.

ಸಾವಿನಲ್ಲೂ ಒಂದಾದ ಹಿರಿಯ ಜೀವಗಳು, ಅಷ್ಡಕ್ಕೂ ಈ ಘಟನೆ ನಡೆದಿದ್ದು ಎಲ್ಲಿ ಅಂತರಾ..?

ಧಾರವಾಡ : ನವಲಗುಂದ :  ಸಾವು ಅಂದ್ರೆ ಅದು ಹಾಗೆ, ದಂಪತಿಗಳಿಗೆ ಒಂದೆ‌ದಿನ ಸಾವನ್ನಪ್ಪೋದು ಅಂದ್ರೆ‌ ಅದು ಸಾಮಾನ್ಯನಾ, ಅಷ್ಡಕ್ಕೂ ಅವರಿಬ್ಬರು ಒಬ್ಬರಿಗೊಬ್ಬರು ಅನ್ಯೂನ್ಯವಾಗಿದ್ದ ದಂಪತಿಗಳು, ಅವರಿಬ್ಬರು ಒಂದೆ ದಿನಾ ಸಾವನ್ನಪ್ಪಿದ್ದಾರೆ ಅಂದ್ರೆ ನೀವು‌ ನಂಬ್ತಿರಾ ಬಲೆಬೇಕು,
ಹೌದು ಸಾವಿನಲ್ಲೂ ದಂಪತಿಗಳು ಒಂದಾಗಿರುವ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ನಾಗರಳ್ಳಿ ಗ್ರಾಮದಲ್ಲಿ ನಡೆದಿದೆ. ಚೆನ್ನಬಸವನಗೌಡ ದ್ಯಾಮನಗೌಡರ ಹಾಗೂ ಪತ್ನಿ ನೀಲವ್ವ ದಂಪತಿಗಳು ಸಾವಿನಲ್ಲಿಯೂ ಒಂದಾಗಿದ್ದಾರೆ.ಹಲವು ದಿನಗಳಿಂದ ಚೆನ್ನಬಸವನಗೌಡ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ರು.ಇವರ ಆರೈಕೆ  ಮಾಡುತ್ತಿದ್ದ ಧರ್ಮಪತ್ನಿ ನೀಲವ್ವ ನಿನ್ನೆ  ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಪತ್ನಿ ಸಾವಿನ ಸುದ್ದಿ ಕೇಳುತ್ತಿದ್ದಂತೆ ಇತ್ತ ಚೆನ್ನಬಸವನಗೌಡರು ಕೂಡ ಸಾವನ್ನಪ್ಪಿದ್ದಾರೆ. ಇನ್ನೂ ಈ ದಂಪತಿಗಳ ಸಾವಿನಿಂದ ಇಡೀ ಊರಿನ ಗ್ರಾಮಸ್ಥರೆ ಕಣ್ಣೀರು ಹಾಕಿದ್ದಾರೆ.ಅಲ್ಲದೇ ಇಬ್ಬರು ದಂಪತಿಗಳ ಅಂತಿಮ ಸಂಸ್ಕಾರವನ್ನ ಮೆರವಣಿಗೆ ಮೂಲಕ ಮಾಡಿದ್ದಾರೆ...ನಿಜಕ್ಕೂ ನಿನ್ನೆ ಇಡಿ ಗ್ರಾಮಕ್ಕೆ ಗ್ರಾಮವೇ ಸ್ಥಬ್ದವಾಗಿತ್ತು..ಆದರೆ ಇರೋತನಕ ಇಬ್ರು ಚನ್ನಾಗಿದ್ರು, ಆದರೆ ಸಾವಿನಲ್ಲೂ ಒಂದಾಗಿದ್ದು ಅವರ ಪ್ರಿತಿಯನ್ನ‌ ಸಾರಿ ಸಾರಿ ಹೇಳುವಂತಿತ್ತು...
ಸಾವಿನಲ್ಲೂ ಒಂದಾದ ಹಿರಿಯ ಜೀವಗಳು, ಅಷ್ಡಕ್ಕೂ ಈ ಘಟನೆ ನಡೆದಿದ್ದು ಎಲ್ಲಿ ಅಂತರಾ..? ಸಾವಿನಲ್ಲೂ ಒಂದಾದ ಹಿರಿಯ ಜೀವಗಳು, ಅಷ್ಡಕ್ಕೂ ಈ ಘಟನೆ ನಡೆದಿದ್ದು ಎಲ್ಲಿ ಅಂತರಾ..? Reviewed by News10Karnataka Admin on December 06, 2020 Rating: 5

No comments:

Powered by Blogger.