸಚಿವ ರಮೇಶ ಜಾರಕಿಹೊಳಿ ಹೊಸ ಬಾಂಬ್ ಒಂದನ್ನ ಸಿಡಿಸಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವ್ರು,ಸಚಿವ ಸ್ಥಾನ ತಪ್ಪಿದವರಿಗೆ ಆಗ ಸ್ಥಾನ ಸಿಗುತ್ತದೆ‌.ದೇವರು ಹಾಗೂ ವರಿಷ್ಠರ ಆಶೀರ್ವಾದದಿಂದ ಎಲ್ಲ ಅಂದುಕೊಂಡಂತೆ ನಡೆಯುತ್ತಿದೆ. ಸದ್ಯ ಎಳು ಜನ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದಾರೆ.ಸಿ.ಪಿ.ಯೋಗೇಶ್ವರಗೆ ಸಚಿವ ಸ್ಥಾನ ನೀಡಿದಕ್ಕೆ ಬಹಳ ಸಂತೋಷವಾಗುತ್ತಿದೆ‌.ಸರ್ಕಾರ ರಚನೆಯಲ್ಲಿ ಅವರ ಪಾತ್ರ ಪ್ರಮುಖವಾಗಿತ್ತು.
ಇನ್ನೂ ಮುನಿರತ್ನ ಅವರಿಗೂ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ.ಅಲ್ಲದೆ ಎಚ್.ವಿಶ್ವನಾಥ್ ಮಹೇಶ್ ಕುಮಟಳ್ಳಿ ಅವರು ಆಕಾಂಕ್ಷಿಗಳಾಗಿದ್ದಾರೆ.ಆದ್ರೆ ವಿಶ್ವನಾಥ್ ಅವರಿಗೆ ಕಾನೂನು ತೊಡಕು ಇರುವುದರಿಂದ ಸದ್ಯಕ್ಕೆ ಅವರಿಗೆ ಸಚಿವ ಸ್ಥಾನ ಸಿಕ್ಕಿಲ್ಲಾ. ಇದಲ್ಲದೇ ಮಾಲೀಕಯ್ಯ ಗುತ್ತೇದಾರ್ ಅವರು ನನಕ್ಕಿಂತ ಹೆಚ್ಚು ಶಕ್ತಿಶಾಲಿ ಗುಲಬರ್ಗಾದಲ್ಲಿ ದೊಡ್ಡ ವ್ಯಕ್ತಿಯನ್ನ ಸೋಲಿಸಿದ್ದಾರೆ.ಹಾಗಾಗಿ ಅವರಿಗೂ ಸಚಿವ ಸ್ಥಾನ ಸಿಗಬೇಕಾಗಿದೆ.ಅಲ್ಲದೇ ನಾಗೇಶ್ ಅವರನ್ನ ಸಚಿವ ಸ್ಥಾನದಿಂದ ಕೈ ಬಿಡುವ ಪ್ರಶ್ನೆಯೇ ಇಲ್ಲಾ ಎಂದಿದ್ದಾರೆ.ಇನ್ನೂ ಬಿಎಸ್ವೈ ವಿರುದ್ದ ಎಚ್.ವಿಶ್ವನಾಥ್ ಆಕ್ರೋಶ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವ್ರು, ವಿಶ್ವನಾಥ್ ಅವ್ರು ಹಿರಿಯರು ಅವರು ಎನೂ ಮಾತನಾಡಿದ್ರು ಅದು ಆಶೀರ್ವಾದ ಹಾಗಾಗಿ ಬಹಳ ತಲೆಕೆಡಿಸಿಕೊಳ್ಳುವ ಅಗತ್ಯ ಇಲ್ಲಾ ಎಂದಿದ್ದಾರೆ.ಮುಂಬರುವ  ಉಪ ಚುನಾವಣೆ ಮುಗಿದ ಮೇಲೆ ಸಂಪುರ ಪುನಾರಚನೆ ಆಗಲಿದೆ ಎಂದು ತಿಳಿಸಿದ್ದಾರೆ.....

ಸಚಿವ ರಮೇಶ ಜಾರಕಿಹೊಳಿ‌ ಅವರಿಂದ ಮತ್ತೊಂದು ಹೊಸ ಬಾಂಬ್...ಎನ್ ಗೊತ್ತಾ...? ಸಚಿವ ರಮೇಶ ಜಾರಕಿಹೊಳಿ‌ ಅವರಿಂದ ಮತ್ತೊಂದು ಹೊಸ ಬಾಂಬ್...ಎನ್ ಗೊತ್ತಾ...? Reviewed by News10Karnataka Admin on January 12, 2021 Rating: 5

No comments:

Powered by Blogger.