ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಅಲೆ ಎರಡನೇ ಬಾರಿಗೆ ಅಪ್ಪಳಿಸುವ ಅಪಾಯವಿರುವ ಹಿನ್ನೆಲೆಯಲ್ಲಿ ರಾತ್ರಿ ಕರ್ಫ್ಯೂ ವಿಧಿಸುವ ಸಾಧ್ಯತೆ ಇದೆ. ಈ ಸಂಬಂಧದ ತಾಂತ್ರಿಕ ಸಲಹಾ ಸಮಿತಿ ರಾಜ್ಯ ಸರಕಾರಕ್ಕೆ ವರದಿ ನೀಡಿದ್ದು, ಈ ತಿಂಗಳಾಂತ್ಯದಲ್ಲಿ ರಾತ್ರಿ ಕರ್ಫ್ಯೂಗೆ ಸಲಹೆ ನೀಡಿದೆ. ಡಿಸೆಂಬರ್ ವರ್ಷಾಂತ್ಯವಾಗಿರುವದರಿಂದ ಹೊಸವರ್ಷಾಚರಣೆಯಲ್ಲಿ ಜನತೆ ಮೈ ಮರೆಯುವ ಅಪಾಯವಿದೆ.
ಹಾಗಾಗಿ ಈ ತಿಂಗಳ 26ರಿಂದ ಜನೆವರಿ 2ರ ವರೆಗೂ ರಾತ್ರಿ ಕರ್ಫ್ಯೂ ವಿಧಿಸುವುದು ಹೆಚ್ಚು ಸುರಕ್ಷಿತ ಎಂದು ತಿಳಿಸಿದೆ.
ರಾಷ್ಟ್ರ ಹಾಗೂ ಬೇರೆ ರಾಷ್ಟ್ರಗಳಲ್ಲಿ ಕೂಡ ಕೊರೋನಾ 2ನೇ ಅಲೆ ಅಪ್ಪಳಿಸಿ ಸಾಕಷ್ಟು ಅನಾಹುತ ಸೃಷ್ಟಿಸಿದೆ. ಹಾಗಾಗಿ ಮೈ ಮರೆತು ಅಪಾಯಕ್ಕೆ ಆಹ್ವಾನ ನೀಡುವ ಮೊದಲೇ ಎಚ್ಚೆತ್ತುಕೊಳ್ಳಬೇಕು ಎನ್ನುವ ಸಲಹೆ ನೀಡಲಾಗಿದೆ...
ಮತ್ತೆ ನೈಟ್ ಕರ್ಫ್ಯೂ ಜಾರಿ ಆಗುತ್ತಂತೆ ಇಲ್ಲಿದೆ ಪುಲ್ ಡಿಟೇಲ್....
Reviewed by News10Karnataka Admin
on
December 02, 2020
Rating:

No comments: