ವಿಜಯಪುರ : ಸರಕಾರ ನೈಟ್ ಕರ್ಪ್ಯೂ ವಾಪಸ್ ಪಡೆಯಬೇಕು ಎಂದು ಯತ್ನಾಳ ಸಿಎಂಗೆ ಟಾಂಗ್ ಕೊಟ್ಟಿದ್ದಾರೆ ರಾತ್ರಿ ಕರ್ಫ್ಯೂ ಗೆ ಅರ್ಥಾನೆ ಇಲ್ಲ ತಕ್ಷಣ ವಾಪಸ್ ಪಡೆಯಬೇಕು ನೈಟ್ ಕರ್ಫ್ಯೂ ಗೆ ಸರಿಯಾದ ಮಾರ್ಗ ಸೂಚಿಯೂ ಇಲ್ಲಾ, ಏನೂ ಇಲ್ಲಾ ಎಲ್ಲವೂ ಗೊಂದಲವಾಗಿದೆ ಜನರು ಹಗಲು ಹೊತ್ತಿನಲ್ಲಿ ಓಡಾಡ್ತಾರೆ, ಹಾಗಾಗಿ ಹಗಲು ಹೊತ್ತು ಸಾಮಾಜಿಕ ಅಂತರ ಸೇರಿದಂತೆ ಇತರೆ ನಿಯಮಗಳನ್ನು ಕಟ್ಟುನಿಟ್ಟಾಗಿ ಮಾಡಬೇಕಿದೆ.
ರಾತ್ರಿ ಎಲ್ಲರೂ ಮಲಕ್ಕೊಂಡಿರುತ್ತಾರೆ ಅವಾಗ ಕರ್ಫ್ಯೂ ಮಾಡಿದರೆ ಎನ್ ಪ್ರಯೋಜನ ಕೇವಲ ಒಂದಿಷ್ಟು ಸೆರೆ ಕುಡಿಯುವವರಿಗಾಗಿ ಕರ್ಫ್ಯೂ ಮಾಡಿದ್ರೆ ಏನೂ ಪ್ರಯೋಜನವಿಲ್ಲ ಕೆಲವರು ಸಾರಾಯಿ ಕುಡಿತಾರೆ, ಪಾರ್ಟಿ ಮಾಡ್ತಾರೆ ಅಂತ ಕರ್ಫ್ಯೂ ಮಾಡಿದ್ರೆ ಅರ್ಥವೇ ಇರುವುದಿಲ್ಲ ಆರೋಗ್ಯ ಇಲಾಖೆ ಯಾಕೆ ಇಂತಹ ನಿರ್ಣಯ ಮಾಡಿದ್ದಾರೋ ಗೊತ್ತಿಲ್ಲ ನೋಡಿ ಸಿಎಂ ಯಾಕೆ ಹೀಗೆ ತರಾತುರಿ ನಿರ್ಣಯ ಮಾಡಿದ್ದಾರೋ ಅಥವಾ ಅವರಿಂದ ಯಾರು ಮಾಡಿಸುತ್ತಿದ್ದಾರೋ ಗೊತ್ತಿಲ್ಲ ತಕ್ಷಣ ಮುಖ್ಯಮಂತ್ರಿಗಳು ಈ ನೈಟ್ ಕರ್ಫ್ಯೂ ವಾಪಸ್ ಪಡೆಯಬೇಕು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಿಎಂಗೆ ಆಗ್ರಹಿಸಿದ್ದಾರೆ..
ನೈಟ್ ಕರ್ಪ್ಯೂ ವಾಪಸ್ ಪಡೆದಿಕ್ಕೊಳ್ಳಿ ಸಿಎಂ ಅವರೆ ಸಿಎಂಗೆ ಟಾಂಗ್ ಕೊಟ್ಟ ಬಸನಗೌಡ ಪಾಟೀಲ ಯತ್ನಾಳ...
Reviewed by News10Karnataka Admin
on
December 24, 2020
Rating:

No comments: