ದೇಶಾದ್ಯಂತ ಬಿಜೆಪಿಯು ತನ್ನ ಸಾಧನೆಗಳನ್ನ ಮನ- ಮನೆಗಳಿಗೆ ತಲುಪಿಸುವ ಉದ್ದೇಶದಿಂದ ಗ್ರಾಮ ಸ್ವರಾಜ್ಯ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ.ಅದರಂತೆ ರಾಜ್ಯಾದ್ಯಂತ ಕೂಡ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ.ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿಜೆಪಿ ಸರ್ಕಾರ ಸಚಿವರು ಸಂಸದರು,ಶಾಸಕರು ಪಕ್ಷದ ಮುಖಂಡರು ಈ ಸಮಾವೇಶದಲ್ಲಿ ಭಾಗವಹಿಸಿ ಬಿಜೆಪಿಯ ಸಾಧನೆಗಳನ್ನ ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಇಂದು ಕೂಡ ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದಲ್ಲಿ ಕೂಡ ಈ ಗ್ರಾಮ ಸ್ವರಾಜ್ಯ ಸಮಾವೇಶ ಹಮ್ಮಿಕೊಳ್ಳಲಾಗಿದೆ.ಸವದತ್ತಿ,ರಾಮದುರ್ಗ, ಗೋಕಾಕ, ಅರಭಾವಿ ಮತಕ್ಷೇತ್ರದ ಸಮಾವೇಶ ಇದಾಗಿದ್ದು,ಈ ಸಮಾವೇಶದಲ್ಲಿ ಸಚಿವರಾದ ಜಗದೀಶ್ ಶೆಟ್ಟರ್, ರಮೇಶ್ ಜಾರಕಿಹೊಳಿ,ಶಶೀಕಲಾ ಜೊಲ್ಲೆ,ಬಸವರಾಜ್ ಬೊಮ್ಮಾಯಿ,ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ,ವಿಧಾನಸಭೆ ಉಪಾಧ್ಯಕ್ಷ ಆನಂದ ಮಾಮನಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿ,ಮಹದೇವಪ್ಪ ಯಾದವಾಡ ಭಾಗವಹಿಸಲಿದ್ದಾರೆ.ಇವರ ಜೊತೆಗೆ ಪಕ್ಷದ ಮುಖಂಡರು ಕಾರ್ಯಕರ್ತರು,ಹಾಗೂ ಸಾರ್ವಜನಿಕರು ಕೂಡ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದು,ಸವದತ್ತಿ ನಗರದ ಮಾಮನಿ ಕಲ್ಯಾಣ ಮಂಟಪದಲ್ಲಿ ಈ ಕಾರ್ಯಕ್ರಮ ಆಯೋಜನೆಗೊಂಡಿದೆ....
ಸವದತ್ತಿಯಲ್ಲಿಂದು ಗ್ರಾಮ ಸ್ವರಾಜ್ಯ ಸಮಾವೇಶ ಬಾಗವಹಿಸುವವರು ಯಾರ್ಯಾರು ಗೊತ್ತಾ..?
Reviewed by News10Karnataka Admin
on
December 01, 2020
Rating:

No comments: