.

ಧಾರವಾಡ ಜಿಲ್ಲೆಯಲ್ಲಿ ಮೊದಲ‌ ದಿನ ಎಷ್ಟು ನಾಮಿನೇಷನ್ ಆಗಿದ್ದಾವೆ ಗೊತ್ತಾ..ಇಲ್ಲಿದೆ ಪುಲ್ ಡಿಟೇಲ್..

ಗ್ರಾಮ ಪಂಚಾಯತ್ ಚುನಾವಣೆ-2020

ಮೊದಲ ದಿನ 11 ನಾಮಪತ್ರಗಳ ಸಲ್ಲಿಕೆ-ಜಿಲ್ಲಾ ಚುನಾವಣಾಧಿಕಾರಿ ನಿತೇಶ ಪಾಟೀಲ

ಧಾರವಾಡ : ಜಿಲ್ಲೆಯಲ್ಲಿ ಮೊದಲ ಹಂತದ ಗ್ರಾಮಪಂಚಾಯತ ಸಾರ್ವತ್ರಿಕ ಚುನಾವಣೆಗೆ ಅಭ್ಯರ್ಥಿಗಳಿಂದ ನಾಮಪತ್ರ ಸ್ವೀಕಾರ ಆರಂಭವಾಗಿದ್ದು ಇಂದು (ಡಿ. 7) ವಿವಿಧ ಗ್ರಾಮಪಂಚಾಯತಿಗಳಲ್ಲಿ ಒಟ್ಟು 11 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.
ಮೊದಲ ಹಂತದಲ್ಲಿ ಧಾರವಾಡ, ಅಳ್ನಾವರ ಮತ್ತು ಕಲಘಟಗಿ ತಾಲೂಕಿನ ಗ್ರಾಮಪಂಚಾಯತಿಗಳಿಗೆ ಚುನಾವಣೆ ಜರುಗಲಿದ್ದು, ನಾಮಪತ್ರ ಸಲ್ಲಿಕೆ ಇಂದಿನಿಂದ ಆರಂಭವಾಗಿದ್ದು ಧಾರವಾಡ ತಾಲೂಕಿನ ರಾಮಾಪೂರ ಗ್ರಾಮಪಂಚಾಯತಿಗೆ ಒಂದು ಮತ್ತು ತಡಕೊಡ ಗ್ರಾಮಪಂಚಾಯತಿಗೆ ಒಂದು ನಾಮಪತ್ರ ಸಲ್ಲಿಕೆಯಾಗಿದೆ. ಅದೇ ರೀತಿ ಕಲಘಟಗಿ ತಾಲೂಕಿನ ಜಿ.ಬಸವನಕೊಪ್ಪ ಗ್ರಾಮಪಂಚಾಯತಿಗೆ ಎರಡು, ಉಗ್ಗಿನಕೇರಿ ಗ್ರಾಮಪಂಚಾಯತಿಗೆ ಮೂರು, ಸೂರಶೆಟ್ಟಿಕೊಪ್ಪ ಗ್ರಾಮಪಂಚಾಯತಿಗೆ ಒಂದು ಮತ್ತು ದಾಸ್ತಿಕೊಪ್ಪ ಗ್ರಾಮಪಂಚಾಯತಿಗೆ ಮೂರು ನಾಮಪತ್ರಗಳು ಸಲ್ಲಿಕೆಯಾಗಿವೆ.

ಧಾರವಾಡ ತಾಲೂಕಿನ ಗ್ರಾಮ ಪಂಚಾಯತಿಗಳಿಗೆ ಇಂದು ಒಟ್ಟು ಎರಡು ನಾಮಪತ್ರಗಳು ಮತ್ತು ಕಲಘಟಗಿ ತಾಲೂಕಿನ ಗ್ರಾಮಪಂಚಾತಿಗಳಿಗೆ ಒಂಬತ್ತು ನಾಮಪತ್ರಗಳು ಸೇರಿ ಒಟ್ಟು ಹನ್ನೊಂದು ನಾಮಪತ್ರಗಳು ಸಲ್ಲಿಕೆಯಾಗಿವೆ. ಅಳ್ನಾವರ ತಾಲೂಕಿನ ಗ್ರಾಮ ಪಂಚಾಯತಿಗಳಿಗೆ ಇಂದು ನಾಮಪತ್ರಗಳು ಸಲ್ಲಿಕೆಯಾಗಿರುವುದಿಲ್ಲ ಎಂದು ಜಿಲ್ಲಾಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.
ಧಾರವಾಡ ಜಿಲ್ಲೆಯಲ್ಲಿ ಮೊದಲ‌ ದಿನ ಎಷ್ಟು ನಾಮಿನೇಷನ್ ಆಗಿದ್ದಾವೆ ಗೊತ್ತಾ..ಇಲ್ಲಿದೆ ಪುಲ್ ಡಿಟೇಲ್.. ಧಾರವಾಡ ಜಿಲ್ಲೆಯಲ್ಲಿ ಮೊದಲ‌ ದಿನ ಎಷ್ಟು ನಾಮಿನೇಷನ್ ಆಗಿದ್ದಾವೆ ಗೊತ್ತಾ..ಇಲ್ಲಿದೆ ಪುಲ್ ಡಿಟೇಲ್.. Reviewed by News10Karnataka Admin on December 07, 2020 Rating: 5

No comments:

Powered by Blogger.