.

ಸಚಿವ‌ ಸಂಪುಟ ವಿಸ್ತರಣೆ, ನಾಗೇಶ್ ಔಟ್, ಯೋಗಿಶ್ವರ ಇನ್..ಹಲವರ ಅಸಮಾಧಾನ...

ಬೆಂಗಳೂರು :  ಬಹು ನಿರೀಕ್ಷಿತ ಸಂಪುಟ ವಿಸ್ತರಣೆಗೆ ಸಮಯ ನಿಗಿದಿಯಾಗಿದೆ.ಇಂದು ಸಂಜೆ ರಾಜಭವನದಲ್ಲಿ ಎಳು ಜನ ಶಾಸಕರು ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ.ಹಲವು ದಿನಗಳಿಂದ ಚರ್ಚೆಯಲ್ಲಿದ್ದ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್ ಆಗಿದ್ದು,ವಲಸಿಗರು ಹಾಗೂ ಮೂಲ ಶಾಸಕರ ನಡುವೆ ಸಮತೋಲನ ಕಾಪಾಡಿಕೊಳ್ಳಲು ಸಿಎಂ ಬಿ.ಎಸ್‌.ಯಡಿಯೂರಪ್ಪ ಕಸರತ್ತು ನಡೆಸಿದ್ದಾರೆ.ಈಗಾಗಲೇ ಎಳು ಜನ ಶಾಸಕರ ಹೆಸರು ಫೈನಲ್ ಆಗಿದ್ದು,ಇಂದು ಸಂಜೆ ನಡೆಯುವ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.
ಇದರ ಬೆನ್ನಲೆ ಈಗ ಅಸಮಾಧಾನ ಕೂಡ ಭುಗಿಲೆದ್ದೆಳುವ ಸಾಧ್ಯತೆ ಕೂಡ ಹೆಚ್ಚಾಗಿದೆ.ಮೊದಲು ಸಿಎಂ ಯಡಿಯೂರಪ್ಪ ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಅವರಿಗೆ ಸಚಿವರನ್ನಾಗಿ ಮಾಡುತ್ತೇನೆ ಎಂದು ಮಾತು ಕೊಟ್ಟಿದ್ರು.ಆದ್ರೆ ಈಗ ಹೈಕಮಾಂಡ್ ನಿಂದ ಅವರಿಗೆ ಗ್ರೀನ್ ಸಿಗ್ನಲ್ ದೊರೆಯದ ಹಿನ್ನಲೆ ಅವರು ಕೂಡ ಅಸಮಾಧಾನ ಹೊರಹಾಕುವ ಸಾಧ್ಯತೆ ದಟ್ಟವಾಗಿದೆ.ಉಪ ಚುನಾವಣೆ ಸಂದರ್ಭದಲ್ಲಿ ಮತ ಚಲಾವಣೆ ಟೈಂ ನಲ್ಲಿ ಜನತೆಗೆ ಮುನಿರತ್ನ ಅವರನ್ನ ಸಚಿವರನ್ನಾಗಿ ಮಾಡುತ್ತೇನೆ ಎಂದು ಮಾತು ನೀಡಿದ್ರು.ಅದರಂತೆ ಕಳೆದ ತಡರಾತ್ರಿ ವರೆಗೆ ಅವರಿಗೆ ಸಚಿವ ಸ್ಥಾನ ಕೊಡಿಸುವ ನಿಟ್ಟಿನಲ್ಲಿ ಸಿಎಂ ಹೈಕಮಾಂಡ ನಲ್ಲಿ ಒತ್ತಾಯ ಮಾಡಿದ್ರು.

ಆದ್ರೆ ಅಲ್ಲಿಂದ ಯಾವುದೇ ಸೂಚನೆ ಬರದ ಹಿನ್ನಲೆ ಸಿಎಂ ಕೂಡ ಹೈಕಮಾಂಡ ಮೇಲೆ ಮುನಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.ಈಗಾಗಲೇ ಮುನಿರತ್ನ ಅವರನ್ನ ಸಮಾಧಾನ ಪಡಿಸಲು ಮೂವರು ಸಚಿವರು ಹರಸಾಹಸ ಪಡುತ್ತಿದ್ದಾರೆ ಎನ್ನಲಾಗುತ್ತಿದೆ.ಈಗಾಗಲೇ ಉಮೇಶ್ ಕತ್ತಿ,ಎಸ್.ಅಂಗಾರ,ಆರ್.ಶಂಕರ್,ಎಂಟಿಬಿ ನಾಗರಾಜ್,ಮುರಗೇಶ್ ನಿರಾಣಿ,ಅರವಿಂದ ಲಿಂಬಾವಳಿ ಹಾಗೂ ಸರ್ಕಾರ ರಚನೆಗೆ ಪ್ರಮುಖ ಪಾತ್ರ ವಹಿಸಿದ್ದ ಸಿ.ಪಿ.ಯೋಗೇಶ್ವರ ಅವರ ಹೆಸರು ಅಂತಿಮವಾಗಿದೆ.

ಆದ್ರೆ ಮುನಿರತ್ನ ಹೆಸರು ಇಲ್ಲದೆ ಇರುವುದು ಸಿಎಂ ಗೆ ಕೂಡ  ಅಸಮಾಧಾನ ಹೊಂದಿದ್ದಾರೆ.ಇಂದು ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಬೆಂಗಳೂರಿಗೆ ಆಗಮಿಸಿದ ನಂತರ ಎಳು ಜನ ಶಾಸಕರ ಹೆಸರು ಅಂತಿಮಗೊಳ್ಳಲಿದೆ.ಅಲ್ಲದೆ ಕೊನೆ ಕ್ಷಣದಲ್ಲಿ ಮುನಿರತ್ನ ಅವರ ಹೆಸರು ಬಂದರು ಬರಬಹುದು ಎನ್ನಲಾಗುತ್ತಿದೆ.ಇದು ಅಲ್ಲದೇ ಸಚಿವರಾದ ಎಚ್.ನಾಗೇಶ್ ಹಾಗೂ ಶ್ರೀಮಂತ ಪಾಟೀಲ ಅವರನ್ನ ಸಂಪುಟದಿಂದ ಕೈಬಿಡಲಾಗುತ್ತದೆ ಎಂಬ ಮಾತು ಕೇಳಿಬಂದಿದ್ದು,ಅವ್ರು ಕೂಡ ಸಿಎಂ ಭೇಟಿ ಮಾಡಲಿದ್ದಾರೆ.ಇಂದು ಎಳು ಅಥವಾ ಎಂಟು ಜನ ಸಚಿವ ಸಂಪುಟ ಸೇರಲಿದ್ದು ಅದ್ರಲ್ಲಿ ಎಂಟನೆಯವರು ಯಾರು ಅನ್ನೋದು ಕೂಡ ಸದ್ಯ ಭಾರೀ ಕೂತುಹಲ ಮೂಡಿಸಿದೆ...
ಸಚಿವ‌ ಸಂಪುಟ ವಿಸ್ತರಣೆ, ನಾಗೇಶ್ ಔಟ್, ಯೋಗಿಶ್ವರ ಇನ್..ಹಲವರ ಅಸಮಾಧಾನ... ಸಚಿವ‌ ಸಂಪುಟ ವಿಸ್ತರಣೆ, ನಾಗೇಶ್ ಔಟ್, ಯೋಗಿಶ್ವರ ಇನ್..ಹಲವರ ಅಸಮಾಧಾನ... Reviewed by News10Karnataka Admin on January 12, 2021 Rating: 5

No comments:

Powered by Blogger.