.

ತಾವು ಕಲಿತ ಶಾಲೆಗೆ ಆ ವಿಧ್ಯಾರ್ಥಿಗಳು ಎನ್ ಮಾಡಿದ್ದಾರಾ ಗೊತ್ತಾ ಆ ಶಾಲೆಗೆ...!
 
ಕಿತ್ತೂರು :  ಚನ್ನಮ್ಮನ ಕಿತ್ತೂರು ಎಂದ ತಕ್ಷಣ ಕಿತ್ತೂರು ಚನ್ನಮ್ಮಾಜಿ, ಕೋಟೆ ಹಾಗೂ ಐತಿಹಾಸಿಕ ಕಿತ್ತೂರು ಉತ್ಸವ ಎಲ್ಲರಿಗೂ ನೆನಪಾಗುವುದು ಸಾಮಾನ್ಯ.ಆದರೆ ಇಲ್ಲಿ ಸರ್ಕಾರ  ಕೆಲಸವನ್ನು ಇಲ್ಲಿಯ ಹಳೆಯ ವಿದ್ಯಾರ್ಥಿಗಳ ಬಳಗ ಮಾಡಿದೆ. ಭಾರಿ ಮಾಸ್ಟರ್ ಪ್ಲಾನ್ ಮಾಡಿದೆ. ಶಾಲೆಗೆ ಕೋಟೆ ಮಾದರಿ ಗೋಡೆಗಳು, ಬಾಗಿಲುಗಳಿಗೆ ಮಹದ್ವಾರದ ಮೆರುಗು, ಕಿಟಕಿಗೊಂದು ಕಲಾತ್ಮಕತೆಯ ನೋಟ.. ಈ ರೀತಿಯ ಆಕರ್ಷಕ ಚಿತ್ತಾರ ಮೈಮೇಲೆ ಬರೆದುಕೊಂಡು, ಎಲ್ಲರನ್ನೂ ತನ್ನೆಡೆಗೆ ಆಕರ್ಷಿಸುತ್ತ ನಿಂತಿರುವುದು ಬೆಳಗಾವಿ ಜಿಲ್ಲೆಯ ಕಿತ್ತೂರಿನ ಶಾಸಕರ ಮತಕ್ಷೇತ್ರದ ಮಾದರಿ ಸರ್ಕಾರಿ ಶಾಲೆ. ಇದೇ ಜ. 8 ರಂದು ಬೆಳಿಗ್ಗೆ 10.30 ನವೀಕರಣಗೊಂಡ ಕಟ್ಟಡವನ್ನು ಶಾಸಕ ಮಹಾಂತೇಶ ದೊಡ್ಡಗೌಡರ ಉದ್ಘಾಟಿಸಲಿದ್ದಾರೆ.ಇಲ್ಲಿಯ ಹಳೆಯ ವಿದ್ಯಾರ್ಥಿಗಳು ಸುಮಾರು 3 ಲಕ್ಷ ಹಣದಲ್ಲಿ ಸುಮಾರು ಮೂರು ತಿಂಗಳ ಹಿಂದೆ ಶಾಲೆಗೆ ನೀಡಲು ಬಯಸಿದ್ದ ಕೋಟೆ ರೂಪದ ಕನಸು ಈಗ ಕಾರ್ಯರೂಪಕ್ಕೆ ಬಂದಿದೆ. ಗೆಳೆಯರ ಬಳಗದಲ್ಲಿ, ಈ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳಿಂದ ದುಡ್ಡು ಸೇರಿಸಲು ಒಂದು ತಂಡವಾಗಿ ಹಲವಾರು ಗೆಳೆಯರು ಕೆಲಸ ಮಾಡಿದ್ದಾರೆ. ಹಗಲಿರುಳು ಎನ್ನದೇ ಶ್ರಮಿಸಿದ್ದಾರೆ. ಅವರ ಪರಿಶ್ರಮಕ್ಕೊಂದು ಫಲ ಈಗ ದೊರೆತಿದೆ.
ಶತಮಾನದ ಶಾಲೆ ಸೋಮವಾರ ಪೇಟೆಯ ಈ ಸರ್ಕಾರಿ ಶಾಲೆಗೆ ಒಂದೂವರೆ ಶತಮಾನದ ಇತಿಹಾಸವಿದೆ. ಇಲ್ಲಿ ಓದಿದ ವಿದ್ಯಾರ್ಥಿಗಳು ಸಮಾಜದ ಹಲವಾರು ಕ್ಷೇತ್ರಗಳಲ್ಲಿ ಗೌರವದ ಹುದ್ದೆಗಳನ್ನು ಅಲಂಕರಿಸಿ, ಊರಿಗೆ ಮತ್ತು ಶಾಲೆಗೆ ಕೀರ್ತಿ ತಂದಿದ್ದಾರೆ.
ಇಂತಹ ಹಿನ್ನೆಲೆಯಿರುವ ಈ ಶಾಲೆಯ ಕಟ್ಟಡಕ್ಕೆ ಎರಡು ದಶಕದ ಹಿಂದೆ ಬಣ್ಣ ಬಳಿಯಲಾಗಿತ್ತು. ಮಳೆ, ಬಿಸಿಲಿನ ಹೊಡೆತಕ್ಕೆ ಸಿಕ್ಕು ಬಣ್ಣವೆಲ್ಲ ಮಾಸಿ ಹೋಗಿತ್ತು. ಶಾಲೆ ಪುನಃ ಅಂದಗೊಳಿಸಲು ಶಾಲೆಯ ಶಿಕ್ಷಕರ ಬಳಗ ಸಂಪರ್ಕಿಸಿದ್ದು ಹಳೇ ವಿದ್ಯಾರ್ಥಿಗಳನ್ನು. ಅವರೂ ಖುಷಿಯಿಂದ ಒಪ್ಪಿಕೊಂಡರು. ಬಣ್ಣದ ವಿಚಾರವನ್ನು ಸಂಪರ್ಕದಲ್ಲಿರುವ ಗೆಳೆಯರೊಂದಿಗೆ ಹಂಚಿಕೊಂಡರು. ಅಚ್ಚರಿ ರೀತಿಯಲ್ಲಿ ಇವರಿಗೆ ಸ್ಪಂದನ ದೊರೆಯಿತು. ವಾಟ್ಸಆ್ಯಪ್ ಬಳಗ ರಚಿಸಿಕೊಂಡು ಗೆಳೆಯರ ಸಂಖ್ಯೆಯನ್ನು ಹೆಚ್ಚಿಸಿಕೊಂಡರು. ಇದರ ಪರಿಣಾಮ, ಅವರ ಒಳ್ಳೆಯ ಆಲೋಚನೆಗೆ ದುಡ್ಡು ಹರಿದು ಬಂತು 3 ಲಕ್ಷ ವೆಚ್ಚದಲ್ಲಿ ಗೆಳೆಯರ ನೆರವಿನಿಂದ ಹಗಲಿರುಳು ಓಡಾಡಿ ಕೂಡಿಸಿದ ದುಡ್ಡಿನಲ್ಲಿ ಕೆಲಸ ಪ್ರಾರಂಭಿಸಲಾಯಿತು. 

