ಬೆಳಗಾವಿ : ಕೊರೊನಾ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಪರದಾಡಿದ ಘಟನೆ ರಾಮದುರ್ಗದಲ್ಲಿ ನಡೆದಿದೆ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕ ಆಸ್ಪತ್ರೆಯಲ್ಲಿ ಇಂದು ಸಾಕಷ್ಟು ವಿದ್ಯಾರ್ಥಿಗಳು ಕೋವಿಡ ಪರೀಕ್ಷೆಗೆ ಆಗಮಿಸಿದ್ದರು.
ಆದರೆ ಅಧಿಕಾರಿಗಳು ಕೋವಿಡ ಪರೀಕ್ಷೆ ಮಾಡದೇ ವಿದ್ಯಾರ್ಥಿಗಳನ್ನ ಮರಳಿ ಕಳಿಸಿದ್ದಾರೆ. ಮೇಲಾಧಿಕಾರಿಗಳು ಹೇಳೋವರೆಗೂ ಕೋವಿಡ್ ಟೆಸ್ಟ್ ಮಾಡಲ್ಲ ಎಂದ ರಾಮದುರ್ಗ ತಾಲೂಕಾಡಳಿತ..
ಶಾಲೆ ಪ್ರಾರಂಭವಾದ ಹಿನ್ನಲೆ ವಿದ್ಯಾರ್ಥಿಗಳ ಕೋವಿಡ ಪರೀಕ್ಷೆ ಮಾಡಿಸಿಕೊಳ್ಳಲು ಬಂದಿದ್ದರು ಅಲ್ಲದೇ ಕೆಲ ವಿದ್ಯಾರ್ಥಿಗಳು ಆರ್ಮಿ ಕೋಚಿಂಗ್ ತೆರಳುತಿದ್ದರು ಅವರಿಗೆ ಕೋವಿಡ ಪರೀಕ್ಷೆ ಕಡ್ಡಾಯ ಮಾಡುವುದರಿಂದ ಕೋವಿಡ್ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳು ಅಧಿಕಾರಿಗಳ ವಿರುದ್ಧ ಆಕ್ರೋಷ ವ್ಯಕ್ತಪಡಿಸಿದ್ರು.
ಇನ್ನು ಅಧಿಕಾರಿಗಳಿಗೆ ಈ ಕುರಿತು ಕೇಳಿದ್ರೆ ನಮಗೆ ಯಾವುದೇ ಮಾಹಿತಿ ಇಲ್ಲ ಮೇಲಾಧಿಕಾರಿಗಳಿಂದ ಯಾವುದೇ ಸೂಚನೆಗಳ ಎಂದು ಹಾರಿಕೆ ಉತ್ತರ ನೀಡಿ ಜಾರಿಕೊಂಡಿದ್ದಾರೆ
ಕೊರೊನಾ ಟೆಸ್ಟಗೆ ಬಂದ ವಿಧ್ಯಾರ್ಥಿಗಳಿಗೆ ಅಧಿಕಾರಿಗಳು ಹೇಳಿದ್ದೆನೂ ಗೊತ್ತಾ...?
Reviewed by News10Karnataka Admin
on
January 03, 2021
Rating:

No comments: