.

ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಯ ಬದ್ರ ಬುನಾದಿ‌ ಹಾಕಿದ ಸಾಹುಕಾರ ರಮೇಶ‌ ಜಾರಕಿಹೊಳಿ..ಮಾಡಿದ್ದಾದ್ರೂ ಎನೂ..?

ಬೆಂಗಳೂರು : ಕರ್ನಾಟಕ ರಾಜ್ಯದ ಬಯಲು ಸೀಮೆಗೆ ನೀರುಣಿಸುವ ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಯನ್ನು, ರಾಷ್ಟ್ರೀಯ ಯೋಜನೆಯನ್ನಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಲಿದೆ.ಈಗಾಗಲೇ ರಾಜ್ಯದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ಸತತ ಪ್ರಯತ್ನದ ಫಲವಾಗಿ ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಲು ಕೇಂದ್ರ ಜಲಶಕ್ತಿ ಸಚಿವರು ಸಮ್ಮತಿಸಿದ್ದಾರೆ.

ಕೋವಿಡ್ ಟೈಮ್ ನಲ್ಲಿ ಸುಮಾರು ಹನ್ನೊಂದು ಬಾರಿ ನವದೆಹಲಿಗೆ ತೆರಳಿ ಕೇಂದ್ರದ ಜಲಶಕ್ತಿ ಸಚಿವರನ್ನ ಭೇಟಿಯಾಗಿ ರಮೇಶ್ ಜಾರಕಿಹೊಳಿ ಅವ್ರು ಒತ್ತಾಯ ಮಾಡಿ ಪೂರಕ ದಾಖಲೆಯನ್ನ ನೀಡಿ ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಣೆ ಮಾಡುವಂತೆ ಒತ್ತಾಯ ಮಾಡಿದ್ದಾರೆ.ಹಾಗಾಗಿ ಅದರ ಫಲವಾಗಿ ಒಟ್ಟು ಅನುದಾನ ಶೇಕಡ 60ರಷ್ಟು ಕೇಂದ್ರ ಸರ್ಕಾರ ಹಾಗೂ ಉಳಿದ 40ರಷ್ಟು ರಾಜ್ಯ ಸರ್ಕಾರ ಹಣಕಾಸಿನ ನೆರವು ನೀಡಲಿದೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಈಗಾಗಲೇ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಕೂಡ ದೊರತಿದೆ.ಇನ್ನೂ ಇದ್ರಿಂದ ಬಯಲು ಸೀಮೆ ಪ್ರದೇಶಗಳಾದ ಚಿತ್ರದುರ್ಗ ದಾವಣಗೆರೆ ಹಾಗೂ ತುಮಕೂರು ಜಿಲ್ಲೆಯ ಜನರಿಗೆ ಕುಡಿಯುವ ನೀರು ದೊರಕಲಿದೆ....


ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಯ ಬದ್ರ ಬುನಾದಿ‌ ಹಾಕಿದ ಸಾಹುಕಾರ ರಮೇಶ‌ ಜಾರಕಿಹೊಳಿ..ಮಾಡಿದ್ದಾದ್ರೂ ಎನೂ..? ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಯ ಬದ್ರ ಬುನಾದಿ‌ ಹಾಕಿದ ಸಾಹುಕಾರ ರಮೇಶ‌ ಜಾರಕಿಹೊಳಿ..ಮಾಡಿದ್ದಾದ್ರೂ ಎನೂ..? Reviewed by News10Karnataka Admin on December 07, 2020 Rating: 5

No comments:

Powered by Blogger.