.

ಶ್ವಾನವನ್ನ ಉಳಿಸಲು ಹೋದ ಬೈಕ್ ಸವಾರ ಬೈಕ್ ನಲ್ಲಿದ್ದ ಮಹಿಳೆ ಸಾವು..ಮಹಿಳೆನು ಬದುಕಲಿಲ್ಲ,ಶ್ವಾನವೂ ಬದುಕಲಿಲ್ಲ..ಅಯ್ಯೊ ವಿಧಿಯೇ..

ಧಾರವಾಡ : ಬೈಕ ಸವಾರನಿಗೆ ಶ್ವಾನವೊಂದನ್ನ  ತಪ್ಪಿಸಲು ಹೋಗಿ, ಬೈಕ್ ಅಪಘಾತ ಸಂಭವಿಸಿ ಮಹಿಳೆಯೊಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಧಾರವಾಡದ ಸಲಕಿನಕೊಪ್ಪ ಗ್ರಾಮದ ಬಳಿ ನಡೆದಿದೆ. ಬೆನಕನಕಟ್ಟಿ ನಿವಾಸಿಯಾದ ದಿಲ್‌ಶಾದ್ ಚಪ್ಪರಾರ್ ನಲವತೈದು ವರ್ಷದ ಮೃತ ಮಹಿಳೆ ಎಂದು ಗುರುತ್ತಿಸಲಾಗಿದೆ. ಇನ್ನೂ ಬೈಕ್ ಸವಾರ ಪ್ರಕಾಶ ನಿಗದಿಯ ನಿವಾಸಿಯಾಗಿದ್ದು, 
ಧಾರವಾಡದ ಕಡೆಗೆ ತನ್ನ ಕೆಲಸಕ್ಕೆಂದು ತೆರಳುತ್ತಿದ್ದ, ಈ ವೇಳೆ ತಮ್ಮ ಗ್ರಾಮದ ಪಕ್ಕದ ಬೆನಕನಕಟ್ಟಿ ದಿಲ್ ಶಾದ್ ಮಹಿಳೆಯು ಡ್ರಾಪ್ ಕೇಳಿದ್ದಾರೆ. ಈ ವೇಳೆ ಅವರನ್ನು ಕುರಿಸಿಕೊಂಡು ಧಾರವಾಡಕ್ಕೆ ಬೈಕ ಸವಾರನ್ನು ಬರುತ್ತಿದ್ದ, ಆದರೆ ಸಲಕಿನಕೊಪ್ಪ ಗ್ರಾಮದ ಬಳಿ ಬರುತ್ತಿದ್ದಂತೆ ಏಕಾಏಕಿ ಬೈಕ್‌ಗೆ ಶ್ವಾನ ಅಡ್ಡ ಬಂದು ಡಿಕ್ಕಿ ಹೊಡೆದಿದೆ. ತಕ್ಷಣವೇ ಬ್ರೆಕ್ ಹಾಕಲು ಬೈಕ್ ಸವಾರ ಮುಂದಾಗಿದ್ದಾನೆ, ಈ ವೇಳೆ ಹಿಂಬದಿ ಕುಳಿತಿದ್ದ ಮಹಿಳೆಯು ರಸ್ತೆಯ ಮೇಲೆ ಬಿದ್ದು ತಲೆಗೆ ಬಲವಾದ ಪೆಟ್ಟಾಗಿದೆ  ಹಿನ್ನೆಲೆಯಲ್ಲಿ ಮಹಿಳೆಯು ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾಳೆ. ಧಾರವಾಡ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಶ್ವಾನವು ಕೂಡಾ ಸ್ಥಳದಲ್ಲಿಯೇ ಸಾವನಪ್ಪದೆ..ಶ್ವಾನವನ್ನ ಉಳಿಸಲು ಹೋದ ಬೈಕ್ ಸವಾರ ಬೈಕ್ ನಲ್ಲಿದ್ದ ಮಹಿಳೆ ಸಾವು..ಮಹಿಳೆನು ಬದುಕಲಿಲ್ಲ,ಶ್ವಾನವೂ ಬದುಕಲಿಲ್ಲ..ಅಯ್ಯೊ ವಿಧಿಯೇ.. ಶ್ವಾನವನ್ನ ಉಳಿಸಲು ಹೋದ ಬೈಕ್ ಸವಾರ ಬೈಕ್ ನಲ್ಲಿದ್ದ ಮಹಿಳೆ ಸಾವು..ಮಹಿಳೆನು ಬದುಕಲಿಲ್ಲ,ಶ್ವಾನವೂ ಬದುಕಲಿಲ್ಲ..ಅಯ್ಯೊ ವಿಧಿಯೇ.. Reviewed by News10Karnataka Admin on January 20, 2021 Rating: 5

No comments:

Powered by Blogger.