.

ಮಾಜಿ ಶಾಸಕ ಕೊನರೆಡ್ಡಿ‌ ಎದುರು ಆ ಶಿಕ್ಷಕ್ಕ‌ ಬಿಕ್ಕಿ ಬಿಕ್ಕಿ ಅತ್ತಿದ್ದಾದ್ರೂ ಯಾಕೆ..?

ಧಾರವಾಡ : ಧಾರವಾಡದಲ್ಲಿ ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ನೇತೃತ್ವದಲ್ಲಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹ ವನ್ನ ಅಖಂಡ ಕರ್ನಾಟಕದ ಪರವಾಗಿ ಧಾರವಾಡ ಜಿಲ್ಲಾಡಳಿತ ಕಚೇರಿ ಎದುರು ಪ್ರತಿಬಟನೆ ನಡೆಸುತ್ತಿದ್ದಾರೆ...
ಪ್ರತಿಭಟನೆಯಲ್ಲಿ ವಿಧಾನ ಪರಿಷ್ಯತ್ ಸದಸ್ಯ ಬಸವರಾಜ ಹೊರಟ್ಟಿ ಭಾಗಿಯಾಗಿದ್ದಾರೆ..ಎರಡನೇಯ ದಿನವೂ  ಇಂದು ಪ್ರತಿಬಟನೆಯ ಕಾವು ಜೋರಾಗಿದೆ.ಇನ್ನು ಮಾಜಿ‌ ಶಾಸಕರ ಎದುರಿಗೆ ಬಿಕ್ಕಿ ಬಿಕ್ಕಿ ಅತ್ತಿದ್ದಾನೆ..
ಶಿಕ್ಷಕನೋರ್ವ ಗಳಗಳನೇ ಕಣ್ಣೀರು ಹಾಕಿರುವ ಘಟನೆ ನಡೆದಿದೆ ಹಿರೇಕೆರೂರು ತಾಲೂಕಿನ ಹಂಸಬಾವಿ ಗ್ರಾಮದ ಮಕ್ಬುಲ್ ಅಹ್ಮದ್ ಎಂಬಾತ ಶಿಕ್ಷಕ ಮಾಜಿ‌ ಶಾಸಕ ಎನ್.ಎಚ್.ಕೋನರೆಡ್ಡಿ ಅವರೆದುರು ಗಳಗಳನೇ ಅತ್ತಿದ್ದಾನೆ.ನಾನು ಕಳೆದ 20 ವರ್ಷಗಳಿಂದ ಅನುದಾನ ರಹಿತ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದು,ಕೇವಲ ತಿಂಗಳಿಗೆ 6ಸಾವಿರ ವೇತನ ಕೊಡುತ್ತಿದ್ದಾರೆ.ಇದ್ರಿಂದ ಜೀವನ ನಡೆಸುವುದೇ ಕಷ್ಟವಾಗಿದೆ ಎಂದು ತನ್ನ ಅಳಲನ್ನು ತೋಡಿಕೊಂಡಿದ್ದಾನೆ.
ಮಾಜಿ ಶಾಸಕ ಕೊನರೆಡ್ಡಿ‌ ಎದುರು ಆ ಶಿಕ್ಷಕ್ಕ‌ ಬಿಕ್ಕಿ ಬಿಕ್ಕಿ ಅತ್ತಿದ್ದಾದ್ರೂ ಯಾಕೆ..? ಮಾಜಿ ಶಾಸಕ ಕೊನರೆಡ್ಡಿ‌ ಎದುರು ಆ ಶಿಕ್ಷಕ್ಕ‌ ಬಿಕ್ಕಿ ಬಿಕ್ಕಿ ಅತ್ತಿದ್ದಾದ್ರೂ ಯಾಕೆ..? Reviewed by News10Karnataka Admin on December 06, 2020 Rating: 5

No comments:

Powered by Blogger.