.

ಲಕ್ಷ್ಮಿವಾಡಿ ಜನರ ಬೇಡಿಕೆಗೆ ಸ್ಪಂದಿಸಿದ ಸಚಿವ ಶ್ರಿಮಂತ‌ ಪಾಟೀಲ

 ಕಾಗವಾಡ 

ನದಿ ತೀರದ ಲಕ್ಷ್ಮೀವಾಡಿ ಜನರ ಬಹು ಬೇಡಿಕೆಯ ಕುಡಿಯುವ ನೀರಿನ ಯೋಜನೆ ಗೆ ಚಾಲನೆಕಾಗವಾಡ ಮತಕ್ಷೇತ್ರದ ಕೃಷ್ಣ ನದಿ ತೀರದ ಕುಸುನಾಳ ಗ್ರಾಮದ ಲಕ್ಷ್ಮೀವಾಡಿ ಜನರ ಬಹಳ ದಿನಗಳ ಬೇಡಿಕೆ ಆಗಿದ್ದ ಕುಡಿಯುವ ನೀರಿನ ಪೈಪ್ ಲೈನ್ ಯೋಜನೆಗೆ ಸಚಿವ ಶ್ರೀಮಂತ ಪಾಟೀಲ ಅವರ ವಿಶೇಷ ಪ್ರಯತ್ನದಿಂದ ಮಂಜೂರಾದ 12ಲಕ್ಷ ರೂ ವೆಚ್ಚದ ಕಾಮಗಾರಿ ಸಚಿವರ ಅನುಪಸ್ಥಿತಿಯಲ್ಲಿ ಮುಖಂಡರು ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಬಿಜೆಪಿ ಮುಖಂಡ ಶೀತಲ ಪಾಟೀಲ ಮಾತನಾಡಿ ಚುನಾವಣೆ ಸಂದರ್ಭದಲ್ಲಿ ಇಲ್ಲಿನ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವದಾಗಿ ಭರವಸೆಯಂತೆ ಕೇಲ ದಿನಗಳ ಹಿಂದೆ ಶುದ್ದ ಕುಡಿಯುವ ನೀರಿನ ಘಟಕವನ್ನು ಪ್ರಾರಂಭಿಸಲಾಗಿತ್ತು ಆದರೆ ಸವಳು ನೀರು ಇರುವುದರಿಂದ ಸ್ಥಗಿತಗೊಂಡಿದೆ ಹಾಗಾಗಿ ನದಿಯಿಂದ ಸುಮಾರು 3ಕಿ.ಮೀ ಪೈಪ್ ಲೈನ್ ಕಾಮಗಾರಿ ತಂದು ಕೊಟ್ಟ ಮಾತಿನಂತೆ ಕ್ಷೇತ್ರದಲ್ಲಿ ಹಂತ ಹಂತವಾಗಿ ಅಭಿವೃದ್ಧಿಯತ್ತ ಮುನ್ನಡೆಸುತ್ತಿದ್ದಾರೆ ಎಂದರು.

ಈ ಯೋಜನೆ ಬಗ್ಗೆ ಕುಡಿಯುವ ನೀರು ಸರಬರಾಜು ಯೋಜನೆ ಅಧಿಕಾರಿ ಈರಣ್ಣ ವಾಲಿ ಕಾಮಗಾರಿ ಬಗ್ಗೆ ಮಾಹಿತಿ ನೀಡಿದರು.

ಈ ವೇಳೆ ಮುಖಂಡರಾದ ಸಂದೀಪ ಮಗದುಮ,ಮಾಹಾವೀರ ಚೌಗಲೆ, ದಯಾನಂದ ಪುಟಾಣೆ, ರಮೇಶ ಬಳೂಲ, ಶ್ರೀಮಂತ ಯರಂಡೋಲಿ,ಬೆಂಡು ಜಮಾದಾರ, ಅಮರ ಮೈತ್ರಿ,ಸಚಿವರ ಆಪ್ತ ಸಹಾಯಕ ವಿನಾಯಕ ಶಿಂದೆ,ಮುದ್ದು ಮುಲ್ಲಾ ಹಾಗೂ ಗುತ್ತಿಗೆದಾರರು ಸ್ಥಳೀಯರು ಉಪಸ್ಥಿತರಿದ್ದರು.ಲಕ್ಷ್ಮಿವಾಡಿ ಜನರ ಬೇಡಿಕೆಗೆ ಸ್ಪಂದಿಸಿದ ಸಚಿವ ಶ್ರಿಮಂತ‌ ಪಾಟೀಲ ಲಕ್ಷ್ಮಿವಾಡಿ ಜನರ ಬೇಡಿಕೆಗೆ ಸ್ಪಂದಿಸಿದ ಸಚಿವ ಶ್ರಿಮಂತ‌ ಪಾಟೀಲ Reviewed by News10Karnataka Admin on November 26, 2020 Rating: 5

No comments:

Powered by Blogger.