.

ಬೆಳಗಾವಿ ಪೋಲಿಸರ ಭರ್ಜರಿ ಕಾರ್ಯಾಚರಣೆ, ಎಸ್ಪಿ ಲಕ್ಷ್ಮಣ ನಿಂಬರಗಿ ಮಾರ್ಗದರ್ಶನ, ಕದಿಮರ ಹೆಡೆಮೂರಿ ಕಟ್ಟಿದ ಪೋಲಿಸರು...

ಬೆಳಗಾವಿ : ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ, ಬೆಂಗಳೂರು ಹುಬ್ಬಳ್ಳಿಯಲ್ಲಿ ಕಳ್ಳತನ ಮಾಡಿದ ವಾಹನಗಳನ್ನ, ಬೇರೆಯವರಿಗೆ ಮಾರಾಟ ಮಾಡುವ ವೇಳೆ ಬೆಳಗಾವಿ ಡಿಸಿಬಿ ಪೋಲಿಸರು ದಾಳಿ ಮಾಡಿ, ವಶಕ್ಕೆ ಆರೋಪಿಗಳನ್ನ ಪಡೆದಿರುವ ಘಟನೆ ಬೆಳಗಾವಿ ಜಿಲ್ಲೆಯ ಘಟಪ್ರಭಾ- ರಾಜಾಪುರ‌ ಸರಹದ್ದಿನಲ್ಲಿ ನಡೆದಿದೆ.ಎಸ್ ಪಿ‌ ಲಕ್ಷ್ಮಣ ನಿಂಬರಗಿ ಹಾಗೂ ಅಡಿಶನಲ್ ಎಸ್ ಪಿ ಅಮರನಾಥ್ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ಡಿಸಿಬಿ ಇನ್ಸ್ಪೆಕ್ಟರ್ ವೀರೇಶ್ ದೊಡಮನಿ ಅವರ ತಂಡದ ನೇತೃತ್ವದಲ್ಲಿ ಆರೋಪಿಗಳಾದ ವಾಸುದೇವ ನಾಯಕ,ಮಹಾಂತೇಶ್ ಕರಗಣ್ಣಿ,ವಿವೇಕಾನಂದ ತಳವಾರ ಎಂಬುವರನ್ನ ವಶಕ್ಕೆ ಪಡೆಯಲಾಗಿದೆ.

ಬಂಧಿತರಿಂದ ಸುಮಾರು 24 ಲಕ್ಷದ 60ಸಾವಿರ ಮೌಲ್ಯದ ನಾಲ್ಕು ವಾಹನಗಳನ್ನ ವಶಪಡಿಸಿಕೊಳ್ಳಲಾಗಿದ್ದು,ಇವರು ವಾಹನ ಕಳ್ಳತನ ಮಾಡಿ ವಾಹನಗಳ ಚೆಸ್ಸಿ ಹಾಗೂ ನಂಬರ್ ಪ್ಲೇಟ್ ಬದಲಿಸಿ ಮುಗ್ದ ಜನರಿಗೆ ಮಾರಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.ಇನ್ನೂ‌ ಈ ಕುರಿತು ಘಟಪ್ರಭಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ...


ಬೆಳಗಾವಿ ಪೋಲಿಸರ ಭರ್ಜರಿ ಕಾರ್ಯಾಚರಣೆ, ಎಸ್ಪಿ ಲಕ್ಷ್ಮಣ ನಿಂಬರಗಿ ಮಾರ್ಗದರ್ಶನ, ಕದಿಮರ ಹೆಡೆಮೂರಿ ಕಟ್ಟಿದ ಪೋಲಿಸರು... ಬೆಳಗಾವಿ ಪೋಲಿಸರ ಭರ್ಜರಿ ಕಾರ್ಯಾಚರಣೆ, ಎಸ್ಪಿ ಲಕ್ಷ್ಮಣ ನಿಂಬರಗಿ ಮಾರ್ಗದರ್ಶನ, ಕದಿಮರ ಹೆಡೆಮೂರಿ ಕಟ್ಟಿದ ಪೋಲಿಸರು... Reviewed by News10Karnataka Admin on December 08, 2020 Rating: 5

No comments:

Powered by Blogger.