.

ಅನ್ನದಾತನಿಂದ ಲಂಚ ಪಡೆಯುವಾಗ ಅಧಿಕಾರಿ‌ ಎಸಿಬಿ ಬಲೆಗೆ ಎಲ್ಲಿ ಎನೂ‌ ಅಂತಿರಾ..ಒಂದು ಕ್ಷಣಾ ಲಿಂಕ್‌ಕ್ಲಿಕ್ ಮಾಡಿ...!

ಧಾರವಾಡ : ಜಮೀನಲ್ಲಿರುವ ಗಿಡಗಳನ್ನು ಕಡಿಯಲು ಲಂಚ ಕೇಳಿದ ತೋಟಗಾರಿಕೆ ಇಲಾಖೆಯ ಅಧಿಕಾರಿಯೊಬ್ಬರು ಎಸಿಬಿ ಬಲೆಗೆ ಬಿದ್ದಿರುವ ಘಟನೆಯ ಯೋಂದು ಧಾರವಾಡ ಜಿಲ್ಲೆಯಲ್ಲಿ ನಡೆದಿದೆ. ಧಾರವಾಡ ಜಿಲ್ಲೆಯ ಕುಂದಗೋಳ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಪರಶುರಾಮ ಹಲಕರಣಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಧಾರವಾಡದ ಹೊಟೇಲ್ ಮುಂದೆ ರೈತರಿಂದ 40 ಸಾವಿರ ರೂಪಾಯಿ ತಗೆದುಕೊಳ್ಳುವಾಗ ಎಸಿಬಿ ಅಧಿಕಾರಿಗಳ ಬಲೆಗೆ ಅಧಿಕಾರಿ ರೆಡ್ ಹ್ಯಾಂಡ ಆಗಿ ಬಿದ್ದಿದ್ದಾರೆ. 

ಕುಂದಗೋಳದ ಮುತ್ತಣಗೌಡ ಎಸ್ ಗಂಗನಗೌಡರ ಇವರ ಜಮೀನನ್ನು ರಸ್ತೆಗಾಗಿ ಸರ್ಕಾರ ಸ್ವಾಧೀನಕ್ಕೊಳಪಡಲಿದೆ. ಜಮೀನಿನಲ್ಲಿದ್ದ ಗಿಡಗಳನ್ನು ಕಡಿಯಲು ಅನುಮತಿ ಅವಶ್ಯಕವಿತ್ತು.ಅನುಮತಿ ನೀಡಲು ಜಮೀನಿನ ರೈತನಿಂದ 40 ಸಾವಿರ ರೂಪಾಯಿ ಬೇಡಿಕೆ ಇಟ್ಟಿದ್ದರು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರು ಹಣದ ಬೇಡಿಕೆ ಇಟ್ಟು ಇಂದು ಧಾರವಾಡದಲ್ಲಿ ಹಣವನ್ನು ಕೊಡಿ ಅನುಮತಿ ನೀಡುತ್ತೆನೆ ಎಂದಿದ್ದರು...ಕುಂದಗೋಳದಿಂದ ಹಣತಂದು  ಧಾರವಾಡಗೆ ಬಂದಿದ್ದ ರೈತ ಮುತ್ತಣಗೌಡ ಅವರಿಂದ ಹಣವನ್ನು ಪಡೆಯುವಾಗ ಅಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದಾರೆ. 

ಡಿಎಸ್ಪಿ ವೇಣುಗೋಪಾಲ ಅವರ ನೇತ್ರತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇನಸ್ಪೇಕ್ಟರ್ ಅಧಿಕಾರಿಗಳಾದ ಬಿ ಎ ಜಾಧವ, ಮಂಜುನಾಥ ಹಿರೇಮಠ, ಕಾರ್ಯಾಚರಣೆಯಲ್ಲಿ ಎಸಿಬಿ ಇಲಾಖೆಯ ಸಿಬ್ಬಂದಿಗಳಾದ ಶ್ರೀಶೈಲ ಕಾಜಗಾರ , ಲೊಕೇಶ ಬೆಂಡಿಕಾಯಿ, ಶಿವಾನಂದ ಕೆಲೂಡಿ, ಗಿರೀಶ ಮನಸೂರ ಸೇರಿದಂತೆ ಹಲವು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.


ಅನ್ನದಾತನಿಂದ ಲಂಚ ಪಡೆಯುವಾಗ ಅಧಿಕಾರಿ‌ ಎಸಿಬಿ ಬಲೆಗೆ ಎಲ್ಲಿ ಎನೂ‌ ಅಂತಿರಾ..ಒಂದು ಕ್ಷಣಾ ಲಿಂಕ್‌ಕ್ಲಿಕ್ ಮಾಡಿ...! ಅನ್ನದಾತನಿಂದ ಲಂಚ ಪಡೆಯುವಾಗ ಅಧಿಕಾರಿ‌ ಎಸಿಬಿ ಬಲೆಗೆ ಎಲ್ಲಿ ಎನೂ‌ ಅಂತಿರಾ..ಒಂದು ಕ್ಷಣಾ ಲಿಂಕ್‌ಕ್ಲಿಕ್ ಮಾಡಿ...! Reviewed by News10Karnataka Admin on December 14, 2020 Rating: 5

No comments:

Powered by Blogger.