.

ಪದೆ ಪದೆ ನನಗ್ಯಾಕೆ ಟಾರ್ಗೆಟ್ ಮಾಡ್ತಾ ಇದ್ದಿರಾ ಎಂದ ಮಹಿಳಾ ಸಚಿವೆ ಶಶಿಕಲಾ ಜೊಲ್ಲೆ..

ಬೆಳಗಾವಿ : ಯಾಕೇ ಪದೇ ಪದೇ ಮಹಿಳೆಯಾದ ನನ್ನನ್ನು ಟಾರ್ಗೆಟ್ ಮಾಡುತ್ತಿರಿ ಎಂದು ಸಚಿವೆ ಶಶಿಕಲಾ ಜೋಲ್ಲೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.ಬೆಳಗಾವಿಯಲ್ಲಿ ಮಾತನಾಡಿದ ಅವ್ರು,ನಾನು ಪಕ್ಷ ಸಂಘಟನೆ ಮೂಲಕ ರಾಜಕೀಯಕ್ಕೆ ಬಂದಿದ್ದೇನೆ.ಸದ್ಯ ಪಕ್ಷ ಕೊಟ್ಟಿರುವ ಜವಾಬ್ದಾರಿಯನ್ನ ನಿಭಾಯಿಸುತ್ತಿದ್ದೇನೆ.ಈಗಾಗಲೇ ಎರಡು ಬಾರಿ ನನ್ನನ್ನು ಸಂಪುಟದಿಂದ ಕೈಬಿಡಲಾಗುವುದು ಅಂತ ಕೇಳಿದ್ರಿ,ಅದು ಎರಡು ಬಾರಿ ಸಂಪುಟದಿಂದ ಕೈಬಿಡುವ ವಿಚಾರ ಸುಳ್ಳಾಯಿತು.
ಈಗ ಮೂರನೇ ಬಾರಿ ಕೇಳ್ತಾಯಿದ್ದೀರಿ ಅದೂ ಕೂಡ ಸುಳ್ಳಾಗುತ್ತೆ.ನಮ್ಮ ಸರ್ಕಾರದಲ್ಲಿ ನಾನೊಬ್ಬಳೆ ಮಹಿಳಾ ಮಂತ್ರಿಯಾಗಿ ಕೆಲಸ ಮಾಡುತ್ತಿರುವೆ. ಹಾಗಾಗಿ ನನಗೆ ಕೊಟ್ಟ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿರುವೆ ಎಂದು ಮಾಧ್ಯಮದವರ ಮುಂದೆ ಅಸಮಾಧಾನ ಹೊರ ಹಾಕಿದ್ದಾರೆ....
ಪದೆ ಪದೆ ನನಗ್ಯಾಕೆ ಟಾರ್ಗೆಟ್ ಮಾಡ್ತಾ ಇದ್ದಿರಾ ಎಂದ ಮಹಿಳಾ ಸಚಿವೆ ಶಶಿಕಲಾ ಜೊಲ್ಲೆ.. ಪದೆ ಪದೆ ನನಗ್ಯಾಕೆ ಟಾರ್ಗೆಟ್ ಮಾಡ್ತಾ ಇದ್ದಿರಾ ಎಂದ ಮಹಿಳಾ ಸಚಿವೆ ಶಶಿಕಲಾ ಜೊಲ್ಲೆ.. Reviewed by News10Karnataka Admin on December 02, 2020 Rating: 5

No comments:

Powered by Blogger.