ಶಿವಮೊಗ್ಗ : ಗ್ರಾ.ಪಂ ಚುನಾವಣೆ ಹಿನ್ನಲೆ ಅಬಕಾರಿ ಇಲಾಖೆಯ ಕಾರ್ಯಾಚರಣೆ..
ಗ್ರಾಮಪಂಚಾಯಿತಿ ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನಲೆಯಲ್ಲಿ ಶಿವಮೊಗ್ಗ ಜಿಲ್ಲಾ ಅಬಕಾರಿ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದೆ.ಕಾರ್ಯಾಚರಣೆಯಲ್ಲಿ ಎರಡು ಲಕ್ಷದ ಮೂವತ್ತು ಸಾವಿರ ರೂಗಳ ಮೊತ್ತದ ಹೊರ ರಾಜ್ಯದ ತೆರಿಗೆ ಪಾವತಿಸದ ಅಕ್ರಮ ಮದ್ಯವನ್ನ ವಶಕ್ಕೆ ಪಡೆಯಲಾಗಿದೆ.
ಅಬಕಾರಿ ಉಪ ಆಯುಕ್ತ ಕ್ಯಾಪ್ಟನ್ ಅಜಿತ್ ಕುಮಾರ ಮಾರ್ಗದರ್ಶನದಲ್ಲಿ ದಾಳಿ ನಡೆಸಿದ ಅಧಿಕಾರಿಗಳು ಹೊಸನಗರ ತಾಲೂಕಿನ ಚಿಕ್ಕಪೇಟೆಯಲ್ಲಿ ಆರೋಪಿಗಳನ್ನ ವಶಕ್ಕೆ ತೆಗೆದುಕೊಂಡಿದ್ದಾರೆ.ಗ್ರಾಮ ಪಂಚಾಯತಿ ಚುನಾವಣೆಗೆ ಗೋವಾ ರಾಜ್ಯದ ಮೆಕ್ಡೋನಾಲ್ಡ್ ವಿಸ್ಕಿ,ಇಂಪಿರಿಯರ್ ಹಾಗೂ ಗೋವಾದ ಫೆನ್ನಿ ಸೇರಿದಂತೆ ಎಪ್ಪತ್ತೊಂದು ಲೀಟರ್ ಅಕ್ರಮ ಮದ್ಯವನ್ನ ಜಪ್ತಿ ಮಾಡಿದ್ದಾರೆ...
ಶಿವಮೊಗ್ಗಾದಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳ ಬರ್ಜರಿ ಕಾರ್ಯಾಚರಣೆ...
Reviewed by News10Karnataka Admin
on
December 15, 2020
Rating:

No comments: