.

ನಾಲ್ಕು ದಶಕದ ಬೇಡಿಕೆ ಇಡೇರಿಸಿದ ಶಾಸಕಿ ‌ಲಕ್ಷ್ಮೀ ಹೆಬ್ಬಾಳಕರ..

4 ದಶಕಗಳ ಬೇಡಿಕೆ ಈಡೇರಿಕೆ: ಸಾರ್ಥಕತೆ ಕಂಡ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್..

ಬೆಳಗಾವಿ  : ಇಲ್ಲಿ ಎಷ್ಟು ಜನ ಸಾವು, ನೋವು ಕಂಡಿದ್ದಾರೋ ಗೊತ್ತಿಲ್ಲ. ಕಳೆದ 4 ದಶಕಗಳ ಅವರ ಕೂಗು ಅರಣ್ಯರೋಧನವಾಗಿತ್ತು. ಆದರೆ ಯಾವಾಗ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಶಾಸಕರಾಗಿ ಆಯ್ಕೆಯಾದರೋ ಅವರ ಆದ್ಯತೆಯ ಕೆಲಸಗಳಲ್ಲಿ ಇದೂ ಒಂದಾಗಿತ್ತು. ಅದು ಈಗ ಈಡೇರಿದೆ. ಗ್ರಾಮಸ್ಥರ ಕಂಗಳಲ್ಲಿ ಹರ್ಷದ ನೀರು ಜಿನುಗುತ್ತಿದ್ದರೆ, ಮನೆಯ ಮಗಳಾಗಿ ಶಾಸಕಿಯ ಹೃದಯ ಸಾರ್ಥಕತೆಯನ್ನು ಅನುಭವಿಸುತ್ತಿದೆ. ಅಪಘಾತ ವಲಯ (Accident Zone) ಎಂದೇ ಕರೆಯಲ್ಪಡುವ ಚಿನ್ನವಾರಿ ಗುಡ್ಡ (ಕೆಕೆ ಕೊಪ್ಪ) ಪ್ರದೇಶದಲ್ಲಿ ತಡೆಗೋಡೆಗಳಿರಲಿಲ್ಲ.ಈ ಪ್ರದೇಶವು ಮುಖ್ಯ ರಸ್ತೆಯ ಮೇಲಿದ್ದು, ಕೆಕೆ ಕೊಪ್ಪ, ಹಲಗಿಮರ್ಡಿ, ನಾಗೇರಹಾಳ, ನಾಗೇನಹಟ್ಟಿ, ಬಡಾಲ್ ಅಂಕಲಗಿ, ಹುಲಿಕವಿ ಮೊದಲಾದ ಗ್ರಾಮಗಳ ಜನರಿಗೆ ಸಂಪರ್ಕವನ್ನು ಕಲ್ಪಿಸುತ್ತದೆ.  
 
ಇಲ್ಲಿ ಅಪಘಾತ ಎನ್ನುವುದು ಸಾಮಾನ್ಯ ಎನ್ನುವಂತಾಗಿತ್ತು. ಕೆಲವರು ಕೈ ಕಾಲುಗಳನ್ನು ಕಳೆದುಕೊಂಡು ಕತ್ತಲೆಯ ಜೀವನವನ್ನು ಅನುಭವಿಸುತ್ತಿದ್ದಾರೆ. ಅನೇಕ ರೈತರು ಟ್ರ್ಯಾಕ್ಟರ್ ಮೂಲಕ ಕಬ್ಬನ್ನು ಸಕ್ಕರೆ ಕಾರ್ಖಾನೆಗಳಿಗೆ ಸಾಗಿಸುವ ಸಂದರ್ಭದಲ್ಲಿ ಟ್ರಾಕ್ಟರ್ ಗಳು ಉರುಳಿ ಬಿದ್ದು ಸಂಕಷ್ಟ ಅನುಭವಿಸಿದ್ದಾರೆ. 
ಕಳೆದ 40 ವರ್ಷಗಳಿಂದ ಈ ಎಲ್ಲ ಗ್ರಾಮಗಳ ಜನರ ಬಹುಮುಖ್ಯ ಬೇಡಿಕೆಯಾಗಿದ್ದ ತಡೆಗೊಡೆ ಹಾಗೂ ಸುಸಜ್ಜಿತ ರಸ್ತೆ ನಿರ್ಮಾಣ. ಆದರೆ ಈವರೆಗಿನ ಯಾವ ಜನಪ್ರತಿನಿಧಿಯೂ ಅದಕ್ಕೆ ಸ್ಪಂದಿಸಿರಲಿಲ್ಲ. ವಿಷಯ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಗಮನಕ್ಕೆ ಬಂದ ತಕ್ಷಣ ತ್ವರಿತವಾಗಿ ಸ್ಪಂದಿಸಿದರು. ಭವಿಷ್ಯದಲ್ಲಿ ಇಲ್ಲಿ ಯಾವುದೇ ಪ್ರಾಣಹಾನಿಯಾಗಬಾರದು ಎಂದು 4.5 ಕೋಟಿ ರೂ. ವೆಚ್ಚದಲ್ಲಿ ಯೋಜನೆ ರೂಪಿಸಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದರು. ಇದೀಗ ಕೋಳಿವಾಡ ಗ್ರಾಮದಿಂದ ಕೆಕೆ ಕೊಪ್ಪ ಗ್ರಾಮದವರೆಗೆ ರಸ್ತೆಯ ಡಾಂಬರೀಕರಣ ಹಾಗೂ ತಡೆಗೊಡೆಗಳನ್ನು ನಿರ್ಮಿಸಿಕೊಟ್ಟಿದ್ದಾರೆ.
ಗ್ರಾಮದ ಜನರು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರ ತುರ್ತು ಸ್ಪಂದನೆಗೆ ಮನಪೂರ್ವಕ ಕೃತಜ್ಞತೆ ಸಲ್ಲಿಸಿದ್ದಾರೆ. 
ಈಗ ಈ ರಸ್ತೆ ಮೇಲೆ ಎಲ್ಲ ಗ್ರಾಮಗಳ ಜನರ ಯಾವುದೇ ಭಯವಿಲ್ಲದೆ ಸರಾಗ ಹಾಗೂ ಸುಗಮವಾಗಿ ಸಾಗುತ್ತಿರುವುದನ್ನು ನೋಡಿ ಮನಸ್ಸಿಗೆ ತುಂಬಾ ಖುಷಿ ಎನಿಸುತ್ತಿದೆ. ನಾನು ಶಾಸಕಿಯಾಗಿ ಕೈಗೊಂಡ ಕೆಲಸಗಳು ಹಾಗೂ ತೆಗೆದುಕೊಳ್ಳುವ ಜವಾಬ್ದಾರಿಗಳು ನನಗೆ ತೃಪ್ತಿಯನ್ನು ತಂದುಕೊಟ್ಟಿವೆ. ಸದಾಕಾಲವೂ ಹೀಗೆಯೇ ನಿಮ್ಮ ಸೇವೆಯಲ್ಲಿ ನಿಮ್ಮ ಮನೆಯ ಮಗಳಾಗಿ ಸದಾ ನಿಮ್ಮ ಜೊತೆ ಇರುತ್ತೇನೆ ಎಂದು ಲಕ್ಷ್ಮಿ ಹೆಬ್ಬಾಳಕರ್ ಭರವಸೆ ನೀಡಿದ್ದಾರೆ.
ನಾಲ್ಕು ದಶಕದ ಬೇಡಿಕೆ ಇಡೇರಿಸಿದ ಶಾಸಕಿ ‌ಲಕ್ಷ್ಮೀ ಹೆಬ್ಬಾಳಕರ.. ನಾಲ್ಕು ದಶಕದ ಬೇಡಿಕೆ ಇಡೇರಿಸಿದ ಶಾಸಕಿ ‌ಲಕ್ಷ್ಮೀ ಹೆಬ್ಬಾಳಕರ.. Reviewed by News10Karnataka Admin on January 08, 2021 Rating: 5

No comments:

Powered by Blogger.