.

ಹೈಪೈ ಕಳ್ಳರಿಗೆ ಲೋಪೈ ತೋರಿಸಿದ ಬೆಳಗಾವಿ ಪೋಲಿಸರು..ಬೆಳಗಾವಿ : ಬ್ಯಾಂಕ್ ಗೆ ಕನ್ನಹಾಕಿದ್ದ ಹೈಪೈ ಕಳ್ಳನನ್ನ ಬಂಧಿಸಿರುವ ಘಟನೆ ಬೆಳಗಾವಿ ಯಲ್ಲಿ ನಡೆದಿದೆ.ಬೆಳಗಾವಿ ಮಾಳಮಾರುತಿ ಪೋಲಿಸ ಠಾಣೆಯ ಎಸಿಪಿ ಸದಾಶಿವ ಕಟ್ಟಿಮನಿ,ಇನ್ಸ್‌ಪೆಕ್ಟರ್ ಸುನೀಲ್ ಪಾಟೀಲ ತಂಡದಿಂದ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಮೂಲದ ಮುಜಫರ್ ಶೇಖ್ ಎಂಬುವನನ್ನ ಅರೆಸ್ಟ್ ಮಾಡಿದ್ದಾರೆ.

ದುಬಾರಿ ಬೆಲೆಯ ಹಾರ್ಲೆ ಡೇವಿಡ್‌‌ಸನ್‌‌‌ ಬೈಕ್ ಮೂಲಕ ಬೆಳಗಾವಿ ಮಹಾಂತೇಶ್ ನಗರದ ಕಿತ್ತೂರು ರಾಣಿ ಚೆನ್ನಮ್ಮ ಸಹಕಾರಿ ಬ್ಯಾಂಕ್ ನಲ್ಲಿ ಸುಮಾರು 15 ಲಕ್ಷ ಮೌಲ್ಯದ 301ಗ್ರಾಂ ಚಿನ್ನಾಭರಣ,1 ಲಕ್ಷಕ್ಕೂ ಅಧಿಕ ಹಣವನ್ನ ಈತ ಕಳ್ಳತನ ಮಾಡಿದ್ದ.ಅಲ್ಲದೇ ಆರು ಲಕ್ಷದ ಐವತ್ತು ಸಾವಿರದ ಮೌಲ್ಯದ ಹಾರ್ಲರ ಡೇವಿಡ್ ಸನ್ ಬೈಕ್ ಕೂಡ ಪೋಲಿಸರು ವಶಕ್ಕೆ ಪಡೆದಿದ್ದು,ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.ಈ ಕುರಿತು ಮಾಳಮಾರುತಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌....
ಹೈಪೈ ಕಳ್ಳರಿಗೆ ಲೋಪೈ ತೋರಿಸಿದ ಬೆಳಗಾವಿ ಪೋಲಿಸರು.. ಹೈಪೈ ಕಳ್ಳರಿಗೆ ಲೋಪೈ ತೋರಿಸಿದ ಬೆಳಗಾವಿ ಪೋಲಿಸರು.. Reviewed by News10Karnataka Admin on January 08, 2021 Rating: 5

No comments:

Powered by Blogger.