ಬಾಗಲಕೋಟೆ : ಹೀಗೆ ಗಿಡಕ್ಕೆ ಪೂಜೆ ಮಾಡುತ್ತಿರುವ ಜನರು,ಆ ಗಿಡದ ಪೂಜೆ ಮಾಡುವದನ್ನ ನೋಡಲು ಮುಗಿಬಿದ್ದ ಜನ ಈ ದೃಶ್ಯಗಳು ಕಂಡು ಬಂದಿದ್ದು,ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ಬೇಲೂರು ಗ್ರಾಮದಲ್ಲಿ. ಈ ರೀತಿ ಪೂಜೆ ಮಾಡುವುದಕ್ಕೆ ಕಾರಣ ಮಹಿಳೆಯೋರ್ವಳಿಗೆ ಆದ ಆಶ್ಚರ್ಯ.ಹೌದು ಡಾಣಕಶಿರೂರು ಗ್ರಾಮದ ಮಹಿಳೆ ಹೊಲವೊಂದರಲ್ಲಿ ಗಿಡ ಕೀಳಲು ಹೋಗಿದ್ದಾರೆ.ಆ ವೇಳೆಯಲ್ಲಿ ಅವರಿಗೆ ಗಿಡ ಮುಟ್ಟಿದ ಕೂಡಲೆ ನಡುಕ ಬಂದಂಗೆ ಆಗಿದೆ.ನಂತರ ಎರಡ್ಮೂರು ಬಾರಿ ಗಿಡ ಮುಟ್ಟಿ ನೋಡಿದಾಗ ಅದೇ ರೀತಿ ಅನುಭವ ಉಂಟಾಗಿದೆ.ಹೀಗಾಗಿ ಅದರಿಂದ ಗಾಬರಿಗೊಂಡ ಮಹಿಳೆ ಗಿಡದಲ್ಲಿ ದೇವಿ ನೆಲೆಸಿರೋ ಬಗ್ಗೆ ಮಾಹಿತಿ ನೀಡಿದ್ದಾರೆ.ಮಾಹಿತಿ ಮೇರೆಗೆ ಸುತ್ತಮುತ್ತಲಿನ ಗ್ರಾಮಸ್ಥರು ಹೊಲಕ್ಕೆ ದೌಡಾಯಿಸಿ ದೇವಿಯ ಪೂಜೆ ಮಾಡಲು ಶುರು ಮಾಡಿದ್ದಾರೆ.
ಇನ್ನೂ ಬೇಲೂರು ಗ್ರಾಮದ ಹೊರವಲಯದ ಹೊಲದ ಪುಂಡಿಗಿಡದಲ್ಲಿ ಬೊಮ್ಮಸಾಗರಸ ದುರ್ಗಾದೇವಿ ನೆಲೆಸಿದ್ದಾಳೆಂದು ಗ್ರಾಮಸ್ಥರು ನಂಬಿಕೆಯಾಗಿದೆ.ಮಹಿಳೆಯೊರ್ವಳ ಮೈಮೇಲೆಯಿಂದ ಗಿಡಕ್ಕೆ ದುರ್ಗಾದೇವಿ ಬಂದು ನೆಲೆಸಿದ್ದಾಳೆ ಎಂದು ಹೇಳುತ್ತಿದ್ದಾರೆ.ಹೀಗಾಗಿ ದೇವಿ ನೆಲೆಸಿರುವ ವದಂತಿಯಿಂದ ಸುತ್ತಲಿನ ಮುತ್ತಲಿನ ಹಳ್ಳಿಯ ಜನ ಹಾಗೂ ಪಕ್ಕದ ಜಿಲ್ಲೆಯ ಜನ ಗಿಡದಲ್ಲಿ ನೆಲೆಸಿರುವ ದೇವಿಯನ್ನ ನೋಡಲು ಮುಗಿಬೀಳುತ್ತಿದ್ದಾರೆ..
ಒಟ್ಟಾರೆಯಾಗಿ ದೇವರ ಮೇಲೆ ನಂಬಿಕೆ ಇರಬೇಕು ಆದ್ರೆ ಏಕಾಏಕಿ ಗಿಡದಲ್ಲಿ ದೇವಿ ನೆಲೆಸುತ್ತಾಳೆ ಎಂಬ ಮೂಡನಂಬಿಕೆ ಇರಬಾರದು.ಜನ ಮರಳೊ ಜಾತ್ರೆ ಮರಳೋ ಎಂಬಂತೆ ಜನರು ದೇವಿ ನೆಲೆಸಿದ್ದಾಳೆಂದು ಮುಗಿಬಿದ್ದು,ಬಂದು ಪೂಜೆ ಸಲ್ಲಿಸುತ್ತಿದ್ದಾರೆ...
ಪುಂಡಿಗಿಡದಲ್ಲಿ ದೇವರು ಬಂದಿದೆಯಂತೆ..ದೇವರ ದರ್ಶನಕ್ಕೆ ಮುಗಿಬಿದ್ದಿರುವ ಗ್ರಾಮಸ್ಥರು...
Reviewed by News10Karnataka Admin
on
December 25, 2020
Rating:

No comments: