.

ಕುಮಾರಸ್ವಾಮಿ ವಿರುದ್ದ ಉಗ್ರ ರೂಪ ತಾಳಿದ ಉಗ್ರಪ್ಪ...!

ಚಿತ್ರದುರ್ಗ : ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ದ ಉಗ್ರಪ್ಪ ವಾಗ್ದಾಳಿ ನಡೆಸಿದ್ದಾರೆ.ಚಿತ್ರದುರ್ಗದಲ್ಲಿ ಮಾತನಾಡಿದ ಅವ್ರು ಈಗ ಬಿಜೆಪಿಯವರು ಉತ್ತಮ ಎಂದು ಕುಮಾರಸ್ವಾಮಿ ಹೇಳ್ತಿದ್ದಾರೆ,ಆದ್ರೆ ತಾವು ಸಿಎಂ ಆಗಿದ್ದಾಗ ಬಿಜೆಪಿ ವಿರುದ್ದ ಮಾತನಾಡಿರುವ ರೆಕಾರ್ಡ್ ಇವೆ.ಆಪರೇಷನ್ ಕಮಲ ಬಿಜೆಪಿಯವರೇ ಮಾಡಿದ್ದು,ಎಂದು ಅವರೇ ಹೇಳಿದ್ದಾರೆ.
ಕಾಂಗ್ರೆಸ್ ಬೆಂಬಲದಿಂದಲೇ ದೇವೆಗೌಡ್ರು ಪ್ರಾಧಾನಿ ಆಗಿದ್ದು,ಕುಮಾರಸ್ವಾಮಿ ಅವ್ರು ಕೂಡ ನಮ್ಮ ಬೆಂಬಲದಿಂದ ಸಿಎಂ ಆಗಿದ್ದು,ಈಗ ಎಚ್.ಡಿ.ಕೆ ಹೇಳಿಕೆ ನೋಡಿದ್ರೆ ಎಲ್ಲೋ ಒಂದ್ಕಡೆ ಬಿಜೆಪಿ ಜೊತೆ ಹೊಂದಾಣಿಕೆ ಮಾಡ್ಕೊಂಡಂತಿದೆ ಎಂದು ಕಿಡಿ ಕಾರಿದ್ದಾರೆ. 

ಕಾಂಗ್ರೆಸ್ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂಬ ಹೆಚ್.ಡಿಕೆ ಹೇಳಿಕೆ ತಿರುಗೇಟು ನೀಡಿದ ಉಗ್ರಪ್ಪ ನಿಮಗೆ ಸ್ವಂತ ಬಲದ ಮೇಲೆ ಬರುವ ಆಗಿದ್ರೆ ಪ್ರಯತ್ನ ಮಾಡಿ,ಅವರ ದ್ವಂದ್ವ ಹೇಳಿಕೆ ನೋಡಿದ್ರೆ ರಾಜಕೀಯವಾಗಿ ಹತಾಶರಾಗಿದ್ದಾರೆ.ಇಲ್ಲಾಂದ್ರೆ ಬಿಜೆಪಿಯವರು ಅವರ ಮೇಲೆ ಒತ್ತಡದ ತಂತ್ರಗಳನ್ನ ಪ್ರಯೋಗ ಮಾಡ್ತಿರಬೇಕು ಅನ್ನಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ....


ಕುಮಾರಸ್ವಾಮಿ ವಿರುದ್ದ ಉಗ್ರ ರೂಪ ತಾಳಿದ ಉಗ್ರಪ್ಪ...! ಕುಮಾರಸ್ವಾಮಿ ವಿರುದ್ದ ಉಗ್ರ ರೂಪ ತಾಳಿದ ಉಗ್ರಪ್ಪ...! Reviewed by News10Karnataka Admin on December 10, 2020 Rating: 5

No comments:

Powered by Blogger.