ಸಿಪಿಐಗೆ ಠಾಣೆಯಿಂದ ಹೊರಗಡೆ ಬಾ ನೋಡ್ಕೋತ್ತಿನಿ ಎಂದು ಧಮ್ಕಿ ಹಾಕಿದವರ್ಯಾರು...ಬಳಿಕ ಪೋಲಿಸ್ರು ಆ ಮಾಜಿ ಶಾಸಕನಿಗೆ ಮಾಡಿದ್ದೆನೂ...?
ಬಾಗಲಕೋಟೆ : ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಸಿಪಿಐ ಅಯ್ಯನಗೌಡ ಪಾಟೀಲ ಮೇಲೆ ದರ್ಪ ತೋರಿರುವ ವಿಡಿಯೋ ವೈರಲ್, ಆಗಿದೆ..ಎಸ್ ಮಾಜಿ ಶಾಸಕ ವಿಜಯಾನಂದ ಕಾಶಪ್ಪನ್ನವರ ಅವರು ಡಿಸೆಂಬರ 17 ರಂದು ಸಿಪಿಐ ಆಪಿಸ್ ಗೆ ಹೋಗಿ ಹೊರಗಡೆ ಬಾ ನಿನಗೆ ನೋಡಕ್ಕೊತ್ತೆನಿ ಅಂದಿದ್ದಾರೆ..ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಇಲಕಲ್ ಪಟ್ಟಣದಲ್ಲಿರುವ ಸಿಪಿಐ ಕಚೇರಿಯಲ್ಲಿ ಘಟನೆ ನಡೆದಿದೆ..
ಪಿಗ್ಮಿ ಏಜೆಂಟ್ ಸಾವು ಪ್ರಕರಣ ವಿಚಾರದಲ್ಲಿ 9 ಜನರ ಬೇಲ್ ಪಡೆದುಕ್ಕೊಂಡಿದ್ದರು ಬೇಲ್ ಪಡೆದಾಗಲೂ ಇಳಕಲ್ ನಗರ ಸಿಪಿಐ 9ಜನ ವಿಚಾರಣೆಗೆ ನೋಟಿಸ್ ಜಾರಿ ಮಾಡಿದ್ದಾರೆ..ಇನ್ನು ಠಾಣೆಯಲ್ಲ ವಿಚಾರಣೆ ನಡೆಸೋ ವೇಳೆ ಠಾಣೆಗೆ ಹೋಗಿ ಮಾಜಿ ಶಾಸಕ ದಮ್ಕಿ ಹಾಕಿದ್ದಾರೆ ಪೋಲಿಸ್ ಠಾಣೆ ಸಿಬ್ಬಂದಿಗೆ ಅವಾಚ್ಯ ಪದದಿಂದ ನಿಂದನೆ ಮಾಡಿರುವುದಲ್ಲದೆ ದಮ್ಕಿ ಕೂಡಾ ಹಾಕಿದ್ದಾರೆ ನೀನು ಮನೆಗೆ ಹೋಗಿ ನೋಟಿಸ್ ಕೊಡು ಎಂದು ಪೋಲಿಸ್ ಗೆ ಅವಾಜ ಹಾಕಿದ್ದಾರೆ.
ಹುಡುಗಾಟ ಹಚ್ಚಿದ್ದೀಯಾ...ಹೊರಗ ಬಂದು ನೋಡು ಎಂದು ಧಮ್ಕಿ ಹಾಕಿ ಹೊರ ನಡೆದಿದ್ದಾರೆ..ಸಿಪಿಐ ಗೆ ದಮ್ಕಿಹಾಕಿದ ಹಿನ್ನಲೆ ವಿಜಯಾನಂದ ಕಾಶಪ್ಪನವರ ವಿರುದ್ಧ ಎಫ್ಐಆರ್ ಕೇಸ್ ದಾಖಲಾಗಿದೆ ಪೋಲಿಸರ ಕತ೯ವ್ಯಕ್ಕೆ ಅಡ್ಡಿ ಮಾಡಿದ ಹಿನ್ನೆಲೆಯಲ್ಲಿ ಕೇಸ್ ದಾಖಲಾಗಿದೆ.ಇಲಕಲ್ ಠಾಣೆಯಲ್ಲಿ 143, 147,353, 504,506 ಕಲಂ ಅಡಿಯಲ್ಲಿ ಕೇಸ್ ದಾಖಲು ಮಾಡಲಾಗಿದೆ ವಿಜಯಾನಂದ ಕಾಶಪ್ಪನವರ ಸೇರಿ ನಾಲ್ವರ ವಿರುದ್ಧ ಇಲಕಲ್ ಪೋಲಿಸ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಸಿಪಿಐಗೆ ಠಾಣೆಯಿಂದ ಹೊರಗಡೆ ಬಾ ನೋಡ್ಕೋತ್ತಿನಿ ಎಂದು ಧಮ್ಕಿ ಹಾಕಿದವರ್ಯಾರು...ಬಳಿಕ ಪೋಲಿಸ್ರು ಆ ಮಾಜಿ ಶಾಸಕನಿಗೆ ಮಾಡಿದ್ದೆನೂ...?
Reviewed by News10Karnataka Admin
on
December 19, 2020
Rating:

No comments: