ಅಬಕಾರಿ ಸಚಿವ ರಾಜಿನಾಮೆ ಕೊಟ್ಟಿದ್ದೆಕೆ, ರಾಜಿನಾಮೆ ಕೊಡಲು ಅವರೆ ಖೆಡ್ಡಾಕೆ ಬಿದ್ದಿದ್ದಾರೆ..ಯಾವ ಖೆಡ್ಡಾ ಅಂತಿರಾ...?
ಕೋಲಾರ : ಇನ್ನೇನು ಕೆಲವು ಗಂಟೆಗಳಲ್ಲಿ ಸಚಿವ ಸಂಪುಟ ವಿಸ್ತರಣೆ ಆಗಲಿದೆ.ಈಗಾಗಲೇ ಬಿಜೆಪಿ ಹೈಕಮಾಂಡ ಎಳು ಜನ ಶಾಸಕರನ್ನ ಮಂತ್ರಿ ಮಾಡಲು ಒಪ್ಪಿಗೆ ಸೂಚಿಸಿದ ಬೆನ್ನಲ್ಲೆ ಸಚಿವ ಹೆಚ್.ನಾಗೇಶ ಅವರ ರಾಜೀನಾಮೆ ಪಡೆದಿದೆ.ಸಿಎಂ ಬಿಎಸ್ ಯಡಿಯೂರಪ್ಪ ನಾಗೇಶ್ ಅವರಿಂದ ರಾಜೀನಾಮೆ ಪಡೆದುಕೊಂಡಿದ್ದಾರೆ. ಆದ್ರೆ ಕೋಲಾರದ ಜನಸೇವಾ ಕಾರ್ಯಕ್ರಮದ ಫ್ಲೆಕ್ಸ್ ಗಳಲ್ಲಿ ನಾಗೇಶ್ ಅವರ ಪೋಟೊ ಮಾತ್ರ ಮಿಂಚುತ್ತಿದೆ.ಇವರ ರಾಜೀನಾಮೆ ಪಡೆದುಕೊಳ್ಳಲು ಹಲವು ಕಾರಣಗಳು ಸಿಗುತ್ತಿದ್ದು,ಅದರಲ್ಲಿ ಕೋಲಾರ ಉಸ್ತುವಾರಿ ಸಚಿವರಾಗಿ 16 ತಿಂಗಳ ಆಡಳಿತ ನಡೆಸಿದ್ರು,ಅಧಿಕಾರಿಗಳ ಜೊತೆ ಸಮನ್ವಯತೆ ಇರಲಿಲ್ಲಾ.ಅಲ್ಲದೇ ಸ್ಥಳೀಯ ಬಿಜೆಪಿ ನಾಯಕರ ವಿಶ್ವಾಸವನ್ನ ಕಳೆದುಕೊಂಡಿದ್ರು.
ಜಿಲ್ಲೆಯ ಪುರಸಭೆ,ನಗರಸಭೆ,ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಕೂಡ ಹಿಡಿದಿಲ್ಲ.ಬಿಜೆಪಿ ಸಂಸದ ಎಸ್.ಮುನಿಸ್ವಾಮಿ ವಿರುದ್ದವೂ ಬಹಿರಂಗ ವಾಗ್ದಾಳಿ ನಡೆಸಿದ್ರು.ಈ ಹಿನ್ನಲೆಯಲ್ಲಿ ಅವರ ವಿರುದ್ದ ಪ್ರಧಾನಿ ಕಚೇರಿಗೆ ದೂರು ಕೂಡ ಹೋಗಿತ್ತು.ಇನ್ನೂ ಅವರ ಅಬಕಾರಿ ಇಲಾಖೆಯಲ್ಲಿ ವರ್ಗಾವಣೆ ವಿಚಾರದಲ್ಲಿ ಭ್ರಷ್ಟಾಚಾರ ಆರೋಪ ಕೂಡ ಕೇಳಿಬಂದಿತ್ತು.ಕೆಲವೊಂದು ವಿವಾದಾತ್ಮಕ ಹೇಳಿಕೆ ನೀಡಿದ್ರು.ಮನೆ ಮನೆಗೆ ಮದ್ಯ ಕೊಡುವ ವಿವಾದಿತ ಹೇಳಿಕೆ ಗಳು ಸರ್ಕಾರಕ್ಕೆ ಮುಜುಗರ ತರೆಸಿತ್ತು.ಹೀಗಾಗಿ ಅವರು ಜಿಲ್ಲೆಯ ಉಸ್ತುವಾರಿಯಾಗಿ ಜಿಲ್ಲೆಯಾದ್ಯಂತ ಓಡಾಟ ನಡೆಸೋದು ಬಿಟ್ಟು ಕೇವಲ ಸ್ವಕ್ಷೇತ್ರ ಮುಳಬಾಗಿಲಗೆ ಮಾತ್ರ ಜಿಲ್ಲೆಗೆ ಬಂದಾಗ ಹೋಗ್ತಿದ್ರು.ಹೀಗಾಗಿ ಅವರ ರಾಜೀನಾಮೆಯಿಂದ ಸ್ಥಳೀಯ ನಾಯಕರು ಅವರ ಪರ ಸಮರ್ಥನೆ ಕೂಡ ಮಾಡಿಕೊಳ್ತಿಲ್ಲಾ.ಇವೆಲ್ಲವೂ ಹೆಚ್.ನಾಗೇಶ್ ಅವರ ರಾಜೀನಾಮೆಗೆ ಮುಳುವಾಗಿದೆ ಎನ್ನಬಹುದು...
ಅಬಕಾರಿ ಸಚಿವ ರಾಜಿನಾಮೆ ಕೊಟ್ಟಿದ್ದೆಕೆ, ರಾಜಿನಾಮೆ ಕೊಡಲು ಅವರೆ ಖೆಡ್ಡಾಕೆ ಬಿದ್ದಿದ್ದಾರೆ..ಯಾವ ಖೆಡ್ಡಾ ಅಂತಿರಾ...?
Reviewed by News10Karnataka Admin
on
January 13, 2021
Rating:

No comments: