.

ವಿಧ್ಯಾಗಮ ಆರಂಭ, ಶಾಲೆಗಳತ್ತ ಮುಖಮಾಡಿದ ವಿಧ್ಯಾರ್ಥಿಗಳು..

ಧಾರವಾಡ : ಕೋವಿಡ್-19 ರ ಹಿನ್ನೆಲೆಯಲ್ಲಿ ವಿದ್ಯಾಗಮ*, : ಶಾಲಾ ಪುನರಾರಂಭದ ಕುರಿತು  ಅನುಸರಿಸಬೇಕಾದ ಕ್ರಮಗಳು
ಜ.01: ಜಿಲ್ಲೆಯಲ್ಲಿ ಶಾಲೆಗಳಿಗೆ 2020 ರ ಮಾರ್ಚ್ 3 ನೇ ವಾರದಿಂದ ಕೋವಿಡ್-19 ಕಾರಣದಿಂದಾಗಿ ರಜೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಶಾಲೆಗಳನ್ನು ಪುನರಾರಂಭಿಸುವ ಮೊದಲು ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಸುರಕ್ಷತೆಯ ದೃಷ್ಟಿಯಿಂದ ಎಲ್ಲಾ ಶಾಲೆಗಳಲ್ಲಿ ಸೋಂಕು ನಿವಾರಕ ರಾಸಾಯನಿಕಗಳನ್ನು ಬಳಸಿ ಸ್ವಚ್ಛಗೊಳಿಸಲಾಗಿದೆ. ಮತ್ತು ಪ್ರತಿ ಶಾಲೆಗಳು  ಸರ್ಕಾರ ನೀಡಿರುವ ಮಾರ್ಗಸೂಚಿಗಳನ್ನು ಪಾಲಿಸಲಾಗತ್ತಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ಎಲ್ ಹಂಚಾಟೆ ತಿಳಿಸಿದ್ದಾರೆ. 
 
ಈ ಕುರಿತು ಪ್ರಕಟಣೆ ನೀಡಿರುವ ಅವರು, ಕೊಠಡಿಗಳನ್ನು ಸ್ವಚ್ಚಗೊಳಿಸುವ ಜೊತೆಗೆ ಕೊಠಡಿಗಳಲ್ಲಿನ ಎಲ್ಲಾ ಪೀಠೋಪಕರಣಗಳು, (ಕುರ್ಚಿ, ಮೇಜು, ಡೆಸ್ಕ್, ಬೆಂಚು, ಬಾಗಿಲು, ಕಿಟಕಿ,  ಇತ್ಯಾದಿ) ಗಳಿಗೆ ಅಳವಡಿಸಿರುವ ಹಿಡಿ, ಚಿಲಕ, ಸರಳುಗಳು, ಇತ್ಯಾದಿಗಳನ್ನು ನೀರಿನಿಂದ ತೊಳೆದು ಸ್ವಚ್ಛಗೊಳಿಸಿ ಸ್ಯಾನಿಟೈಸ್ ಮಾಡಲಾಗಿದೆ ವಿದ್ಯಾರ್ಥಿ, ಶಿಕ್ಷಕ, ಸಿಬ್ಬಂದಿಯವರಿಗೆ ಕೋವಿಡ್-19 ಲಕ್ಷಣ ಕಂಡು ಬಂದ ಸಂದರ್ಭದಲ್ಲಿ ಇವರ ನಿರ್ವಹಣೆಗಾಗಿ ಶಾಲಾ ಆವರಣದಲ್ಲಿ ಒಂದು ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ.  
ಪಾತ್ರೆಗಳು, ಸ್ಪವ್, ಗ್ಯಾಸ್ ಸಿಲಿಂಡರ್, ಆಹಾರ ಧಾನ್ಯ ಸಂಗ್ರಹಣಾ ಡಬ್ಬಿಗಳು, ತರಕಾರಿ ಬುಟ್ಟಿಗಳು ಚಾಕುಗಳು, ಅಡುಗೆ ಮಾಡಲು ಬಳಸುವ ಸೌಟುಗಳು, ತಟ್ಟೆಗಳು ಮುಂತಾದ ಪ್ರತಿಯೊಂದು ವಸ್ತುವನ್ನು ಬಿಸಿ ನೀರಿನಿಂದ ತೊಳೆದು, ಬಿಸಿಲಿನಲ್ಲಿ ಒಣಗಿಸಿ ಬಳಕೆಗೆ ಅಣಿಗೊಳಿಸುವುದು. ಮಧ್ಯಾಹ್ನದ ಉಪಹಾರ ತಯಾರಿಸಿ ವಿತರಿಸುವ ಪ್ರಕ್ರಿಯೆ ಪ್ರಾರಂಭವಾಗುವ ಸಮಯದಲ್ಲಿಯೂ ಇದೇ ಕ್ರಮವನ್ನು ಅನುಸರಿಸಲು ಸೂಚಿಸಲಾಗಿದೆ. ಶಾಲೆಯಲ್ಲಿನ ಕುಡಿಯುವ ನೀರಿನ ವ್ಯವಸ್ಥೆಯ ಭಾಗವಾದ ನೀರಿನ ಸಂಪು, ಓವರ್ ಹೆಡ್ ಟ್ಯಾಂಕ್‍ನಲ್ಲಿ ಈಗಾಗಲೇ ಸಂಗ್ರಹವಾಗಿರುವ ನೀರನ್ನು ಖಾಲಿ ಮಾಡಿ, ಕ್ಲೋರಿನ್ ಆಧಾರಿತ ಶುಚಿಗೊಳಿಸುವ ಪೌಡರ್‍ನಿಂದ ಅವುಗಳನ್ನು ಸ್ವಚ್ಚಗೊಳಿಸಿ ಸಿದ್ಧಗೊಳಿಸಲಾಗಿದೆ.  
ಶಾಲೆಗೆ ಹಾಜರಾಗುವ ಪ್ರತಿ ವಿದ್ಯಾರ್ಥಿಯು ಕೋವಿಡ್ ಸೋಂಕಿನಿಂದ ರಕ್ಷಿಸಿಕೊಳ್ಳಲು ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ವಿದ್ಯಾರ್ಥಿಯ ಪೋಷಕರು ತೆಗೆದುಕೊಳ್ಳಬೇಕು. ಶಾಲಾ ವಿದ್ಯಾರ್ಥಿಗೆ ಅಥವಾ ಅವರ ಮನೆಯಲ್ಲಿ ಯಾವುದೇ ವ್ಯಕ್ತಿಗೆ ಕೋವಿಡ್ ಸೋಂಕಿನ ಲಕ್ಷಣಗಳಾದ ನೆಗಡಿ, ಕೆಮ್ಮು, ಮೂಗು ಸೋರುವುದು, ಜ್ವರ ಮುಂತಾದ ಲಕ್ಷಣಗಳಿದ್ದಲ್ಲಿ ತಮ್ಮ ಮಗುವನ್ನು ಶಾಲೆಗೆ ಕಳುಹಿಸಬಾರದು. ಕೂಡಲೇ ಹತ್ತಿರದ ಆಸ್ಪತ್ರೆಗೆ ತೆರಳಿ ಅಗತ್ಯ ಚಿಕಿತ್ಸೆ ಒದಗಿಸಬೇಕು.
ಪ್ರತಿ ವಿದ್ಯಾರ್ಥಿಯು ಮಾಸ್ಕ್ ಧರಿಸಿಯೇ ಶಾಲೆಗೆ ಹಾಜರಾಗುವುದು ಕಡ್ಡಾಯವಾಗಿದೆ. ಮಾಸ್ಕ್‍ಗಳನ್ನು ಹತ್ತಿಯ ಬಟ್ಟೆಯಿಂದ ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದಾಗಿದೆ. ಪ್ರತಿದಿನ ಮಾಸ್ಕ್‍ಗಳನ್ನು ಸೋಪಿನಿಂದ ಒಗೆದು, ಸ್ವಚ್ಚಗೊಳಿಸಿ, ಬಿಸಿಲಿನಲ್ಲಿ ಒಣಗಿಸಿ, ಮಾರನೇ ದಿನದ ಬಳಕೆಗೆ ಸಿದ್ದಪಡಿಸಿಕೊಳ್ಳುವುದು. ವಿದ್ಯಾರ್ಥಿಗಳಿಗೆ ಪ್ರತಿ ದಿನ ಅಗತ್ಯವಿರುವμÉ್ಟೀ ಪುಸ್ತಕಗಳನ್ನು ಕಳುಹಿಸುವುದು. ಪುಸ್ತಕಗಳ ಬ್ಯಾಗಿನ ಜೊತೆಗೆ ಮತ್ತೊಂದು ಬ್ಯಾಗಿನಲ್ಲಿ ಒಂದು ಟವೆಲ್ ಮತ್ತು ವಾಟರ್ ಬಾಟಲ್‍ನಲ್ಲಿ ಶುದ್ಧ ಕುಡಿಯುವ ನೀರನ್ನು (ಕಾಯಿಸಿ ಆರಿಸಿದ) ಮತ್ತು ಸಾಧ್ಯವಿದ್ದಲ್ಲಿ ಸ್ಯಾನಿಟೈಸರ್ ಬಾಟಲ್‍ಅನ್ನು ಕಳುಹಿಸಿಕೊಡುವುದು. ಪ್ರತಿ ಮಗುವಿಗೆ ವೈಯಕ್ತಿಕ ಸ್ವಚ್ಛತೆಯ ಅಭ್ಯಾಸಗಳನ್ನು ಮಾಡಿಸಬೇಕು.ಶಾಲೆಯಲ್ಲಿ ವಿದ್ಯಾರ್ಥಿಗಳ ನಡುವೆ ದೈಹಿಕ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ವಿದ್ಯಾರ್ಥಿಗಳು ಶೌಚಾಲಯ, ಕುಡಿಯುವ ನೀರು ಸೌಲಭ್ಯವನ್ನು ಬಳಸುವ ಸಂದರ್ಭದಲ್ಲಿಯೂ ಸಹ ದೈಹಿಕ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಶೌಚಾಲಯದ ಮುಂಭಾಗದಲ್ಲಿ, ಕೈ ತೊಳೆಯುವ ಸ್ಥಳದಲ್ಲಿ ಮತ್ತು ಕುಡಿಯುವ ನೀರಿನ ಸ್ಥಳದಲ್ಲಿ ವೃತ್ತ, ಬಾಕ್ಸ್‍ಗಳನ್ನು ಗುರುತು ಮಾಡಲು ಸೂಚಿಸಲಾಗಿದೆ.  

ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಶಾಲೆಗೆ ಹಾಜರಾಗಬೇಕು. 50 ವರ್ಷ ಮೀರಿದ ಶಿಕ್ಷಕರು ಮಾಸ್ಕ ಜೊತೆಗೆ ಫೇಸ್‍ಮಾಸ್ಕ್‍ನ್ನು ಧರಿಸುವುದು ಒಳಿತು. ಅಗ್ಗಿಂದಾಗ್ಗೆ ಸಾಬೂನು, ಸ್ಯಾನಿಟೈಸರ್‍ನಿಂದ ಕೈತೊಳೆದುಕೊಳ್ಳಬೇಕು. ರಸ್ತೆಯಲ್ಲಿ, ಶಾಲಾ ಆವರಣದಲ್ಲಿ ಉಗುಳುವುದು ಮುಂತಾದವುಗಳನ್ನು ಮಾಡದಂತೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವುದು, ಬಳಸಿದ ಮಾಸ್ಕ್‍ಗಳನ್ನು ಎಲ್ಲೆಂದರಲ್ಲಿ ಎಸೆಯುವುದು ಮತ್ತು ಸ್ನೇಹಿತರೊಂದಿಗೆ ಹಂಚಿಕೊಳ್ಳುವುದನ್ನು ಮಾಡದಂತೆ ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡಲು ಶಿಕ್ಷಕರಿಗೆ ಸೂಚಿಸಲಾಗಿದೆ. ವಿದ್ಯಾರ್ಥಿಗಳ ರೋಗ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ರತಿದಿನ ವ್ಯಾಯಾಮ. ಯೋಗ, ಸರಳ ಪ್ರಾಣಾಯಾಮಗಳನ್ನು ಸಾಮಾಜಿಕ ಅಂತರದೊಂದಿಗೆ ಮಾಡಿಸುವುದು ಹಾಗೂ ದೈಹಿಕ ಸ್ವಾಸ್ಥ್ಯ ಹೆಚ್ಚಿಸುವ ಆರೋಗ್ಯಕರ ಹಾಗೂ ಬಿಸಿಯಾದ ಆಹಾರ ಪದಾರ್ಥಗಳನ್ನು ಬಳಸುವಂತೆ ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ.    

ಪ್ರತಿದಿನ ಶಾಲೆ ಪ್ರಾರಂಭದಿಂದ ಶಾಲೆ ಮುಕ್ತಾಯ ವಾಗುವವರೆಗೂ ಕೋವಿಡ್-19 ರ ಪ್ರಮಾಣಿತ ಕಾರ್ಯಾಚರಣಾ ವಿಧಾನವನ್ನು ಎಲ್ಲಾ ಹಂತಗಳಲ್ಲಿಯೂ ಕಡ್ಡಾಯವಾಗಿ ಅನುಸರಣೆ ಮಾಡಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ಎಲ್ ಹಂಚಾಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  
  
ವಿಧ್ಯಾಗಮ ಆರಂಭ, ಶಾಲೆಗಳತ್ತ ಮುಖಮಾಡಿದ ವಿಧ್ಯಾರ್ಥಿಗಳು.. ವಿಧ್ಯಾಗಮ ಆರಂಭ, ಶಾಲೆಗಳತ್ತ ಮುಖಮಾಡಿದ ವಿಧ್ಯಾರ್ಥಿಗಳು.. Reviewed by News10Karnataka Admin on January 01, 2021 Rating: 5

No comments:

Powered by Blogger.