ಮಾಜಿ ಸಚಿವ ವಿನಯ ಕುಲಕರ್ಣಿ ಅವರು ಯೋಗೀಶ್ ಗೌಡ ಕಲೆ ಕೇಸ್ ನಲ್ಲಿ ಕಳೆದ ಎರಡು ತಿಂಗಳಿಂದ ಹಿಂಡಲಗಾ ಜೈಲಿನಲ್ಲಿದ್ದಾರೆ..ಸದ್ಯ ಅವರ ಜಾಮಿನು ಅರ್ಜಿ ವಿಚಾರಣೆಯು ಧಾರವಾಡ ಹೈಕೋರ್ಟ ನಲ್ಲಿ ನಡೆದಿದೆ..ಇದೆ ಜನೇವರಿ 6 ರಂದು ಅರ್ಜಿ ವಿಚಾರಣೆ ನಡೆಯಲಿದೆ..
ಪ್ರಯುಕ್ತವಾಗಿ ಮಾಜಿ ಸಚಿವ ವಿನಯ ಕುಲಕರ್ಣಿ ಅವರು ಆದಷ್ಟೂ ಬೇಗ ಯೋಗೀಶ್ ಗೌಡ ಕೊಲೆ ಕೇಸ್ ನಿಂದ ಕ್ಲಿನ್ ಚಿಟ್ ತಗೊಂಡು ಬಿಡುಗಡೆಯಾಗಿ ಬರಲಿ ಎಂದು ಧಾರವಾಡ ಜಿಲ್ಲೆಯಲ್ಲಿ ಕಮಲಾಪೂರದ ಕಾಂಗ್ರೆಸ್ ಕಾರ್ಯಕರ್ತರು ಪತ್ರೇಶ್ವರ ಮಠದಲ್ಲಿ , ಅಯ್ಯಪ್ಪ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು,
ಇನ್ನು ಇದೆ ವೇಳೆ ಮಾತನಾಡಿದ ಕಾಂಗ್ರೆಸ್ ಕಾರ್ಯಕರ್ತರು ಪತ್ರೇಶ್ವರ ದೇವರ ಮೇಲೆ ನಮಗೆ ನಂಬಿಕೆ ಇದೆ ,ದೇವರ ಆರ್ಶಿವಾದ ಅವರ ಮೇಲೆ ಇದೆ ಆದಷ್ಟು ಕೋರ್ಟ ನಲ್ಲಿ ಜಾಮಿನು ಸಿಗಲಿ ಮತ್ತೆ ನಮ್ಮ ಕ್ಷೇತ್ರದಲ್ಲಿ ಕೆಲಸವನ್ನ ಮಾಡಲಿ ಎಂದು ಕಾಂಗ್ರೆಸ್ ಅಭಿಮಾನಿಗಳು ಇಂದು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿಕ್ಕೊಂಡರು...ಇನ್ನು ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಕಮಲಾಪೂರದ ಎಲ್ಲ ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿದ್ದರು..
ಮಾಜಿ ಸಚಿವ ವಿನಯ ಕುಲಕರ್ಣಿ ಬಿಡುಗಡೆಯಾಗಲೆಂದು ದೇವರಲ್ಲಿ ವಿಶೇಷ ಪ್ರಾರ್ಥನೆ...ಧಾರವಾಡದ ಕಮಲಾಪೂರ ರೈತರು...
Reviewed by News10Karnataka Admin
on
January 04, 2021
Rating:

No comments: