ರೈತರ ಸಂಕಷ್ಟವನ್ನ ಎಳೆಎಳೆಯಾಗಿ ಬಿಚ್ಚಿಟ್ಟ ರೈತ ಮಹಾಂತೇಶ..ಅಷ್ಟಕ್ಕೂ ಅವರು ಹೇಳಿದ್ದು ಟೊಮೆಟೋ ಬೆಳೆದ ಬೆಲೆಯ ಅವಲೋಕಿಸಿದ ಅನ್ನದಾತ..
ಬೆಳವಡಿ : ಒಂದು ಎಕರೆಯಲ್ಲಿ ಈ ಬಾರಿ ಸಾಗರ ತಳಿ ಟೊಮೆಟೊ ನಾಟಿ ಮಾಡಿದ್ದು, ಎಕರೆಗೆ ₹35 ಸಾವಿರ ವೆಚ್ಚವಾಗಿದೆ. ಎಂದರು. ‘ಒಂದು ಬಾಕ್ಸ್ನಲ್ಲಿ 25 ಕೆ.ಜಿಯಂತೆ ಟೊಮೆಟೊ ಕ್ರಿಯೇಟ್ ಮಾಡಿ 30 ಕಿಲೋಮೀಟರ್ ದೂರದ ಧಾರವಾಡ ಮಾರುಕಟ್ಟೆಯಲ್ಲಿ ಹೋದರೆ ಒಂದು ಕ್ರಿಯೇಟ್ ಮಾರಾಟಕ್ಕೆ 50ರಿಂದ 60 ಇದೆ ಹಮಾಲಿ, ₹10 ಕಮಿಷನ್, ₹10 ಸಾಗಣೆ ವೆಚ್ಚ, ₹ 40 ಒಂದು ಬಾಕ್ಸ್ ಟೊಮೆಟೊ ಬಿಡಿಸಿದ ಕೂಲಿ.
ಇನ್ನು ನಮ್ಮ ಕೈಯಿಂದಲೇ ಕೊಡಬೇಕು ಹೀಗೆ ಆದರೆ ರೈತ ಹೇಗೆ ಬದುಕುವುದು ಸಾಧ್ಯ ಮೂರ್ನಾಲ್ಕು ತಿಂಗಳು ಬೆಳೆದು ಬೆಳೆ ಬೆಲೆ ಇಲ್ಲದೆ ರೋಡಿಗೆ ಚೆಲ್ಲುವಂತಹ ಪರಿಸ್ಥಿತಿ ರೈತನ ದಾಗಿದೆ ಹೀಗಾದರೆ ರೈತ ಬದುಕುವುದು ತುಂಬಾ ಕಷ್ಟದ ಕೆಲಸ ಈಗಿನ ಸರ್ಕಾರಗಳು ಯಾವುದೇ ಕೃಷಿ ಉತ್ಪನ್ನಗಳಿಗೆ ನಿರ್ದಿಷ್ಟ ಬೆಲೆ ನಿಗದಿ ಮಾಡುವವರೆಗೆ ರೈತನ ಪರಿಸ್ಥಿತಿ ಯಾವತ್ತಿಗೂ ಸುಧಾರಿಸಲು ಸಾಧ್ಯವಿಲ್ಲ.
ಇನ್ನೂ ಹೀಗೆ ಮುಂದುವರೆದರೆ ಕೃಷಿಯನ್ನು ಮುಂದುವರಿಸಿಕೊಂಡು ಹೋಗುವುದು ರೈತರಿಗೆ ಆಗದ ವಿಷಯ ಮಾಡಿದಂತ ಖರ್ಚು ಕೂಡ ಅವನ ತಲೆ ಮೇಲೆ ಸಾಲವಾಗಿ ಉಳಿಯುತ್ತಿದೆ ಇದು ಯಾರ ಕಣ್ಣಿಗೂ ಕೂಡ ಕಾಣುತ್ತಿಲ್ಲ ಇದು ಹೀಗೆ ಮುಂದುವರೆದರೆ ಒಂದು ದಿನ ಮಣ್ಣು ತಿನ್ನಬೇಕಾಗುತ್ತದೆ. ನೊಂದ ರೈತ.
ರೈತರ ಸಂಕಷ್ಟವನ್ನ ಎಳೆಎಳೆಯಾಗಿ ಬಿಚ್ಚಿಟ್ಟ ರೈತ ಮಹಾಂತೇಶ..ಅಷ್ಟಕ್ಕೂ ಅವರು ಹೇಳಿದ್ದು ಟೊಮೆಟೋ ಬೆಳೆದ ಬೆಲೆಯ ಅವಲೋಕಿಸಿದ ಅನ್ನದಾತ..
Reviewed by News10Karnataka Admin
on
January 08, 2021
Rating:

No comments: