.

ಗೋಹತ್ಯೆ ಬಗ್ಗೆ ಕೋರ್ ಕಮಿಟಿ ಸಭೆಯಲ್ಲಿ ಅರವಿಂದ‌ ಲಿಂಬಾವಳಿ ಹೇಳಿದ್ದು ಎನ್ ಗೊತ್ತಾ...?

ಬೆಳಗಾವಿ : ಗೋ ಹತ್ಯೆ ನಿಷೇಧಿಸುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎನ್ನುವ ಆಕ್ರೋಶ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿರುವ ಹಿನ್ನಲೆಯಲ್ಲಿ, ಇದೇ ವಿಷಯ ಟೀಕೆಗೆ ಗುರಿಯಾಗುತ್ತಿರುವದನ್ನು ತಪ್ಪಿಸಲು ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ವ್ಯಾಪಕ ಚರ್ಚೆ ನಡೆಯಲಿದೆ ಎಂದು  ಕೋರ್ ಕಮಿಟಿ ಸದಸ್ಯ ಅರವಿಂದ ಲಿಂಬಾವಳಿ ಹೇಳಿದ್ದಾರೆ..
ಶುಕ್ರವಾರ ರಾತ್ರಿ ಬೆಳಗಾವಿಯಲ್ಲಿ ನಡೆದ ಕೋರ್ ಕಮೀಟಿ ಸಭೆಯಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಇನ್ನಷ್ಟು ಪ್ರಬಲಗೊಳಿಸಲು ಕಾರ್ಯಕಾರಿಣಿ ಸಭೆಯಲ್ಲಿ ಸುಧೀರ್ಘ ಚರ್ಚೆ ಮಾಡುವ ತೀರ್ಮಾನ ಕೈಗೊಳ್ಳಲಾಗಿವುದು ಜೊತೆಗೆ ಲವ್ ಜಿಹಾದ್ ಗೆ ಕಡಿವಾಣ ಹಾಕಲು ಪ್ರಬಲ ಕಾನೂನು ರಚಿಸುವಂತೆ ಸರ್ಕಾರವನ್ನು ಒತ್ತಾಯಿಸುವ ಕುರಿತು ಕಾರ್ಯಕಾರಿಣಿ ಸಭೆಯಲ್ಲಿ ಚರ್ಚೆ ಆಗಲಿದೆ ಎನ್ನುವ ಮಾಹಿತಿಯನ್ನು ಕೂಡ ಅವರೇ ಮಾದ್ಯಮಗಳಿಗೆ ಹೇಳಿಕೆ‌ ನೀಡಿದ್ದಾರೆ.ಪ್ರೀತಿಸುವದು ತಪ್ಪಲ್ಲ,ಪ್ರೀತಿಸಿ ಮದುವೆ ಆಗೋದು ತಪ್ಪಲ್ಲ ಆದ್ರೆ ಪ್ರೀತಿಯ ಹೆಸರಿನಲ್ಲಿ ಮತಾಂತರ ನಡೆದಿದೆ,ಇದಕ್ಕೆ ಕಡಿವಾಣ ಹಾಕಲು ಪ್ರಬಲ ಕಾನೂನು ರಚಿಸುವಂತೆ ಸರ್ಕಾರವನ್ನು ಒತ್ತಾಯಿಸುವ ಚರ್ಚೆ ಕೂಡ ನಡೆದಿದೆ.ಅಲ್ಲದೆ ಹಿಂದೆ ನಮ್ಮ ಸರ್ಕಾರ ಗೋಹತ್ಯೆ ನಿಷೇಧ ಜಾರಿ ತಂದಿದ್ವಿ ಆದ್ರೆ ರಾಜ್ಯಪಾಲರು ಅದನ್ನ ತಿರಸ್ಕರಿಸಿದ್ರು.

ನಂತರ ಬಂದಂತಹ ಕಾಂಗ್ರೆಸ್ ಸರ್ಕಾರ ಅದನ್ನ ಕತ್ತಲು ಕೋಣೆಯಲ್ಲಿಟ್ಟಿತ್ತು.ಹಾಗಾಗಿ ನಾಳೆ ಗಾಂಧಿ ಭವನದಲ್ಲಿ ನಡೆಯುವ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದ್ದೇವೆ ಎಂದ್ರು.ಇನ್ನೂ ಸಂಪುಟ ವಿಸ್ತರಣೆ ಇಲ್ಲವೇ ಪುನರ್ ರಚನೆ ಕೋರ್ ಕಮಿಟಿ ವ್ಯಾಪ್ತಿಗೆ ಬರಲ್ಲ,ಹಾಗಾಗಿ ಅರುಣ್ ಸಿಂಗ್ ಬಿಎಸ್ವೈ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತಾರೆ.ಇನ್ಮುಂದೆ ಯಾರಾದ್ರು ಸಂಪುಟ ವಿಸ್ತರಣೆ ಬಗ್ಗೆ ಬಹಿರಂಗ ಹೇಳಿಕೆ ನೀಡಿದ್ರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ರು....

ಗೋಹತ್ಯೆ ಬಗ್ಗೆ ಕೋರ್ ಕಮಿಟಿ ಸಭೆಯಲ್ಲಿ ಅರವಿಂದ‌ ಲಿಂಬಾವಳಿ ಹೇಳಿದ್ದು ಎನ್ ಗೊತ್ತಾ...? ಗೋಹತ್ಯೆ ಬಗ್ಗೆ ಕೋರ್ ಕಮಿಟಿ ಸಭೆಯಲ್ಲಿ ಅರವಿಂದ‌ ಲಿಂಬಾವಳಿ ಹೇಳಿದ್ದು ಎನ್ ಗೊತ್ತಾ...? Reviewed by News10Karnataka Admin on December 04, 2020 Rating: 5

No comments:

Powered by Blogger.