.

ಬೆಳಗಾವಿಯ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ರಾಜು ಚಿಕ್ಕನಗೌಡರ ಇನ್ನಿಲ್ಲ..ಸುರೇಶ ಅಂಗಡಿ ಪರಮಾತ್ಮ....ಬಾರದಲೋಕಕ್ಕೆ....

ಬೆಳಗಾವಿ : ಭಾರತೀಯ ಜನತಾ ಪಾರ್ಟಿಯ ಬೆಳಗಾವಿ ಗ್ರಾಮೀಣ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿದ್ದ ಶ್ರೀ ರಾಜು ಚಿಕ್ಕನಗೌಡರ‌ ಅಕಾಲಿಕ ನಿಧನವಾಗಿದ್ದಾರೆ..ವಿದ್ಯಾರ್ಥಿ ದೆಸೆಯಲ್ಲಿಯೇ ನಾಯಕತ್ವ ಬೆಳೆಸಿಕೊಂಡು ಎಬಿವಿಪಿಯ‌ ಮುಂಚೂಣಿ ನಾಯಕರಾಗಿದ್ದ ರಾಜು, ರಾಣಿ ಚೆನ್ನಮ್ಮ ವಿವಿಯ ಸಿಂಡಿಕೇಟ್ ಸದಸ್ಯರಾಗಿ 2 ಬಾರಿ ನೇಮಕಗೊಂಡು ವಿಶ್ವವಿದ್ಯಾಲಯದ ಉನ್ನತಿಗಾಗಿ ಕೆಲಸ‌ ಮಾಡಿದ್ದರು. 
ಭಾರತೀಯ ಜನತಾ ಪಾರ್ಟಿಯ ಯುವ ಮೋರ್ಚಾದ ಸಕ್ರಿಯ ಕಾರ್ಯಕರ್ತರಾಗಿದ್ದ ರಾಜು, ಬೆಳಗಾವಿ ಗ್ರಾಮೀಣ ಜಿಲ್ಲಾ ಅಧ್ಯಕ್ಷರಾಗಿ, ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಉತ್ತಮ ಸಂಘಟಕರಾಗಿದ್ದ ರಾಜು, ದೇಶದ ಮತ್ತು ರಾಜ್ಯದ ಅಭ್ಯುದಯದ ಕನಸನ್ನು ಕಟ್ಟಿಕೊಂಡು ಕುಟುಂಬದ ಪೊರೆ ಕಳಚಿ ಅವಿವಾಹಿತರಾಗಿ, ಪಕ್ಷದ ಕೆಲಸ‌ ಮಾಡುತ್ತಿದ್ದರು. ಸ್ನೇಹಜೀವಿಯಾಗಿದ್ದ ಇವರು ಉತ್ತಮ ವಾಗ್ಮಿಯೂ ಆಗಿದ್ದರು. 2020ರ ಕಹಿ ಘಟನೆಗಳನ್ನು ಮರೆತು ಹೊಸ ವರ್ಷಕ್ಕೆ ಕಾಲಿಟ್ಟ‌ ಘಳಿಗೆಯಲ್ಲಿಯೇ ಇವರ ಅಕಾಲಿಕ ಮರಣದ ಸುದ್ದಿ ಬರಸಿಡಿಲಿನಂತೆ ಬಂದಿದೆ  ಭವಿಷ್ಯದಲ್ಲಿ ರಾಜ್ಯ ಮಟ್ಟದ ನಾಯಕರಾಗಿ ಎಲ್ಲಾ ಅವಕಾಶಗಳಿತ್ತು. ಅಕಾಲಿಕವಾಗಿ ಅವರನ್ನು ಕಳೆದುಕೊಂಡಿದ್ದೇವೆ ಭಗವಂತ, ಅವರ ಮೃತ ಆತ್ಮಕ್ಕೆ ಚಿರಶಾಂತಿ ನೀಡಲಿ ಮತ್ತು ಭಾಜಪ ಕಾರ್ಯಕರ್ತರೆಲ್ಲರಿಗೂ ಇವರ ಅಗಲಿಕೆಯ ಶೋಕವನ್ನು ಭರಿಸುವ ಶಕ್ತಿಯನ್ನು ನೀಡಲೆಂದು ಬಿಜೆಪಿ ನಾಯಕರುಗಳು ದೇವರಲ್ಲಿ ಪ್ರಾರ್ಥನೆ ಮಾಡಿಕ್ಕೊಂಡಿದ್ದಾರೆ..

ಬೆಳಗಾವಿಯ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ರಾಜು ಚಿಕ್ಕನಗೌಡರ ಇನ್ನಿಲ್ಲ..ಸುರೇಶ ಅಂಗಡಿ ಪರಮಾತ್ಮ....ಬಾರದಲೋಕಕ್ಕೆ.... ಬೆಳಗಾವಿಯ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ರಾಜು ಚಿಕ್ಕನಗೌಡರ ಇನ್ನಿಲ್ಲ..ಸುರೇಶ ಅಂಗಡಿ ಪರಮಾತ್ಮ....ಬಾರದಲೋಕಕ್ಕೆ.... Reviewed by News10Karnataka Admin on January 01, 2021 Rating: 5

No comments:

Powered by Blogger.