.

ಪಂಚಮಸಾಲಿ ಸಮುದಾಯ 2 ಎ ಗೆ ಸೆರ್ಪಡಿಲು ಒತ್ತಾಯ..ಜನೇವರಿ 14 ಕ್ಕೆ ಪಾದಯಾತ್ರೆ ಆರಂಭ..ವಿಧಾನಸೌಧಕ್ಕೆ ಮುತ್ತಿಗೆ..ಜಯ ಮೃತ್ಯುಂಜಯ ಸ್ವಾಮಿಜಿ ಎಚ್ಚರಿಕೆ...

ಧಾರವಾಡ : ಲಿಂಗಾಯತ್ ಸಮಾಜವನ್ನ  2 ಎ ಗೆ ಸೇರಿಸಬೇಕು ಎಂದು ಪಂಚಮ ಸಾಲಿ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ಅವರು ಸರಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ...
ಜನೇವರಿ 14 ನೇಯ ತಾರಿಖಿಗೆ ಪಾದಯಾತ್ರೆ ಆರಂಭ ಮಾಡಲಾಗುವುದು ಕೂಡಲ ಸಂಗಮದಿಂದ ಬೆಂಗಳೂರಿಗೆ ಪಾದಯಾತ್ರೆ ಆರಂಭ ಮಾಡಿ ಬೆಂಗಳೂರಿಗೆ ತಲುಪಿ ವಿಧಾನಸಭೆಗೆ ಮುತ್ತಿಗೆ ಹಾಕಲಾಗುವುದು ಎಂದು ಜಯ ಮೃತ್ಯುಂಜಯ ಸ್ವಾಮಿಜಿ ಅವರು ಹೇಳಿದರು..ಧಾರವಾಡ ಅಂಕಿತ ರೆಸಿಡೆನ್ಸಿ ಯಲ್ಲಿ ಮಾತನಾಡಿದ ಅವರು ಜನೇವರಿ 4 ಕ್ಕೆ ಧಾರವಾಡದ ಲಿಂಗಾಯತ್ ಭವನದಲ್ಲಿ ಲಿಂಗಾಯತ್ ಸಮಾವೇಶವನ್ನ ಮಾಡಿ ಪಾದಯಾತ್ರೆ ರೂಪರೇಶಗಳನ್ನ ಇತ್ಯರ್ಥ ಮಾಡಲಾಗುವುದು ಪಂಚಮ ಸಾಲಿ ಸಮುದಾಯವನ್ನ ರಾಜ್ಯ ಸರಕಾರ 2. ಎ ಗೆ ಸೇರಿಸಬೇಕು, ಕೊಪ್ಪಳ, ಹೊಸಪೇಟೆ, ಹರಪ್ಪ ನಳ್ಳಿ, ದಾವಣಗೇರಿ, ತುಮಕೂರು ಮುಖಾಂತರ ಪಾದಯಾತ್ರೆ ಬೆಂಗಳೂರು ತಲುಪಲಾಗುವುದು.

ಇಗಾಗಲೆ ಅಕ್ಡೋಬರ್ 24 ರಂದು ಉಪವಾಸ ಮಾಡಿದಾಗ ಸರಕಾರ ಭರವಸೆ ಕೊಟ್ಟಿತ್ತು ಆಗ ಉಪವಾಸವನ್ನ ಮರಳಿ ಪಡೆಯಲಾಗಿತ್ತು ಸರಕಾರಕ್ಕೆ ಕೊಟ್ಟ ಒಂದು ತಿಂಗಳ ಗಡುವು ಮುಗಿದಿದೆ ಅದಕ್ಕೆ ನಾವೂ ಪಾದಯಾತ್ರೆ ಮುಖಾಂತರ ಸರಕಾರದ ಗಮನವನ್ನ ಸೆಳೆಯುತ್ತೆವೆ ರಾಜ್ಯ ಸರಕಾರ ಪಂಚಮಸಾಲಿ ಸಮುದಾಯಕ್ಕೆ 2 ಎ ಮಿಸಲಾತಿ ಕೊಡಬೇಕು ಸರಕಾರಕ್ಕೆ ಜನೇವರಿ 14 ರ ವರೆಗೆ ಸಮಯವಿದೆ ಅಷ್ಟರ ಒಳಗೆ ಬೇಡಿಕೆಯನ್ನ ಇಡೇರಿಸಬೇಕು ಒಂದು ವೇಳೆ ಎಚ್ಚರಗೊಳ್ಳದಿದ್ದರೆ ಜನೇವರಿ 14 ಕ್ಕೆ ಪಾದಯಾತ್ರೆ ಮಾಡಲಾಗುವುದು..