ಸಾಮಾನ್ಯ ರೀತಿಯ ಬಣ್ಣ ಬಳಿಯದೇ ಕೋಟೆ ಮಾದರಿಯಲ್ಲೆ ಕಟ್ಟಡಕ್ಕೆ ಬಣ್ಣ ಹಚ್ಚುವ ವಿಚಾರ ಮೊಳಕೆ ಒಡೆಯಿತು. ಶಿಕ್ಷಕ ಬಳಗದವರೂ ಸಹಕಾರ ನೀಡಿದರು. ಕಲಾವಿದ ಕಿರಣ ಬಾಳೇಕುಂದರಗಿ ಸಂಪರ್ಕಿಸಲಾಯಿತು. ಕಟ್ಟಡಕ್ಕೆ ಕೋಟೆ ಮಾದರಿ ಬಣ್ಣ ನೀಡಲು ನಿರ್ಧರಿಸಲಾಯಿತು. ಒಂದೆಡೆ ದುಡ್ಡು ಸೇರಿಸುವ, ಮತ್ತೊಂದೆಡೆ ಇಡೀ ಕಟ್ಟಡ ಅಂದಗೊಳಿಸಲು ಬೇಕಾಗುವ ಕೆಲಸಗಾರರ ತರುವ ಕಾರ್ಯದಲ್ಲಿ ಮಗ್ನರಾದವರು ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ  ಪ್ರವೀಣ ಮೊರಕರ, ಉದಯ ಬೆಳವಡಿ, ಸಂತೋಷ ಗೋಂಧಳಿ, ಈರಣ್ಣ ಕಡೆಮನಿ, ಸದ್ದಾಂ ಬೆಳವಡಿ, ಶರಣಬಸವ ವಾಲಿ, ಆದಿಲ್ ಸೌದಾಗರ ಮತ್ತಿತರರು. ಒಳ್ಳೆಯ ಕೆಲಸಕ್ಕೆ ಹಳೇ ವಿದ್ಯಾರ್ಥಿಗಳು ಸಹಾಯ ಹಸ್ತ ಚಾಚಿದರು. ರೂ. 3 ಲಕ್ಷ ಅಂದಾಜು ವೆಚ್ಚದಲ್ಲಿ ಕಿತ್ತೂರು ಸಂಸ್ಥಾನದ ಕೋಟೆ ಮಾದರಿಯಲ್ಲಿ ಶಾಲೆ ಕಂಗೊಳಿಸುತ್ತಿದೆ. ಗೋಡೆಯ ಮೇಲೆ ರಾಣಿ ಚನ್ನಮ್ಮ ಮತ್ತು ಬಲಗೈ ಬಂಟ ಸಂಗೊಳ್ಳಿ ರಾಯಣ್ಣ ಭಾವಚಿತ್ರ ರಚಿಸಲಾಗುತ್ತಿದೆ.

ಒಕ್ಕಟ್ಟು ಹೇಗೆ ರಚನಾತ್ಮಕ ಕೆಲಸ ಮಾಡುತ್ತದೆ ಎಂಬುದಕ್ಕೆ ಕ್ಷೇತ್ರ ಮಾದರಿ ಶಾಲೆಯ ಈ ಹಳೇ ವಿದ್ಯಾರ್ಥಿಗಳ ಸಂಘದ ಸದಸ್ಯರೂ ಇತರರಿಗೆ ಮಾದರಿಯಾಗಿದ್ದಾರೆ...
 
ತಾವು ಕಲಿತ ಶಾಲೆಗೆ ಆ ವಿಧ್ಯಾರ್ಥಿಗಳು ಎನ್ ಮಾಡಿದ್ದಾರಾ ಗೊತ್ತಾ ಆ ಶಾಲೆಗೆ...! ತಾವು ಕಲಿತ ಶಾಲೆಗೆ ಆ ವಿಧ್ಯಾರ್ಥಿಗಳು ಎನ್ ಮಾಡಿದ್ದಾರಾ ಗೊತ್ತಾ ಆ ಶಾಲೆಗೆ...! Reviewed by News10Karnataka Admin on January 07, 2021 Rating: 5

No comments:

Powered by Blogger.