ಧಾರವಾಡ
ಮಾಜಿ ಜಿಪಂ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಭಂದಿಸಿದಂತೆ ಸಿಬಿಐ ತನಿಖೆ ಜೋರಾಗಿದೆ.ಇಂದು ಧಾರವಾಡ ಉಪನಗರ ಪೋಲಿಸ್ ಠಾಣೆಯಲ್ಲಿ ಆರೋಪಿ ಬಸವರಾಜ್ ಮುತ್ತಗಿಯನ್ನು ವಿಚಾರಣೆ ನಡೆಸಿದ್ದಾರೆ.
ಅದ್ರಲ್ಲಿ ಕೆಲವು ಮಹತ್ವದ ವಿಚಾರಗಳು ಬೆಳಕಿಗೆ ತಂದಿರುವ ಸಿಬಿಐ ಅಧಿಕಾರಿಗಳು ಯೋಗೀಶ್ ಗೌಡ ಹತ್ಯೆ ನಂತರ ಬಸವರಾಜ್ ಮುತ್ತಗಿ ಹತ್ಯೆಗೆ ಮಾಜಿ ಸಚಿವ ವಿನಯ್ ಕುಲಕರ್ಣಿ ಫ್ಲಾನ್ ಮಾಡಿದ್ರು ಮಾಹಿತಿ ಹೊರಬಿದ್ದಿದೆ.ಈ ಹಿನ್ನಲೆಯಲ್ಲಿ ಈ ವಿಚಾರವಾಗಿ ವಿಚಾರಣೆ ನಂತರ ಹೊರಗಡೆ ಬಂದ ನಂತರ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಆರೋಪಿ ಬಸವರಾಜ್ ಮುತ್ತಗಿ ದೇವರ ದಯೆಯಿಂದ ಬಂದಿರುವ ಸುದ್ದಿ ಸುಳ್ಳಾಗಲಿ ಅಂತ ಕೇಳಿಕೊಳ್ಳುತ್ತೇನೆ ಭಾವನೆಗಳ ಜೊತೆ ಯಾರು ಆಟ ಆಡಲಿಕ್ಕೆ ಆಗಲ್ಲ, ವಿಚಾರಣೆಯಲ್ಲಿ ತುಂಬಾ ವಿಷಯಗಳಿವೆ ಎಲ್ಲವನ್ನು ಹೇಳಲಿಕ್ಕೆ ಆಗಲ್ಲ. ನಾನು ಹೇಳೋದು ಇಷ್ಟೆ ಬಹಳ ಭಾವನೆಯಿಂದ ನಿಮ್ಮ ಜೊತೆ ಬದುಕಿದ್ದೇನೆ ಆ ಭಾವನೆಗಳಿಗೆ ನಂಬಿಕೆ ದ್ರೋಹ ಮಾಡಬಾರದು ಎಂದು ಬಸವರಾಜ್ ಮುತ್ತಗಿ ನೋವಿನಿಂದ ಆ ಮಾತನ್ನ ಹೇಳಿದ್ರು...

No comments: