ಇವನ ಆಟ... ಅಬ್ಬಬ್ಬಾ...
22 ಎಸೆತಗಳಲ್ಲಿ 44 ರನ್
ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿರುವ ಭಾರತ ತಂಡ ಕಾಂಗರೂ ಪಡೆ ವಿರುದ್ಧ ಟಿ20 ಸರಣಿ ಜಯಿಸಿದೆ. 2-1 ಪಂದ್ಯಗಳ ಅಂತರದಿಂದ ಏಕದಿನ ಸರಣಿಯಲ್ಲಿ ಸೋಲನುಭಿಸಿದ್ದ ಭಾರತ ತಂಡ ಟಿ20 ಸಿರೀಸ್ ಗೆಲ್ಲುವ ಮೂಲಕ ಆಸ್ಟ್ರೇಲಿಯಾಕ್ಕೆ ತಿರುಗೇಟು ನೀಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಕಾಂಗರೂ ಪಡೆ ಭಾರತಕ್ಕೆ 195 ರನ್ ಗಳ ಗುರಿ ನೀಡಿತ್ತು. ಬೃಹತ್ ಗುರಿ ಬೆನ್ನತ್ತಿದ ಭಾರತಕ್ಕೆ ಜಯ ತಂದು ಕೊಡುವಲ್ಲಿ ಹಾರ್ದಿಕ್ ಪಾಂಡ್ಯಾ ಮಹತ್ವದ ಪಾತ್ರ ವಹಿಸಿದರು.
5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಂದ ಪಾಂಡ್ಯಾ, ಮೈದಾನದ ಮೂಲೆಮೂಲೆಗೂ ಚೆಂಡನ್ನು ಅಟ್ಟಿದರು. ಪಂದ್ಯದ ಮಹತ್ವದ ಸನ್ನಿವೇಶದಲ್ಲಿ ನಾಯಕ ವಿರಾಟ್ 40 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಕಲೆ ಹೊತ್ತು ತಾಳ್ಮೆಯ ಆಟವಾಡಿದ ಪಾಂಡ್ಯಾ, 22 ಎಸೆತಗಳಲ್ಲಿ 44 ರನ್ ಸಿಡಿಸಿ ಗೆಲುವಿನಲ್ಲಿ ಪಾತ್ರ ವಹಿಸಿದರು. ಕೊನೆಯ ಓವರ್ ನಲ್ಲಿ 14 ಎನ್ ಬೇಕಿದ್ದಾಗ ಮೊದಲ ಎಸೆತದಲ್ಲಿ ಪಾಂಡ್ಯಾ ರಿಸ್ಕಿ 2 ರನ್ ಕದ್ದರು. 2ನೇ ಎಸೆತದಲ್ಲಿ ಸಿಕ್ಸ್ ಬಾರಿಸಿ ಪಂದ್ಯದ ಗತಿ ಬದಲಿಸಿದರು. 3ನೇ ಎಸೆತದಲ್ಲಿ ರನ್ ಗಳಿಸಲು ವಿಫಲವಾದಾಗ ಪಂದ್ಯ ಆಸೆದತ್ತ ಹೊರಳಿತ್ತು. 4 ನೇ ಎಸೆತದಲ್ಲಿ ಭರ್ಜರಿ ಸಿಕ್ಸ್ ಬಾರಿಸಿದ ಪಾಂಡ್ಯಾ ಭಾರತಕ್ಕೆ ಗೆಲುವು ತಂದು ಕೊಟ್ಟರು.
ಭಾರತದ ಪರ ಶಿಖರ್ ಧವನ್ 52, ಕೆ.ಎಲ್. ರಾಹುಲ್ 30, ವಿರಾಟ್ 40, ಸಂಜು ಸ್ಯಾಮ್ಸನ್ 15 ಹಾಗೂ ಶ್ರೇಯಸ್ 12 ರನ್ ಗಳಿಸಿದರು.
ಆಸ್ಟ್ರೇಲಿಯಾ ಪರ ಮ್ಯಾಥ್ಯೂ ವೇಡ್ 58, ಸ್ಟೀವನ್ ಸ್ಮಿತ್ 46, ಮ್ಯಾಕ್ಸವೆಕ್ 22, ಹೆನ್ರಿಕ್ಸ್ 26, ಸ್ಟಾಯಿನಿಸ್ 16 ರನ್ ಗಳಿಸಿ ಭಾರತಕ್ಕೆ ಬೃಹತ್ ಗುರಿ ನೀಡಿದ್ದರು.
20_20 ಸರಣಿಯಲ್ಲಿ ಕಾಂಗರೋಗಳನ್ನ ಮಣಿಸಿದ ಭಾರತ ! ತಂಡ..ಧವನ್ ಹೊಡೆತಕ್ಕೆ ನೆಲ ಕಚ್ಚಿದ ಆಷ್ಟ್ರೆಲೀಯಾ ತಂಡ !
Reviewed by News10Karnataka Admin
on
December 06, 2020
Rating:

No comments: