.

ಜಿಲ್ಲಾಧಿಕಾರಿಯಿಂದ ‌ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗಳ ಸಭೆ..ಸಭೆಯಲ್ಲಿ ಎನ್ ನಡಿತು ಗೊತ್ತಾ..?

ಧಾರವಾಡ ಜಿಲ್ಲಾಧಿಕಾರಿಗಳಾದ ನಿತೇಶ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಇಂದು ಬೆಳಿಗ್ಗೆ ಕಚೇರಿ ಸಭಾಂಗಣದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರ ಅನುದಾನದ ಜಿಲ್ಲೆಯ  ವಿವಿಧ  ಕಾಮಗಾರಿಗಳ ಪ್ರಗತಿ ಪರಿಶೀಲನೆ ಹಾಗೂ ಇಲಾಖೆಗಳ ಆಂತರಿಕ ಸಮನ್ವಯ ಸಭೆ ಜರುಗಿತು..
ಸಭೆಯಲ್ಲಿ ಮಹಾನಗರ ಕಾನೂನು ಸುವ್ಯವಸ್ಥೆ ವಿಭಾಗದ ಉಪ ಪೊಲೀಸ್ ಆಯುಕ್ತ ರಾಮರಾಜನ್.ಕೆ., ಸ್ಮಾರ್ಟ್ ಸಿಟಿ ಯೋಜನೆಗಳ ಪ್ರಧಾನ ವಸ್ಥಾಪಕ ಶಕೀಲ್ ಅಹಮ್ಮದ, ಜಿಲ್ಲಾ ನಗರಾಭಿವೃದ್ಧಿ ಕೋಶದ ಪ್ರಭಾರಿ ಪಿಡಿ ಹಾಗೂ ಹುಡಾ ಆಯುಕ್ತ  ವಿನಾಯಕ ಪಾಲನಕರ,   ಮಹಾನಗರ ಪಾಲಿಕೆ ಜಂಟಿ ಆಯುಕ್ತ ಅಜೀಜ್ ದೇಸಾಯಿ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜನಿಯರ್ ಎಸ್.ಬಿ.ಚೌಡನ್ನವರ ಸೇರಿದಂತೆ 
ಬಿಆರ್ ಟಿಎಸ್, ಜಲಮಂಡಳಿ, ನಿರ್ಮಿತಿ ಕೇಂದ್ರ, ಎನ್.ಡಬ್ಲ್ಯೂ.ಕೆ.ಎಸ್.ಆರ್.ಟಿ.ಸಿ., ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಕೆಯುಐಡಿಎಪ್ ಸಿ, ಕೆಐಡಿಬಿ, ಪ್ರವಾಸೋದ್ಯಮ, ಹೆಸ್ಕಾಂ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿ, ವಿವಿಧ ಯೋಜನೆ, ಕಾಮಗಾರಿಗಳ ಪ್ರಗತಿ ವಿವರಿಸಿದರು.
ಜಿಲ್ಲಾಧಿಕಾರಿಯಿಂದ ‌ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗಳ ಸಭೆ..ಸಭೆಯಲ್ಲಿ ಎನ್ ನಡಿತು ಗೊತ್ತಾ..? ಜಿಲ್ಲಾಧಿಕಾರಿಯಿಂದ ‌ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗಳ ಸಭೆ..ಸಭೆಯಲ್ಲಿ ಎನ್ ನಡಿತು ಗೊತ್ತಾ..? Reviewed by News10Karnataka Admin on December 28, 2020 Rating: 5

No comments:

Powered by Blogger.