.

ವಿನಯ ಕುಲಕರ್ಣಿ ನಿವಾಸಕ್ಕೆ‌ ಸಿದ್ದರಾಮಯ್ಯ ಬೇಟಿ ನ್ಯಾಯ ಸಿಗುತ್ತೆ..ಕಾರ್ಯಕರ್ತರಿಗೆ ಸಿದ್ದು ಎನ್ ಹೇಳಿದ್ರಾ ಗೊತ್ತಾ..?

ಧಾರವಾಡ : ಸತ್ಯಕ್ಕೆ ಜಯ ಇದೆ ಎಂದು ಕಾರ್ಯಕರ್ತರಿಗೆ ದೈರ್ಯ ಹೇಳಿದ ಸಿದ್ದರಾಮಯ್ಯ.


ಜಿಲ್ಲಾ ಪಂಚಾಯತಿ ಸದಸ್ಯ ಯೋಗೇಶಗೌಡ ಹತ್ಯೆ ಪ್ರಕರಣದಲ್ಲಿ  ಜೈಲಿನಲ್ಲಿ ಬಂಧಿತ ಆಗಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರ  ಧಾರವಾಡ ನಗರದ ಶಿವಗಿರಿ ನಿವಾಸಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯನವರು ಭೇಟಿ ನೀಡಿದ್ರು.ಭೇಟಿ ವೇಳೆ ವಿನಯ ಕುಲಕರ್ಣಿ ಕುಟುಂಬಕ್ಕೆ ಆತ್ಮ ಸ್ಥೈರ್ಯದ ಜೊತೆಗೆ ಧೈರ್ಯ ತುಂಬಿದ್ದಾರೆ.ನಂತರ ಹೊರಗಡೆ ಬಂದ ನಂತರ ಕಾರ್ಯಕರ್ಯರ ಎದುರು ಅವರಿಗೆ ಧೈರ್ಯ ತುಂಬಲು ಬಂದಿದ್ದೆ,ಅವರಿಗೆ ನ್ಯಾಯ ಸಿಕ್ಕೆ ಸಿಗುತ್ತೆ ಎಲ್ಲ ಕಾರ್ಯಕರ್ತರು ಧೈರ್ಯದಿಂದ ಇರಿ ಎಂದಿದ್ದಾರೆ. ಸತ್ಯಕ್ಕೆ ಜಯ ಇದೆ ಎಲ್ಲರೂ ದೈರ್ಯದಿಂದ ಇರಿ ಎಂದು ಸಿದ್ದರಾಮಯ್ಯ ಅವರು ಕಾಂಗ್ರೆಸ್ ಕಾರ್ಯಕರ್ತರಿಗೆ ಹೇಳಿ ಹೊರ ನಡೆದರು 

ನಂತರ ಮಾಧ್ಯಮದವರ ಪ್ರತಿಕ್ರಿಯೆ ಗೆ ನಿರಾಕರಿಸಿ ನೋ ರಿಯಾಕ್ಷನ್ ಎಂದು ಸಿದ್ದರಾಮಯ್ಯ ಹುಬ್ಬಳ್ಳಿಯತ್ತ ಪ್ರಯಾಣ ಬೆಳಿಸಿದರು..ಇನ್ನು ಸಿದ್ದರಾಮಯ್ಯ ಅವರಿಗೆ ಕುಂದಗೋಳ ಶಾಸಕ ಕುಸುಮಾ ಶಿವಳ್ಳಿ, ಜಿಲ್ಲಾಧ್ಯಕ್ಷ  ಅನಿಲ ಪಾಟೀಲ, ಕಾಂಗ್ರೆಸ್ ಕಾರ್ಯಕರ್ತರು ಬಾಗಿಯಾಗಿದ್ದರು...
ವಿನಯ ಕುಲಕರ್ಣಿ ನಿವಾಸಕ್ಕೆ‌ ಸಿದ್ದರಾಮಯ್ಯ ಬೇಟಿ ನ್ಯಾಯ ಸಿಗುತ್ತೆ..ಕಾರ್ಯಕರ್ತರಿಗೆ ಸಿದ್ದು ಎನ್ ಹೇಳಿದ್ರಾ ಗೊತ್ತಾ..? ವಿನಯ ಕುಲಕರ್ಣಿ ನಿವಾಸಕ್ಕೆ‌ ಸಿದ್ದರಾಮಯ್ಯ ಬೇಟಿ ನ್ಯಾಯ ಸಿಗುತ್ತೆ..ಕಾರ್ಯಕರ್ತರಿಗೆ ಸಿದ್ದು ಎನ್ ಹೇಳಿದ್ರಾ ಗೊತ್ತಾ..? Reviewed by News10Karnataka Admin on December 13, 2020 Rating: 5

No comments:

Powered by Blogger.