ಬಂದೆ ಬಿಡ್ತು ಧಾರವಾಡಕ್ಕೆ ಕೊರೊನಾ ಲಸಿಕೆ, ಧಾರವಾಡ ಜನರೆ ಇನ್ನೆನೂ ಹೆದರಿಕ್ಕೊಳ್ಳಬೇಡಿ..ಆದ್ರೂ ಮಾಸ್ಕ ಹಾಕದೆ ತಿರುಗಾಡಬೇಡಿ...
ಧಾರವಾಡ : ಧಾರವಾಡ ನಗರಕ್ಕೆ ಕೊರೊನ ಲಸಿಕೆ ಆಗಮಿಸಿದೆ.ಬೆಳಗಾವಿಯಿಂದ ಧಾರವಾಡಕ್ಕೆ ಆಗಮಿಸಿದ ವ್ಯಾಕ್ಸಿನ್ ವಾಹನ ಡಿಎಚ್ಓ ಕಚೇರಿ ಜಿಲ್ಲಾ ಉಗ್ರಾಣ ಕೇಂದ್ರದತ್ತ ಬರುತ್ತಿದ್ದಂತೆ ಹಾಡಿನ ಮುಖಾಂತರ ಸ್ವಾಗತವನ್ನ ಮಾಡಿಕ್ಕೊಳ್ಳಲಾಯಿತು ,
ಜಿಲ್ಲಾ ಆರೋಗ್ಯ ಅಧಿಕಾರಿ ಯಶವಂತ ಮದಿನಕರ , ಜಿಲ್ಲಾಧಿಕಾರಿ ನಿತೇಶ ಪಾಟೀಲ ಸಮ್ಮುಖದಲ್ಲಿ ವ್ಯಾಕ್ಸಿನ್ ವಾಹನವನ್ನ ಸ್ವಾಗತಿಸಿಕೊಂಡಿದ್ದಾರೆ.ಬಂತು ಬಂತು ಔಷಧ ಎಂದು ಹಾಡಿನ ಮೂಲಕ ಧಾರವಾಡ ಆರೋಗ್ಯ ಇಲಾಖೆ ಬರಮಾಡಿಕೊಂಡಿದೆ.
ಅಲ್ಲದೇ ಆರತಿ ಎತ್ತುವ ಮೂಲಕ ಮುತೈದಿಯರು ಸ್ವಾಗತಿಸಿಕೊಂಡಿದ್ದು,ಸುಮಾರು 11.000 ಕೊವಿಡ್ ಶಿಲ್ ಡೋಸ್ ನ್ನ ತಂದಿದ್ದು ಧಾರವಾಡ ಜಿಲ್ಲಾ ಉಗ್ರಾಣ ಕೇಂದ್ರದಲ್ಲಿ ಇಡಲಾಗಿದೆ ಇನ್ನು ಲಸಿಕೆಯನ್ನ 7 ಕೇಂದ್ರಗಳಿಗೆ ನಾಳೆ ಮತ್ತು ನಾಡಿದ್ದು ಸ್ಥಳಾಂತರಿಸಿ ಬಳಿಕ ಜನೇವರಿ 16 ನೇಯ ತಾರಿಖಿಗೆ ಲಸಿಕೆಯನ್ನ ಕೊಡಲು ಪ್ರಾರಂಭ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದ್ದಾರೆ..
ಕೊವಿಡಿಶಿಲ್ ಲಸಿಕೆ ಬರುತ್ತಿದ್ದಂತೆ ಎಲ್ಲರೂ ಹರ್ಷವ್ಯಕ್ತ ಪಡಿಸಿದ್ದಾರೆ..ಇನ್ನು ಜಿಲ್ಲಾ ಆರೋಗ್ಯಾಧಿಕಾರಿ ಯಶವಂತ ಮದಿನಕರ, ಲಸಿಕೆ ಹಂಚಲು ವಹಿಸಿಕ್ಕೊಂಡ ಡಾ.ಹೊನಕೇರಿ, ಜಿಲ್ಲಾಧಿಕಾರಿ ನಿತೇಶ ಪಾಟೀಲ ಉಪವಿಭಾಗಾದಿಕಾರಿಗಳು ಆರೋಗ್ಯ ಇಲಾಖೆಯ ಎಲ್ಲ ಸಿಬ್ಬಂದಿಗಳು ಉಪಸ್ಥಿತರಿದ್ದರು..
ಬಂದೆ ಬಿಡ್ತು ಧಾರವಾಡಕ್ಕೆ ಕೊರೊನಾ ಲಸಿಕೆ, ಧಾರವಾಡ ಜನರೆ ಇನ್ನೆನೂ ಹೆದರಿಕ್ಕೊಳ್ಳಬೇಡಿ..ಆದ್ರೂ ಮಾಸ್ಕ ಹಾಕದೆ ತಿರುಗಾಡಬೇಡಿ...
Reviewed by News10Karnataka Admin
on
January 13, 2021
Rating:

No comments: