.

ನನ್ನ ‌ಹತ್ಯೆ‌ಗೆ ಸ್ಕೆಚ್‌ ವಿಚಾರ ಜಿರ್ಣಿಸಿಕ್ಕೊಳ್ಳಲು‌ ಆಗುತ್ತಿಲ್ಲ‌ ಎಂದ ಬಸವರಾಜ ಮುತಗಿ ಯಾಕೆ ಹಿಂಗೆ ಅಂದ್ರು ಗೊತ್ತಾ..?

  

ನನ್ನ ಹತ್ಯೆ ವಿಚಾರವನ್ನ ಅರಗಿಸಿಕೊಳ್ಳಲು ಆಗುತ್ತಿಲ್ಲಾ- ಮುತ್ತಗಿ 

ಧಾರವಾಡ : ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನದಿಂದ ದಿನಕ್ಕೆ ರೋಚಕ ಟ್ವಿಸ್ಟ್ ಗಳು ಸಿಗುತ್ತಾ ಹೊರಟಿದೆ.ಇಂದು ಮತ್ತೆ ಧಾರವಾಡ ಉಪನಗರ ಪೋಲಿಸ್ ಠಾಣೆಗೆ ಆರೋಪಿ ಬಸವರಾಜ್ ಮುತ್ತಗಿಯನ್ನ ಸಿಬಿಐ ಅಧಿಕಾರಿಗಳು ಕರೆಸಿದ್ರು. ಆವೇಳೆಯಲ್ಲಿ ಮಹತ್ವದ ಮಾಹಿತಿಯನ್ನ ಆರೋಪಿಗೆ ತಿಳಿಸಲಾಗಿದೆ ಎಂಬ ಮಾಹಿತಿ ಹೊರ ಬಿದ್ದಿದೆ.ವಿಚಾರಣೆ ಮುಗಿಸಿ ಹೊರಗೆ ಬಂದ ನಂತರ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಬಸವರಾಜ್ ಮುತ್ತಗಿ,ವಿಚಾರಣೆ ಬಗ್ಗೆ ಎಲ್ಲೂ ಮಾತನಾಡಲ್ಲ,ಇನ್ನೂ ವಿಚಾರಣೆ ನಡೆದಿದೆ.ನನ್ನ ಹತ್ಯೆ ವಿಚಾರವನ್ನ ಕೇಳಿ ಡೈಜಸ್ಟ್ ಮಾಡಿಕೊಳ್ಳಲು ಆಗುತ್ತಿಲ್ಲಾ.

ಜೊತೆಯಾಗಿ ಕುಳಿತುಕೊಂಡು ಸಾಕಷ್ಟು ಬಾರಿ ಊಟ ಮಾಡಿದ್ದೇವೆ,ಅವಾಗ್ಲೆ ಎರಡು ಹನಿ ವಿಷ ಕೊಟ್ಟಿದ್ರೆ ಖುಷಿ ಖುಷಿಯಾಗಿ ತಿಂದು ಬಿಡುತ್ತಿದ್ವಿ,ಈ ಲೆವಲ್ ಮಾಡೋದು ಅವರಿಗೂ ಶೋಭೆ ತರಲ್ಲಾ.ಮಹಾಭಾರತ ಶಕುನಿ ಅಂತ ಇರ್ತಾರಲ್ಲಾ ಹಂಗೆ ನಮ್ಮೆಲ್ಲರ ಬದುಕಲ್ಲಿ ಚಂದು ಮಾಮಾ ಎಂಟ್ರಿಯಾಗಿ ಬದುಕನ್ನೆ ಹಾಳು ಮಾಡಿದ್ದಾರೆ ಎಂದು ನೋವು ತೋಡಿಕೊಂಡ್ರು.ಅಲ್ಲದೇ ನೀವೇನು ದೂರು ಕೊಡ್ತಿರಿ ಎಂಬ ಪ್ರಶ್ನೆಗೆ ನಾನು ನಮ್ಮ ವಕೀಲರ ಜೊತೆ ಮಾತನಾಡುತ್ತೇನೆ.ನನ್ನ ಹತ್ಯೆ ಸ್ಕೆಚ್ ಬಗ್ಗೆ ಇನ್ನೂ ತನಿಖೆ ನಡೆದಿದೆ. ರಿಸ್ಕ್ ಅನ್ನೋದಕ್ಕಿಂತ ಭಾವನೆಗಳ ಜೊತೆ ಯಾರು ಆಟವಾಡಬಾರದು ಎಂದು ಪ್ರತಿಕ್ರಿಯೆ ನೀಡಿದ್ದಾರೆ....
ನನ್ನ ‌ಹತ್ಯೆ‌ಗೆ ಸ್ಕೆಚ್‌ ವಿಚಾರ ಜಿರ್ಣಿಸಿಕ್ಕೊಳ್ಳಲು‌ ಆಗುತ್ತಿಲ್ಲ‌ ಎಂದ ಬಸವರಾಜ ಮುತಗಿ ಯಾಕೆ ಹಿಂಗೆ ಅಂದ್ರು ಗೊತ್ತಾ..? ನನ್ನ ‌ಹತ್ಯೆ‌ಗೆ ಸ್ಕೆಚ್‌ ವಿಚಾರ ಜಿರ್ಣಿಸಿಕ್ಕೊಳ್ಳಲು‌ ಆಗುತ್ತಿಲ್ಲ‌ ಎಂದ ಬಸವರಾಜ ಮುತಗಿ ಯಾಕೆ ಹಿಂಗೆ ಅಂದ್ರು ಗೊತ್ತಾ..? Reviewed by News10Karnataka Admin on December 16, 2020 Rating: 5

No comments:

Powered by Blogger.