.

ಮೊದಲ ಹಂತದ ಗ್ರಾ.ಪ. ಚುನಾವಣೆಗೆ ಒಟ್ಟು 3209 ನಾಮಪತ್ರ ಸಲ್ಲಿಕೆ: ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿಕೆ...!

ಗ್ರಾಮ ಪಂಚಾಯತ ಚುನಾವಣೆ-2020

ಮೊದಲ  ಹಂತದ ಚುನಾವಣೆಗೆ ಒಟ್ಟು 3209 ನಾಮಪತ್ರ ಸಲ್ಲಿಕೆ: ಜಿಲ್ಲಾಧಿಕಾರಿ ನಿತೇಶ ಪಾಟೀಲ


ಧಾರವಾಡ : ಜಿಲ್ಲೆಯಲ್ಲಿ ಮೊದಲ ಹಂತದ ಗ್ರಾಮ ಪಂಚಾಯತ ಚುನಾವಣೆಗೆ ನಾಮಪತ್ರ ಸಲ್ಲಿಸಲು ಡಿ.11 ಕೊನೆಯ ದಿನವಾಗಿದ್ದು, ಧಾರವಾಡ, ಅಳ್ನಾವರ ಮತ್ತು ಕಲಘಟಗಿ ತಾಲ್ಲೂಕುಗಳ ವಿವಿಧ ಗ್ರಾಮ ಪಂಚಾಯತಗಳಿಗೆ ಒಟ್ಟು 3209 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿ ಜಿಲ್ಲಾಧಿಕಾ ರಿ‌ನಿತೇಶ ಪಾಟೀಲ ತಿಳಿಸಿದ್ದಾರೆ.

ನಾಮಪತ್ರ ಸಲ್ಲಿಕೆ ಕೊನೆಯ ದಿನವು ದಾರವಾಡ  ತಾಲೂಕಿನ ವಿವಿಧ ಗ್ರಾಮ ಪಂಚಾಯತಗಳಿಗೆ 757 , ಕಲಘಟಗಿ  ತಾಲೂಕಿನ ಗ್ರಾಮ ಪಂಚಯತಿಗಳಿಗೆ  456  ಮತ್ತು ಅಳ್ನಾವರ ತಾಲೂಕಿನ ಗ್ರಾಮ ಪಂಚಾಯತಗಳಿಗೆ  72  ಸೇರಿದಂತೆ ಒಟ್ಟು 1285 ನಾಮಪತ್ರಗಳು  ಸಲ್ಲಿಕೆ ಆಗಿವೆ ಎಂದು ಅವರು ತಿಳಿಸಿದ್ದಾರೆ.
 
ಜಿಲ್ಲೆಯ ಮೊದಲ ಹಂತದ ಗ್ರಾಮ ಪಂಚಾಯತ ಚುನಾವಣೆಗೆ ಆಧಿಸೂಚನೆ ಹೊರಡಿಸಿದ ಡಿಸೆಂಬರ್ 7 ರಿಂದ ಕೊನೆಯ ದಿನವಾದ ಡಿಸೆಂಬರ್ 11ರ ವರೆಗೆ ಧಾರವಾಡ ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳಿಗೆ 1871, ಅಳ್ನಾವರ ತಾಲೂಕಿನ ಗ್ರಾಮ ಪಂಚಾಯತಿಗಳಿಗೆ 180 ಮತ್ತು ಕಲಘಟಗಿ ತಾಲೂಕಿನ ವಿವಿಧ ಗ್ರಾಮ ಪಂಚಾಯತಗಳಿಗೆ 1158 ಸೇರಿದಂತೆ ಒಟ್ಟು 3209 ನಾಮಪತ್ರಗಳು ಸಲ್ಲಿಕೆ ಆಗಿವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.ಮೊದಲ ಹಂತದ ಗ್ರಾ.ಪ. ಚುನಾವಣೆಗೆ ಒಟ್ಟು 3209 ನಾಮಪತ್ರ ಸಲ್ಲಿಕೆ: ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿಕೆ...! ಮೊದಲ  ಹಂತದ ಗ್ರಾ.ಪ. ಚುನಾವಣೆಗೆ ಒಟ್ಟು 3209 ನಾಮಪತ್ರ ಸಲ್ಲಿಕೆ: ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿಕೆ...! Reviewed by News10Karnataka Admin on December 11, 2020 Rating: 5

No comments:

Powered by Blogger.