.

ಬಚ್ಚಾಖಾನನಿಂದ ಅವಳಿ ನಗರದ ಉಧ್ಯಮಿಗಳಿಗೆ ಧಮಕಿ ಇಂದು‌ ಧಾರವಾಡ ಜಿಲ್ಲಾ ನ್ಯಾಯಾಲಯಕ್ಕೆ‌ ಹಾಜರ್..


ಧಾರವಾಡ : ಹುಬ್ಬಳ್ಳಿ ಧಾರವಾಡದ ಪ್ರತಿಷ್ಟಿತ ಉಧ್ಯಮಿಗಳಿಗೆ ಧಮಕಿ ಹಾಕಿದ ಪ್ರಕರಣಕ್ಕೆ ಸಂಬಂದಿಸಿದಂತೆ ಭೂಗತ ಪಾತಕಿ  ಬಚ್ಚಾಖಾನನನ್ನು  ಧಾರವಾಡ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.  ಮೈಸೂರುನಿಂದ ಧಾರವಾಡಕ್ಕೆ ಬಾಡಿ ವಾರೆಂಟ ಮೇಲೆ ಕರೆ ತಂದಿದ್ದ ಉಪನಗರ ಠಾಣೆ ಪೊಲೀಸರು, ಬಚ್ಚಾಖಾನನನ್ನು ಇಂದು ನ್ಯಾಯಾಲಯಕ್ಕೆ ಹಾಜರಪಡಿಸಿದ್ದರು. ನ್ಯಾಯಾಲಯ 4 ದಿನಗಳ ಕಾಲ ಪೊಲೀಸ ವಶಕ್ಕೆ ನೀಡಿದೆ ಈ ಕುರಿತು ಒಂದು ವರದಿ ಇಲ್ಲಿದೆ...

