.

ಧಾರವಾಡದಲ್ಲಿ ಕರವೇ ಕಾರ್ಯಕರ್ತರು ಅರೆಸ್ಟ..ಅರೆಸ್ಟ ಮಾಡಿದ್ದಾದ್ರೂ ಯಾಕೆ..?

ಧಾರವಾಡ : ಧಾರವಾಡದಲ್ಲಿ ಕರವೇ ಕಾರ್ಯಕರ್ತರ ಬಂಧನ....ರಸ್ತೆ ತಡೆ ನಡೆಸಿ ಪ್ರತಿಭಟನೆಗೆ ಮುಂದಾಗಿದ್ದ ಕರವೇ ಕಾರ್ಯಕರ್ತರು.... 

ರಾಜ್ಯ ವ್ಯಾಪಿ ಬಂದ್‌ಕರೆಗೆ ಬೆಂಬಲಿಸಿ ಧಾರವಾಡದಲ್ಲಿ ಪ್ರತಿಭಟನೆ ಮುಂದಾಗಿದ್ದ ಕರವೇ ಕಾರ್ಯಕರ್ತರ ಬಂಧನ.....30 ಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧನ ಮಾಡಿದ ಪೊಲೀಸ್.. ಮರಾಠ ಅಭಿವೃದ್ಧಿ ಪ್ರಾಧಿಕಾರ ವಿರೋಧಿಸಿ ಕರ್ನಾಟಕ ಬಂದ್‌ಗೆ ಕರೆಗೆ ಬೆಂಬಲಿಸಿ, ರಸ್ತೆ ತಡೆ ನಡೆಸಿ ಪ್ರತಿಭಟನೆಗೆ ಮುಂದಾಗಿದ್ದ 30ಕ್ಕೂ ಹೆಚ್ಚು ಕರವೇ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ನಗರದ ಜುಬ್ಲಿ ವೃತದಲ್ಲಿ ಕರ್ನಾಟಕ ಬಂದ್‌ಕರೆಗೆ ಬೆಂಬಲಿಸಿ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ್ರ ಬಣದ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾಗಿದ್ದರು.

ಸ್ವಲ್ಪ ಸಮಯದ ನಂತರ ರಸ್ತೆ ತಡೆಗೆ ಕಾರ್ಯಕರ್ತರು ಮುಂದಾಗುತ್ತಿದಂತೆ ಮಧ್ಯ ಪ್ರವೇಶ ಮಾಡಿದ ಧಾರವಾಡ ಎಸಿಪಿ ಅನುಷಾ ನೇತೃತ್ವದಲ್ಲಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಬಸ್‌ ಹತ್ತಿಸಿದ್ದಾರೆ. ಇನ್ನೂ ಪ್ರತಿಭಟನೆ ವೇಳೆ ರಾಜ್ಯ ಸರ್ಕಾರದ ವಿರುದ್ಧ ಬಂಧಿಸಲು ಬಂದ ಪೊಲೀಸ್ ಸಿಬ್ಬಂದಿಯ ವಿರುದ್ಧ ಕರವೇ ಕಾರ್ಯಕರ್ತರು ಧಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. 
ಇನ್ನೂ ಬಂಧಿಸಲು ಬಂದ ಪೊಲೀಸರ ಮತ್ತು ಕರವೇ ಕಾರ್ಯಕರ್ತರ ನಡುವೆ ಕೆಲಕಾಲ ಮಾತಿನ ಚಕಮಕಿಯು ನಡೆಯುತ್ತು. ನೀವು ಪ್ರತಿಭಟನೆ ಮಾತ್ರ ಮಾಡಿ, ರಸ್ತೆ ತಡೆ ನಡೆಸುವ ಹಾಗಿಲ್ಲ ಎಂದು ಪೊಲೀಸರು ಪ್ರತಿಭಟನಕಾರಿಗೆ ತಿಳಿ ಹೇಳುದರು. ಪೊಲೀಸ ಸಿಬ್ಬಂದಿಯ ಮಾತು ಕೇಳದ ಹಿನ್ನೆಲೆ ಕರವೇ ಕಾರ್ಯಕರ್ತರನ್ನು ಈಗ ಪೊಲೀಸರು ಬಂಧಿಸಿದ್ದಾರೆ.


ಧಾರವಾಡದಲ್ಲಿ ಕರವೇ ಕಾರ್ಯಕರ್ತರು ಅರೆಸ್ಟ..ಅರೆಸ್ಟ ಮಾಡಿದ್ದಾದ್ರೂ ಯಾಕೆ..? ಧಾರವಾಡದಲ್ಲಿ ಕರವೇ ಕಾರ್ಯಕರ್ತರು ಅರೆಸ್ಟ..ಅರೆಸ್ಟ ಮಾಡಿದ್ದಾದ್ರೂ ಯಾಕೆ..? Reviewed by News10Karnataka Admin on December 04, 2020 Rating: 5

No comments:

Powered by Blogger.