.

ಮರಗಳ್ಳರಿಗೆ ಬಿಸಿ ಮುಟ್ಟಿಸಿದ ಧಾರವಾಡ ಅರಣ್ಯ ಇಲಾಖೆಯ ಅಧಿಕಾರಿಗಳು...

ಧಾರವಾಡ: ಅಕ್ರಮವಾಗಿ ಧಾರವಾಡ ವಲಯ ವ್ಯಾಪ್ತಿಯ ಅರವಟಗಿ ಹಾಗೂ ಕಲಕೇರಿ ಅರಣ್ಯ ಪ್ರದೇಶದಲ್ಲಿ ಬೆಲೆಬಾಳುವ ಸಾಗವಾನಿ ಮರಗಳನ್ನು ಕಡಿದು ತುಂಡುಗಳನ್ನಾಗಿ ಪರಿವರ್ತಿಸಿ ಸಾಗಾಟ ಮಾಡುವ ಸಂದರ್ಭದಲ್ಲಿ ನಾಲ್ಕು ಜನರನ್ನು ಅರಣ್ಯ ಇಲಾಖೆ ಪೋಲಿಸರು ಬಂಧಿಸಿದ್ದಾರೆ ಧಾರವಾಡ ವಲಯದ ಪೋಲಿಸರು ನಡೆಸಿದ ಈ ದಾಳಿಯಲ್ಲಿ ಆರೋಪಿತರಾದ ಹೊನ್ನಾಪೂರ ಗ್ರಾಮದ ಒಬ್ಬ ಪ್ರಕಾಶ ಲಕ್ಷ್ಮಣ ಪಾಟೀಲ, ರಾಮಾಪೂರ ಗ್ರಾಮದ ಮೂವರು ಸಂತೋಷ ಪಕ್ಕಿರಪ್ಪ ಶೆರಿಮನಿ, ದ್ಯಾಮನ್ನ ಪಕ್ಕೀರಪ್ಪ ಶೆರಿಮನಿ ಹಾಗೂ ಬಸವರಾಜ ಕರಿಯಪ್ಪ ನೀರಲಗಿ ಎಂಬುವವರನ್ನು ಬಂಧಿಸಲಾಗಿದೆ ಎಂದು ಧಾರವಾಡ ಅರಣ್ಯ ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಸಂದರ್ಭದಲ್ಲಿ 1.292 ಘ.ಮೀ ಒಟ್ಟು ಅಂದಾಜು ಒಂದೂವರೆ ಲಕ್ಷ ರೂಪಾಯಿ ಮೌಲ್ಯ ದ ಸಾಗವಾಣಿ ಕಟ್ಟಿಗೆ,ಒಂದು ದ್ವಿಚಕ್ರ ವಾಹನ, ಹಾಗೂ ಸಾಗಾಟನೆಗೆ ಉಪಯೋಗಿಸಿದ ಎರಡು ಅಶೋಕ ಲೈಲೆಂಡ್-207 ವಾಹನಗಳನ್ನು ಮಾಲು ಸಮೇತ ನಾಲ್ಕು ಜನರನ್ನು ಬಂಧಿಸಿದ್ದಾರೆ. ಧಾರವಾಡ ವಲಯ ಅರಣ್ಯ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಧಾರವಾಡ ವಲಯ ಅರಣ್ಯ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಧಾರವಾಡ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಮಂಜುನಾಥ ಚವ್ಹಾಣ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಯಶಪಾಲ್ ಕ್ಷೀರಸಾಗರ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಸಂತೋಷ ಕೆಂಚಪ್ಪನವರ ಸೇರಿದಂತೆ ಧಾರವಾಡ ಅರಣ್ಯ ಇಲಾಖೆ ಅಧಿಕಾರಿ ವರ್ಗದವರು ಹಾಗೂ ಸಿಬ್ಬಂದಿ ವರ್ಗದವರು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.
ಮರಗಳ್ಳರಿಗೆ ಬಿಸಿ ಮುಟ್ಟಿಸಿದ ಧಾರವಾಡ ಅರಣ್ಯ ಇಲಾಖೆಯ ಅಧಿಕಾರಿಗಳು... ಮರಗಳ್ಳರಿಗೆ ಬಿಸಿ ಮುಟ್ಟಿಸಿದ ಧಾರವಾಡ ಅರಣ್ಯ ಇಲಾಖೆಯ ಅಧಿಕಾರಿಗಳು... Reviewed by News10Karnataka Admin on January 01, 2021 Rating: 5

No comments:

Powered by Blogger.