ಇಗಾಗಲೆ ಪ್ರಹ್ಲಾದ್ ಜೋಶಿ ಅವರ ಜೊತೆ ಚರ್ಚೆ ಮಾಡಲಾಗಿದೆ ಜನಪ್ರತಿನಿಧಿಗಳಿಗೆ ಮನವಿ ಮಾಡಿಕ್ಕೊಂಡಿದ್ದೆವೆ ಲಿಂಗಾಯತ ಪಂಚಮಸಾಲಿ ಸ್ವಾಮಿಜಿಗಳಿಗೆ ಪಾದಯಾತ್ರೆ ಯಲ್ಲಿ ಬಾಗವಹಿಸಲು ಮನವಿ ಮಾಡಿಕ್ಕೊಂಡಿದ್ದೆನೆ ರಾಜಕೀಯಕ್ಕೋಸ್ಕರ ಮಾತ್ರ ಲಿಂಗಾಯತ ಸಮುದಾಯ ಬಳಕೆ ಆಗುತ್ತಿದೆ ಯಡಿಯೂರಪ್ಪ ಅವರು ಸಿಎಂ ಆಗಲಿಕ್ಕೆ ಲಿಂಗಾಯತ ಸಮುದಾಯದ ಪ್ರಾಮುಖ್ಯತೆ ಇದೆ ಯಡಿಯೂರಪ್ಪ ಅವರ ಮೇಲೆ ಪಂಚಮಸಾಲಿ ರುಣವಿದೆ ಅದನ್ನ ತೀರಿಸಿಕ್ಕೊಳ್ಳಿ ಎಂದು ಸಿಎಂ ಯಡಿಯೂರಪ್ಪ ಗೆ ಹೇಳಿದ ಜಯ ಮೃತ್ಯಂಜಯ ಸ್ವಾಮಿಜಿ ಅವರು ಹೇಳಿದ್ದಾರೆ..
ಪಂಚಮಸಾಲಿ ಸಮುದಾಯ 2 ಎ ಗೆ ಸೆರ್ಪಡಿಲು ಒತ್ತಾಯ..ಜನೇವರಿ 14 ಕ್ಕೆ ಪಾದಯಾತ್ರೆ ಆರಂಭ..ವಿಧಾನಸೌಧಕ್ಕೆ ಮುತ್ತಿಗೆ..ಜಯ ಮೃತ್ಯುಂಜಯ ಸ್ವಾಮಿಜಿ ಎಚ್ಚರಿಕೆ... ಪಂಚಮಸಾಲಿ ಸಮುದಾಯ 2 ಎ ಗೆ ಸೆರ್ಪಡಿಲು ಒತ್ತಾಯ..ಜನೇವರಿ 14 ಕ್ಕೆ ಪಾದಯಾತ್ರೆ ಆರಂಭ..ವಿಧಾನಸೌಧಕ್ಕೆ ಮುತ್ತಿಗೆ..ಜಯ ಮೃತ್ಯುಂಜಯ ಸ್ವಾಮಿಜಿ ಎಚ್ಚರಿಕೆ... Reviewed by News10Karnataka Admin on December 25, 2020 Rating: 5

No comments:

Powered by Blogger.