.

ಎರಡು ಹಂತದ ಮತದಾನದ ಎಲ್ಲ ಕಂಪ್ಲೀಟ್ ಚಿತ್ರಣ ಯಾವ ತಾಲೂಕಿನಲ್ಲಿ ಎಷ್ಟೆಷ್ಟು ಮತದಾನವಾಯ್ತು....ಎಂಬುದರ ಕಂಪ್ಲೀಟ್ ಚಿತ್ರಣ...

ಗ್ರಾಮ ಪಂಚಾಯತ ಸಾರ್ವತ್ರಿಕ ಚುನಾವಣೆ-2020

ಧಾರವಾಡ : ಜಿಲ್ಲೆಯಲ್ಲಿ ಡಿ.22 ಮತ್ತು ಡಿ.27 ರಂದು ಜರುಗಿದ ಗ್ರಾಮ ಪಂಚಾಯತಿಗಳ ಚುನಾವಣೆಯಲ್ಲಿ ಒಟ್ಟು 4,86,288 ಜನ ಮತ ಚಲಾಯಿಸಿದ್ದು, ಒಟ್ಟಾರೆ ಶೇ.81.71 ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು

ಜಿಲ್ಲೆಯಲ್ಲಿ ಮೊದಲ ಹಂತದ ಗ್ರಾಮ ಪಂಚಾಯತ ಚುನಾವಣೆ ಡಿಸೆಂಬರ್ 22 ರಂದು  ಧಾರವಾಡ , ಅಳ್ನಾವರ ಮತ್ತು ಕಲಘಟಗಿ ತಾಲೂಕುಗಳ 65 ಗ್ರಾಮ ಪಂಚಾಯತಗಳಲ್ಲಿ ಜರುಗಿದ್ದು, ಈ ಗ್ರಾ.ಪಂ  ವ್ಯಾಪ್ತಿಯಲ್ಲಿನ 2,81,274 ಮತದಾರರ ಪೈಕಿ  ಒಟ್ಟು 2.33,833  ಮತದಾರರು ತಮ್ಮ ಮತ ಚಲಾಯಿಸಿದ್ದು ಶೇ.83.13 ರಷ್ಟು ಮತದಾನವಾಗಿದೆ ಮತ್ತು   ಎರಡನೇ ಹಂತದ     ಗ್ರಾಮ ಪಂಚಾಯತ ಚುನಾವಣೆ ಡಿಸೆಂಬರ್ 27 ರಂದು ಹುಬ್ಬಳ್ಳಿ, ಕುಂದಗೋಳ, ಅಣ್ಣಿಗೇರಿ ಮತ್ತು ನವಲಗುಂದ ತಾಲೂಕುಗಳ 71 ಗ್ರಾಮ ಪಂಚಾಯತಗಳಲ್ಲಿ ಜರುಗಿದ್ದು, ಈ ಗ್ರಾ.ಪಂ  ವ್ಯಾಪ್ತಿಯಲ್ಲಿನ 3,13,800 ಮತದಾರರ ಪೈಕಿ ಒಟ್ಟು 2,52,455 ಮತದಾರರು ತಮ್ಮ ಮತ ಚಲಾಯಿಸಿದ್ದು ಶೇ.80.41 ರಷ್ಟು ಮತದಾನವಾಗಿದೆ. ಒಟ್ಟಾರೆ ಜಿಲ್ಲೆಯ 136 ಗ್ರಾಮ ಪಂಚಾಯತಿಗಳ   ಚುನಾವಣೆಯಲ್ಲಿ ಒಟ್ಟು 4,86,288 ಮತದಾರರು ಮತ ಚಲಾಯಿಸಿದ್ದು, ಅಂತಿಮವಾಗಿ ಒಟ್ಟು ಶೇ.81.71 ರಷ್ಟು ಮತದಾನವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು ಗ್ರಾಮ ಪಂಚಾಯತ ಚುನಾವಣೆ ಡಿಸೆಂಬರ್ 22 ರಂದು ಧಾರವಾಡ, ಅಳ್ನಾವರ, ಮತ್ತು ಕಲಘಟಗಿ ತಾಲೂಕುಗಳಲ್ಲಿ ಶಾಂತಯುವಾಗಿ ಚುನಾವಣೆ ಜರುಗಿತು. ಒಟ್ಟು 65 ಗ್ರಾಮ ಪಂಚಾಯತಿಗಳು, ಮತದಾನ ನಡೆದ ಒಟ್ಟು ಮತಗಟ್ಟೆಗಳು 412  ಮತ್ತು ಒಟ್ಟು   2,33,833 ಜನ ಮತ ಚಲಾಯಿಸಿದ್ದು,  ಶೇ. 83.13 ರಷ್ಟು ಮತದಾನವಾಗಿದೆ 
ಧಾರವಾಡ ತಾಲೂಕಿನಲ್ಲಿ ಒಟ್ಟು 34 ಗ್ರಾಮ ಪಂಚಾಯತಿಗಳಿಗೆ, 238 ಮತಗಟ್ಟೆಗಳಲ್ಲಿ ಮತದಾನ ನಡೆದಿದೆ. ಒಟ್ಟು ಮತ ಚಲಾಯಿಸಿದವರ ಸಂಖ್ಯೆ 1,33,715 (ಪುರುಷ-70,112,  ಮಹಿಳೆ-  63,603) ಆಗಿದ್ದು,  ಶೇ. 81.39 ರಷ್ಟು ಮತದಾನವಾಗಿದೆ.

ಅಳ್ನಾವರ ತಾಲೂಕಿನಲ್ಲಿ ಒಟ್ಟು 4 ಗ್ರಾಮ ಪಂಚಾಯತಿಗಳ 21 ಮತಗಟ್ಟೆಗಳಲ್ಲಿ ಮತದಾನ ನಡೆದಿದೆ. ಒಟ್ಟು ಮತ ಚಲಾಯಿಸಿದವರ ಸಂಖ್ಯೆ 12,599 (ಪುರುಷ-6,576, ಮಹಿಳೆ- 6,023) ಆಗಿದ್ದು,  ಶೇ. 84.18 ರಷ್ಟು ಮತದಾನವಾಗಿದೆ.

ಕಲಘಟಗಿ ತಾಲೂಕಿನಲ್ಲಿ ಒಟ್ಟು 27 ಗ್ರಾಮ ಪಂಚಾಯತಿಗಳ 153 ಮತಗಟ್ಟೆಗಳಲ್ಲಿ ಮತದಾನ ನಡೆದಿದೆ. ಒಟ್ಟು ಮತ ಚಲಾಯಿಸಿದವರ ಸಂಖ್ಯೆ 87,519 (ಪುರುಷ-46,303,  ಮಹಿಳೆ- 41,216) ಆಗಿದ್ದು,  ಶೇ. 85.78 ರಷ್ಟು ಮತದಾನವಾಗಿದೆ.
ಎರಡನೆ ಹಂತದ ಗ್ರಾಮ ಪಂಚಾಯತ ಚುನಾವಣೆ ಡಿಸೆಂಬರ್ 27 ರಂದು ಹುಬ್ಬಳ್ಳಿ, ಕುಂದಗೋಳ, ನವಲಗುಂದ ಮತ್ತು ಅಣ್ಣೀಗೆರಿ ತಾಲೂಕುಗಳಲ್ಲಿ ಶಾಂತಯುವಾಗಿ ಚುನಾವಣೆ ಜರುಗಿತು,  71 ಗ್ರಾಮ ಪಂಚಾಯತಿಗಳ 455 ಮತಗಟ್ಟೆಗಳಲ್ಲಿ, ಒಟ್ಟು ಮತ ಚಲಾಯಿಸಿದವರ ಸಂಖ್ಯೆ 2,52,455 ಆಗಿದ್ದು,  ಶೇ.80.41 ರಷ್ಟು ಮತದಾನವಾಗಿದೆ 

ಹುಬ್ಬಳ್ಳಿ ತಾಲೂಕಿನಲ್ಲಿ ಒಟ್ಟು 26 ಗ್ರಾಮ ಪಂಚಾಯತಿಗಳ 159 ಮತಗಟ್ಟೆಗಳಲ್ಲಿ ಮತದಾನ ನಡೆದಿದೆ. ಒಟ್ಟು ಮತ ಚಲಾಯಿಸಿದವರ ಸಂಖ್ಯೆ 90,653 (ಪುರುಷ- 47,209,  ಮಹಿಳೆ- 43,444) ಆಗಿದ್ದು, ಶೇ. 81.53 ರಷ್ಟು ಮತದಾನವಾಗಿದೆ.

ಕುಂದಗೋಳ ತಾಲೂಕಿನಲ್ಲಿ ಒಟ್ಟು 23 ಗ್ರಾಮ ಪಂಚಾಯತಿಗಳ 157 ಮತಗಟ್ಟೆಗಳಲ್ಲಿ ಮತದಾನ ನಡೆದಿದೆ. ಒಟ್ಟು ಮತ ಚಲಾಯಿಸಿದವರ ಸಂಖ್ಯೆ 85,749 (ಪುರುಷ- 45,161, ಮಹಿಳೆ- 40,588) ಆಗಿದ್ದು,  ಶೇ. 80.45 ರಷ್ಟು ಮತದಾನವಾಗಿದೆ.

ನವಲಗುಂದ ತಾಲೂಕಿನಲ್ಲಿ ಒಟ್ಟು 14 ಗ್ರಾಮ ಪಂಚಾಯತಿಗಳ 90 ಮತಗಟ್ಟೆಗಳಲ್ಲಿ ಮತದಾನ ನಡೆದಿದೆ. ಒಟ್ಟು ಮತ ಚಲಾಯಿಸಿದವರ ಸಂಖ್ಯೆ 48,828 (ಪುರುಷ- 25,967 ಮಹಿಳೆ- 22,861) ಆಗಿದ್ದು,  ಶೇ. 77.80 ರಷ್ಟು ಮತದಾನವಾಗಿದೆ.

ಅಣ್ಣಿಗೇರಿ ತಾಲೂಕಿನಲ್ಲಿ ಒಟ್ಟು 08 ಗ್ರಾಮ ಪಂಚಾಯತಿಗಳ 49 ಮತಗಟ್ಟೆಗಳಲ್ಲಿ ಮತದಾನ ನಡೆದಿದೆ. ಒಟ್ಟು ಮತ ಚಲಾಯಿಸಿದವರ ಸಂಖ್ಯೆ 27,225 (ಪುರುಷ- 14,250,  ಮಹಿಳೆ- 12,975) ಆಗಿದ್ದು, ಶೇ. 81.86 ರಷ್ಟು ಮತದಾನವಾಗಿದೆ.

ಕಲಘಟಗಿ ತಾಲೂಕಿನ ಬಮ್ಮಗಟ್ಟಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಒರ್ವ ಹಾಗೂ ಹುಬ್ಬಳ್ಳಿ ತಾಲೂಕಿನ ಶೇರೆವಾಡ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಒರ್ವ ಕೋವಿಡ್ ಸೋಂಕಿತ ಮತದಾರರು ಎಲ್ಲ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಮತದಾನ ಮಾಡಿದ್ದಾರೆ.

ಎರಡನೇ ಹಂತದ ಚುನಾವಣೆಯಲ್ಲಿ ಬರುವ ಹುಬ್ಬಳ್ಳಿ ತಾಲೂಕಿನ ಕಟ್ನೂರ ಗ್ರಾಮ ಪಂಚಾಯಿತಿಯ ಮತಗಟ್ಟೆ ಸಂಖ್ಯೆ 108, 109 ಮತ್ತು ನವಲಗುಂದ ತಾಲೂಕಿನ ಬೆಳವಟಗಿ ಗ್ರಾಮ ಪಂಚಾಯಿತಿಯ ಅಮರಗೋಳ ಗ್ರಾಮದ ಮತಗಟ್ಟೆ ಸಂಖ್ಯೆ  72, 73, 74 ಹಾಗೂ 74ಎ ರಲ್ಲಿ ಮತದಾನ ಜರುಗಿರುವುದಿಲ್ಲ.  

ಒಟ್ಟಾರೆಯಾಗಿ ಧಾರವಾಡ ಜಿಲ್ಲೆಯ ಎರಡೂ ಹಂತದ ಗ್ರಾಮ ಪಂಚಾಯತ ಚುನಾವಣೆಗಳಲ್ಲಿ  ಗ್ರಾಮ ಪಂಚಾಯತಗಳ ವ್ಯಾಪ್ತಿಯ ಒಟ್ಟು 5,95,074 ಮತದಾರರ ಪೈಕಿ 4,86,288 ಮತದಾರರು ತಮ್ಮ ಮತದಾನದ ಹಕ್ಕು ಚಲಾಯಿಸಿದ್ದು, ಒಟ್ಟಾರೆ ಜಿಲ್ಲೆಯಲ್ಲಿ ಶೇ.81.71 ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.
ಎರಡು ಹಂತದ ಮತದಾನದ ಎಲ್ಲ ಕಂಪ್ಲೀಟ್ ಚಿತ್ರಣ ಯಾವ ತಾಲೂಕಿನಲ್ಲಿ ಎಷ್ಟೆಷ್ಟು ಮತದಾನವಾಯ್ತು....ಎಂಬುದರ ಕಂಪ್ಲೀಟ್ ಚಿತ್ರಣ... ಎರಡು ಹಂತದ ಮತದಾನದ ಎಲ್ಲ ಕಂಪ್ಲೀಟ್ ಚಿತ್ರಣ ಯಾವ ತಾಲೂಕಿನಲ್ಲಿ ಎಷ್ಟೆಷ್ಟು ಮತದಾನವಾಯ್ತು....ಎಂಬುದರ ಕಂಪ್ಲೀಟ್ ಚಿತ್ರಣ... Reviewed by News10Karnataka Admin on December 28, 2020 Rating: 5

No comments:

Powered by Blogger.