.

ಉಸಿರಾಟದ ತೊಂದರೆಯಿಂದ ಪತ್ರಕರ್ತ ಸಾವು..ಮತ್ತೆ ಹುಟ್ಟಿ ಬನ್ನಿ‌ ಬ್ರದರ್..!

ಚಿತ್ರದುರ್ಗ : ಉಸಿರಾಟದ ತೊಂದರೆಯಿಂದ ಕಳೆದ ರಾತ್ರಿ ಚಿತ್ರದುರ್ಗ ಜಿಲ್ಲೆಯ ರಾಜ್ ನ್ಯೂಸ್ ಕ್ಯಾಮೆರಾಮೆನ್ ವಿನಯ್ ವಿಧಿವಶರಾಗಿದ್ದಾರೆ.ಕಳೆದ ತಿಂಗಳು 29 ರಂದು ಮದುವೆ ಕೂಡ ಆಗಿತ್ತು.ಮದುವೆ ಆಗಿ ಹತ್ತು ದಿನ ಕಳೆದಿಲ್ಲಾ ಈಗ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಕಳೆದ ಎಳೆಂಟು ವರ್ಷದಿಂದ ರಾಜ್ ನ್ಯೂಸ್ ಕ್ಯಾಮರಾಮೆನ್ ಆಗಿ‌ ಕೆಲಸ ನಿರ್ವಹಿಸುತ್ತಿದ್ದ ಇವರು..

ಸಾಕಷ್ಟು ಮಾಧ್ಯಮ ಮಿತ್ರರ ಪ್ರೀತಿಗೆ ಪಾತ್ರರಾಗಿದ್ದರು.ಚಿತ್ರದುರ್ಗ ಜಿಲ್ಲೆಯ ಮಾಧ್ಯಮದ ಪ್ರತಿಯೊಂದು ಕಾರ್ಯಕ್ರಮವನ್ನ ತಾವೇ ಸ್ವತಃ ವಹಿಸಿಕೊಂಡು ಮಾಡುವಂತಹ ವ್ಯಕ್ತಿತ್ವ ಇವರದ್ದಾಗಿತ್ತು.ಇವರ ಅಗಲಿಕೆಯಿಂದ ಚಿತ್ತದುರ್ಗ ಮಾಧ್ಯಮ ಬಳಗಕ್ಕೆ ಹಾಗೂ ಕುಟುಂಬಸ್ಥರಿಗೆ ತುಂಬಲಾರದ ನಷ್ಟ ಆಗಿದ್ದು,ದೇವರು ಅವರಿಗೆ ಶಾಂತಿಯನ್ನ ನೀಡಲಿ...ಉಸಿರಾಟದ ತೊಂದರೆಯಿಂದ ಪತ್ರಕರ್ತ ಸಾವು..ಮತ್ತೆ ಹುಟ್ಟಿ ಬನ್ನಿ‌ ಬ್ರದರ್..! ಉಸಿರಾಟದ ತೊಂದರೆಯಿಂದ ಪತ್ರಕರ್ತ ಸಾವು..ಮತ್ತೆ ಹುಟ್ಟಿ ಬನ್ನಿ‌ ಬ್ರದರ್..! Reviewed by News10Karnataka Admin on December 09, 2020 Rating: 5

No comments:

Powered by Blogger.