.

ಬಿಜೆಪಿ ವರಿಷ್ಠರಿಗೆ ದೂರು ನೀಡಲು ಮುಂದಾದ ದೀಪಾ ಕುಡುಚಿ ಕರ್ನಾಟಕ ನೀರು ಸರಬರಾಜು ನಿರ್ದೇಶಕಿ ದೀಪಾ ಕುಡುಚಿ...ಬೆಳಗಾವಿ : ಬೆಳಗಾವಿ ನಗರ ಹಾಗೂ ಜಿಲ್ಲೆಯಲ್ಲಿ ಮೂಲ ಬಿಜೆಪಿಗರನ್ನ ಕಡೆಗಣಿಸಿ ನಿನ್ನೆ ಮೊನ್ನೆ ಬಂದವರಿಗೆ ಮಣೆ ಹಾಕಲಾಗುತ್ತಿದೆ ಎಂದು ಮಾಜಿ‌ ಶಾಸಕ ಸಂಜಯ್ ಪಾಟೀಲ ಹಾಗೂ ಬಿಜೆಪಿ ಮುಖಂಡೆ ಡಾ.ಸೋನಾಲಿ ಸರ್ನೊಬತ್ ವಿರುದ್ದ ದೀಪಾ ಕುಡುಚಿ ಗಂಭೀರ ಆರೋಪ ಮಾಡಿದ್ದಾರೆ.ಸದ್ಯ ದೀಪಾ ಕುಡುಚಿಯವರು ಕರ್ನಾಟಕ ನೀರು ಸರಬರಾಜು ನಿರ್ದೇಶಕಿಯಾಗಿರುವ ಇವರು ಪಕ್ಷದಲ್ಲಿ ಮೂಲ ವಲಸೆ ಬಿಜೆಪಿಗರರಿಗೆ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪ ಮಾಡಿದ್ದಾರೆ.ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ  ಮಾತನಾಡಿದ ಅವ್ರು,ಗ್ರಾಮೀಣ ಕ್ಷೇತ್ರಕ್ಕೆ ಸಂಬಂಧ ಇಲ್ಲದವರನ್ನ ಖಾನಾಪುರ ಮಹಿಳಾ ಘಟಕದ ಅಧ್ಯಕ್ಷೆಯನ್ನಾಗಿ ಮಾಡಿದ್ದಾರೆ.ಡಾ.ಸೋನಾಲಿ ಸರ್ನೊಬತ್ ಅವ್ರು,ಪಕ್ಷಕ್ಕೆ ನಿನ್ನೆ ಮೊನ್ನೆ ಬಂದಿದ್ದಾರೆ.ಅವರು ಪಕ್ಷದಲ್ಲಿ ಸಾಕಷ್ಟು ಅಧಿಕಾರ ಅನುಭವಿಸಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ನಾನು ಕೂಡ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯ ಆಕಾಂಕ್ಷೆ ಈ ಕುರಿತು ಯಾವ ಯಾವ ನಾಯಕರನ್ನ ಭೇಟಿ ಮಾಡಬೇಕೋ ಭೇಟಿ ಮಾಡಿ ಆಗಿದೆ.ಹೀಗಾಗಿ ಇಂದು ಬೆಳಗಾವಿಯಲ್ಲಿ ಜನಸೇವಕ ಸಮಾವೇಶದ ಕಾರ್ಯಕ್ರಮಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸುತ್ತಿದ್ದಾರೆ.ನಮಗೆ ಎರ್ ಪೋರ್ಟ್ ನಿಲ್ದಾಣದಲ್ಲಿ ಮುಖ್ಯಸ್ಥೆ ಎಂದು ನೇಮಕ ಮಾಡಿದ್ದರೂ ಮೂಲ ಬಿಜೆಪಿಗರನ್ನ ಕಡೆಗಣಿಸಿ ಸಂಜಯ್ ಪಾಟೀಲ್ ಅವರು ರಾತ್ರೋ ರಾತ್ರಿ ಪಟ್ಟಿ ಬದಲಾವಣೆ ಮಾಡಿದ್ದಾರೆ.ಹಾಗಾಗಿ ಈ ಕುರಿತು ವರಿಷ್ಠರಿಗೆ ದೂರು ನೀಡಲಾಗುವುದು ಎಂದು ಆಕ್ರೋಶ ಹೊರಹಾಕಿದ್ದಾರೆ...


ಬಿಜೆಪಿ ವರಿಷ್ಠರಿಗೆ ದೂರು ನೀಡಲು ಮುಂದಾದ ದೀಪಾ ಕುಡುಚಿ ಕರ್ನಾಟಕ ನೀರು ಸರಬರಾಜು ನಿರ್ದೇಶಕಿ ದೀಪಾ ಕುಡುಚಿ... ಬಿಜೆಪಿ ವರಿಷ್ಠರಿಗೆ ದೂರು ನೀಡಲು ಮುಂದಾದ ದೀಪಾ ಕುಡುಚಿ ಕರ್ನಾಟಕ ನೀರು ಸರಬರಾಜು ನಿರ್ದೇಶಕಿ ದೀಪಾ ಕುಡುಚಿ... Reviewed by News10Karnataka Admin on January 16, 2021 Rating: 5

No comments:

Powered by Blogger.