.

ಇದು ಪಾರ್ಲಿಮೆಂಟ್ ಅನ್ಕೋಬೇಡಿ, ಇದು ಬಸವಣ್ಣನವರ ಅನುಭವ ಮಂಟಪ..ಮಂಟಪಕ್ಕೆ ಸಿಎಂ ಬಿ ಎಸ್ ವೈ ಶುಂಕುಸ್ಥಾಪನೆ..

ಬೀದರ : ವಿಶ್ವದ ಮೊದಲ ಪಾರ್ಲಿಮೆಂಟ್ ಹೆಗ್ಗಳಿಕೆ ಪಾತ್ರವಾಗಿರುವ ಅನುಭವ ಮಂಟಪವನ್ನು ಹೊಸ ಪರಿಕಲ್ಪನೆಯೊಂದಿಗೆ ಭವ್ಯ ಕಟ್ಟಡದ ರೂಪದಲ್ಲಿ ನಿರ್ಮಿಸಲು ಸಿಎಂ ಬಿ.ಎಸ್.ಯಡಿಯೂರಪ್ಪ ಭೂಮಿ ಪೂಜೆ ನೆರವೇರಿಸಿದಾರೆ.12 ನೇ ಶತಮಾನದಲ್ಲಿ ಸಮಾನತೆಗಾಗಿ ಕ್ರಾಂತಿ ನಡೆದಂತಹ ಬಸವಣ್ಣನ ಕರ್ಮ ಭೂಮಿಯಲ್ಲಿ 500 ಕೋಟಿ ರೂ. ವೆಚ್ಚದಲ್ಲಿ 7.5 ಎಕ್ಕರೆ ಜಮೀನಿನಲ್ಲಿ, 182 ಅಡಿ ಎತ್ತರದ ಬೃಹತ್ ಅನುಭವ‌ ಮಂಟಪ ನಿರ್ಮಾಣವಾಗಲಿದೆ.ಈ ಮೂಲಕ ಬಸವಾದಿ ಭಕ್ತರ ಹಲವು ವರ್ಷಗಳ ಬೇಡಿಕೆ ಸಾಕಾರಗೊಳ್ಳುವ ಕಾಲ ಸಮೀಪಿಸಿದ್ದು, ಶರಣರ ನಾಡಿನ ಜನರಲ್ಲಿ ಸಂಸತ ಮನೆ ಮಾಡಿದೆ.ಈ ಕುರಿತು ಒಂದು ವರದಿ ಇಲ್ಲಿದೆ...

12 ನೇ ಶತಮಾನದಲ್ಲಿ ಸಮಾನತೆಗಾಗಿ ದೊಡ್ಡ ಕ್ರಾಂತಿಯನ್ನೇ ನಡೆದ ಭೂಮಿ ಶರಣರ ನಾಡು, ಬಸವಣ್ಣ ಕಾರ್ಯಕ್ಷೇತ್ರದಲ್ಲಿ ಮತ್ತೊಂದು ಕ್ರಾಂತಿಗೆ ಸಿಎಂ ಯಡಿಯೂರಪ್ಪ ಅಡಿಪಾಯ ಹಾಕಿದ್ದಾರೆ.ವಿಶ್ವದ ಮೊದಲ ಪಾರ್ಲಿಮೆಂಟ್ ಎಂಬ ಹೆಗ್ಗಳಿಕೆಯ, ಪ್ರಜಾಪ್ರಭುತ್ವದ ತಳಹದಿಗೆ ನಾಂದಿ ಹಾಡಿದ ಬಸವಣ್ಣನ ಸ್ಥಾಪಿಸಿದ ಅನುಭವ ಮಂಟಪ ಈಗ ವಿಶೇಷ ಮತ್ತು ವಿಶಾಲವಾಗಿ ನಿರ್ಮಿಸಲು ಸಿಎಂ ಯಡಿಯೂರಪ್ಪ ಪಣತೊಟ್ಟಿದ್ದಾರೆ.ನೂತನ ಅನುಭವ ಮಂಟಪ ನಿರ್ಮಾಣ ಶಂಕುಸ್ಥಾಪನೆ ನೆರವೇರಿಸಿದ್ದಾರೆ.500 ಕೋಟಿ ವೆಚ್ಚದ ಮಂಟಪಕ್ಕಾಗಿ ಈಗಾಗಲೇ ನೂರು ಕೋಟಿ ಹಣ ನೀಡಲಾಗಿದೆ.ಎರಡು ವರ್ಷಗಳಲ್ಲಿ ಅನುಭವ ಮಂಟಪದ ಕಾರ್ಯ ಮುಗಿಸುವ ಜವಾಬ್ದಾರಿಯನ್ನು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ, ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ್ ಪಾಟೀಲ್ ಸೇಡಂ ಅವರಿಗೆ ವಹಿಸಲಾಗಿದೆ...
ಮುಂದಿನ ಎರಡು ವರ್ಷಗಳಲ್ಲಿ ಅನುಭವ ಮಂಟಪ ಕಾರ್ಯ ಮುಗಿದ ಕೂಡಲೇ ನಾಲ್ಕೈದು ಲಕ್ಷ ಜನ್ರನ್ನ ಸೇರಿಸಿ ಪ್ರಧಾನಿ ಮೋದಿ ಅವರಿಂದ ಉದ್ಘಾಟನೆಗೆ ಫ್ಲಾನ್ ಕೂಡ ಮಾಡಲಾಗಿದೆ.ಅಲ್ಲದೇ ಟೆಂಡರ್ ಪ್ರಕ್ರಿಯೆ ಮುಗಿದ ಕೂಡಲೇ ಕಟ್ಟಡ ನಿರ್ಮಾಣ ಕಾರ್ಯ ಆರಂಭವಾಗಲಿದ್ದು,ಇಡೀ ದೇಶದ ಜನ ಗಮನ ಸೆಳೆಯುವಂತಹ ಅದ್ಭುತ ಕೆಲಸ ಆಗಲಿದೆ ಇನ್ನೂ ಸಿಎಂಗೆ ಡಿಸಿಎಂ ಲಕ್ಷ್ಮಣ‌ ಸವದಿ, ಸಚಿವರಾದ ಪ್ರಭು ಚೌಹಾಣ್, ಡಾ.ಸುಧಾಕರ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಮಾಜಿ ಸಚಿವ ರಾಜಶೇಖರ ಪಾಟೀಲ್, ಪೂಜೆ ಬಸವಲಿಂಗ ಪಟ್ಟದ್ದೆವರು ಸೇರಿದಂತೆ ಹಲವು ಗಣ್ಯರು ಮಠಾಧೀಶರು ಸಾಥ್ ನೀಡಿದ್ರು..


500 ಕೋಟಿ ರೂ. ವೆಚ್ಚದಲ್ಲಿ ನೂತನ ಅನುಭವ ಮಂಟಪ ನಿರ್ಮಾಣ
ನೂತನ ಅನುಭವ ಮಂಟಪಕ್ಕೆ 25 ಎಕ್ಕರೆ ಜಾಗ ಮೀಸಲು 7.5 ಎಕ್ಕರೆ ಜಮೀನಿನಲ್ಲಿ 182 ಎತ್ತರ, 2884 ಸುತ್ತಳತೆಯ ಆದುನಿಕ ಅನುಭವ ಮಂಟಪ 6 ಅಂತಸ್ತಿನ ಗೋಲಾಕಾರದ ಮಾದರಿಯ ಭವ್ಯವಾದ 770 ಕಂಬಗಳ ಕಟ್ಟಡ ಎರಡು ವರ್ಷದಲ್ಲೇ ಆದುನಿಕ ಅನುಭವ ಮಂಟಪ ನಿರ್ಮಾಣ ಪ್ರಧಾನಿ ನರೇಂದ್ರ ಮೋದಿ ಅವರಿಂದಲೇ ನೂತನ ಅನುಭವ ಮಂಟಪದ ಕಟ್ಟಡ ಉದ್ಘಾಟನೆ ಪೂಜ್ಯ ಬಸವಲಿಂಗ ಪಟ್ಟದ್ದೆವರಿಗೆ ಸಿಎಂ ಯಡಿಯೂರಪ್ಪ ಮಾತು ಕೊಟ್ಟಿದ್ದಾರೆ...
ಇದು ಪಾರ್ಲಿಮೆಂಟ್ ಅನ್ಕೋಬೇಡಿ, ಇದು ಬಸವಣ್ಣನವರ ಅನುಭವ ಮಂಟಪ..ಮಂಟಪಕ್ಕೆ ಸಿಎಂ ಬಿ ಎಸ್ ವೈ ಶುಂಕುಸ್ಥಾಪನೆ.. ಇದು ಪಾರ್ಲಿಮೆಂಟ್ ಅನ್ಕೋಬೇಡಿ, ಇದು ಬಸವಣ್ಣನವರ ಅನುಭವ ಮಂಟಪ..ಮಂಟಪಕ್ಕೆ ಸಿಎಂ ಬಿ ಎಸ್ ವೈ ಶುಂಕುಸ್ಥಾಪನೆ.. Reviewed by News10Karnataka Admin on January 07, 2021 Rating: 5

No comments:

Powered by Blogger.