ಹುಬ್ಬಳ್ಳಿಯಲ್ಲಿ ರೌಡಿ ಫ್ರೂಟ   ಇರ್ಫಾನ ಕೊಲೆಯಾದ ನಂತರ ಕಡಿಮೆಯಾಗಿದ್ದ ಪುಡಿ ರೌಡಿಗಳ ಹಾವಳಿ ಮತ್ತೆ ಹೆಚ್ಚಾಗುತ್ತಿದೆ. ಇದೀಗ ಅವಳಿ ನಗರದಲ್ಲಿ ಭೂಗತ ಪಾತಕಿ ಬಚ್ಚಾಖಾನ ಹೆಸರು ಕೇಳಿ ಬರುತ್ತಿದ್ದು, ಪ್ರತಿಷ್ಟಿತರಿಗೆ ಕರೆ ಮಾಡಿ ಧಮಕಿ ಹಾಕಲಾಗುತ್ತಿದೆ ಎಂಬ ಅಂಶ ಬೆಳಕಿಗೆ ಬಂದಿದೆ. ಧಾರವಾಡದ ಪ್ರತಿಷ್ಟಿತ ಉಧ್ಯಮಿ ದರಗದ ಎಂಬುವವರಿಗೆ ಬಚ್ಚಾಖಾನ ಧಮಕಿ ಹಾಕಿದ್ದಾನೆ ಎನ್ನಲಾಗಿದ್ದು, ಈ ಸಂಬಂದ ಉಪನಗರ ಪೊಲೀಸ ಠಾಣೆಯಲ್ಲಿ ದೂರು ಧಾಖಲಾಗಿದೆ. ಪ್ರಕರಣವನ್ನು  ಗಂಭೀರವಾಗಿ ತೆಗೆದುಕೊಂಡಿರುವ ಪೊಲೀಸರು, ಮೈಸೂರು ಜೈಲಿನಲ್ಲಿದ್ದ ಬಚ್ಚಾಖಾನನನ್ನು ಬಾಡಿ ವಾರೆಂಟ ಮೇಲೆ ಧಾರವಾಡಕ್ಕೆ ಕರೆತಂದಿದ್ದಾರೆ. ನ್ಯಾಯಾಲಯ ಭೂಗತ ಪಾತಕಿಯನ್ನು ಹೆಚ್ಚಿನ ವಿಚಾರಣೆಗೆ ನಾಲ್ಕು ದಿನಗಳ  ಒಪ್ಪಿಸಲಾಗಿದೆ. ಈ ಮಧ್ಯೆ ನ್ಯಾಯಾಲಯದ ಆವರಣದಲ್ಲಿ ಮಾತನಾಡಿದ ಬಚ್ಚಾಖಾನ ನನ್ನ ಹೆಸರು ಹೇಳಿ ಯಾರೇ ಧಮಕಿ ಹಾಕಿದರು ಅವರನ್ನು ಬಂಧಿಸಿ ಎಂದು ಆಗ್ರಹಿಸಿದ್ದಾನೆ.
ರೌಡಿ ಫ್ರೂಟ ಇರ್ಫಾನ್ ಹತ್ತ್ಯೆಯಲ್ಲಿಯೂ ಬಚ್ಚಾಖಾನ ಹೆಸರು ಕೇಳಿ ಬಂದಿತ್ತು. ಕೊಲೆ ಆರೋಪಿಗಳು ಬಚ್ಚಾಖಾನ ಸಹಚರರು ಎಂದು ಪೊಲೀಸರು ತನಿಖೆ ವೇಳೆ ಖಾತ್ರಿ ಪಡಿಸಿಕೊಂಡಿದ್ದರು. ಇದಾದ ಬಳಿಕ ಅವಳಿ ನಗರದ 30 ಕ್ಕೂ ಹೆಚ್ಚು ಜನರಿಗೆ ಬಚ್ಚಾಖಾನ ಕರೆ ಮಾಡಿ, ಇರ್ಫಾನನನ್ನು ನಾನೇ ಹತ್ತ್ಯೆ ಮಾಡಿಸಿದ್ದು, ನನ್ನ ಜೊತೆ ಸಹಕರಿಸಬೇಕು ಎಂದು ಧಮಕಿ ಹಾಕಿದ್ದ ಎನ್ನಲಾಗಿದೆ. ಇದೇ ವೇಳೆ ದರಗದ ಎಂಬುವವರ ಪೆಟ್ರೋಲ  ಪಂಪ  ಮೇಲೆ ಬಬ್ಲು ಗೋಕಾಕ, ಯೂಸೂಫ ಕುಸುಗಲ, ಶಫಿ ಅತ್ತಾರ ಎಂಬ ಮೂವರು ಕಲ್ಲೂ ತೂರಿ ಧಮಕಿ ಹಾಕಿದ ಹಿನ್ನೇಲೆಯಲ್ಲಿ ಆ ಮೂವರನ್ನು ಬಂಧಿಸಲಾಗಿದೆ. ಜೈಲಿನಲ್ಲಿ ನಾನು ಮೊಬೈಲ ಉಪಯೋಗಿಸಿಲ್ಲ, ಮೊಬೈಲ್ ಇಲ್ಲದೆ ಹೇಗೆ ಧಮಕಿ ಹಾಕಲು ಸಾಧ್ಯ ಎಂದು ನ್ಯಾಯಾಧೀಶರ ಎದುರು ಬಚ್ಚಾಖಾನ ಹೇಳಿದ. ನನ್ನನ್ನು ಸುಳ್ಳು ಆರೋಪದ ಮೇಲೆ ಕರೆ ತಂದಿದ್ದಾರೆ, ಬೇಕಿದ್ದರೆ ಜೈಲಿನ ಅಧಿಕಾರಿಗಳನ್ನು ವಿಚಾರಣೆ ನಡೆಸಿ ಎಂದು ನ್ಯಾಯಾಲಯದ ಎದುರು ಬಚ್ಚಾಖಾನ ಹೇಳಿದ್ದಾನೆ.


ಬಚ್ಚಾಖಾನ್ ಧಾರವಾಡಕ್ಕೆ ಬರುವಷ್ಟರಲ್ಲಿ, ಆತನ ಪರ ವಾದಿಸಲು ಬೆಂಗಳೂರು ಹಾಗೂ ಮುಂಬೈನಿಂದ ವಕೀಲರು ಧಾರವಾಡಕ್ಕೆ ಆಗಮಿಸಿದ್ದಾರೆ. ನಾಲ್ಕು ದಿನಗಳ ಕಾಲ ಬಚ್ಚಾಖಾನ್ ನನ್ನು ವಶಕ್ಕೆ ಪಡೆದಿರುವ ಪೊಲೀಸರು ಯಾವ್ಯಾವ ಮಾಹಿತಿ ಹೊರಹಾಕುತ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ...
ಬಚ್ಚಾಖಾನನಿಂದ ಅವಳಿ ನಗರದ ಉಧ್ಯಮಿಗಳಿಗೆ ಧಮಕಿ ಇಂದು‌ ಧಾರವಾಡ ಜಿಲ್ಲಾ ನ್ಯಾಯಾಲಯಕ್ಕೆ‌ ಹಾಜರ್.. ಬಚ್ಚಾಖಾನನಿಂದ ಅವಳಿ ನಗರದ ಉಧ್ಯಮಿಗಳಿಗೆ ಧಮಕಿ ಇಂದು‌ ಧಾರವಾಡ ಜಿಲ್ಲಾ ನ್ಯಾಯಾಲಯಕ್ಕೆ‌ ಹಾಜರ್.. Reviewed by News10Karnataka Admin on December 28, 2020 Rating: 5

No comments:

Powered by Blogger.