.

ಚನ್ನರಾಜ್ ಹಟ್ಟಿಹೋಳಿ ಹುಟ್ಟುಹಬ್ಬ ಆಚರಣೆ ಮಾಡಿಕ್ಕೊಂಡಿದ್ದು ಹೇಗೆ ಎಲ್ಲಿ...ಇಲ್ಲಿದೆ ಡಿಟೇಲ್...

ಬೆಳಗಾವಿ :  ಚನ್ನರಾಜ ಹಟ್ಟಿಹೊಳಿ ಜನ್ಮದಿನ ನಿಮಿತ್ತ ರಕ್ತದಾನ ಶಿಬಿರ ಹರ್ಷ ಸಕ್ಕರೆ ಕಾರ್ಖಾನೆಯ 54 ಸಿಬ್ಬಂದಿಯಿಂದ ರಕ್ತದಾನ ಮಾಡಿದ್ದಾರೆ..

ಬೆಳಗಾವಿ ಹರ್ಷ ಶುಗರ್ಸ್ ವ್ಯವಸ್ಥಾಪಕ ನಿರ್ದೇಶಕ ಚನ್ನರಾಜ ಹಟ್ಟಿಹೊಳಿ ಅವರ 36ನೇ ಜನ್ಮದಿನದ ನಿಮಿತ್ತ ಶುಕ್ರವಾರ ಕಾರ್ಖಾನೆಯಲ್ಲಿ ರಕ್ತದಾನ ಶಿಬಿರ ಸಂಘಟಿಸಲಾಗಿತ್ತು ಕಾರ್ಖಾನೆಯ ಆಯಾ ವಿಭಾಗಗಳ ಒಟ್ಟು 54 ಸಿಬ್ಬಂದಿ ಭಾಗವಹಿಸಿ ತಲಾ 350 ಎಂಎಲ್ ರಕ್ತದಾನವನ್ನು ಮಾಡಿ ಮಾನವೀಯತೆ ಮೆರೆದರು. ಶಿಬಿರ ಉದ್ಘಾಟಿಸಿದ  ಕಾರ್ಖಾನೆಯ ನಿರ್ದೇಶ ಮೃಣಾಲ ಹೆಬ್ಬಾಳಕರ್ , ಹುಟ್ಟುಹಬ್ಬವನ್ನು ಅನೇಕ ಜನರು ಬೇರೆ ಬೇರೆ ರೀತಿಯಲ್ಲಿ ಆಚರಿಸುತ್ತಾರೆ. ಕೆಲವರು ತಿಂದು, ಕುಣಿದು, ಮೋಜು, ಮಸ್ತಿ ಮಾಡುತ್ತಾರೆ. ಆದರೆ ಕಾರ್ಖಾನೆಯ ಸಿಬ್ಬಂದಿ ಈ ರೀತಿ ರಕ್ತದಾನ ಮಾಡುವ ಮೂಲಕ ಖಾರ್ಕಾನೆಯ ವ್ಯವಸ್ಥಾಪಕ ನಿರ್ದೇಶಕರ ಜನ್ಮದಿನ ಆಚರಿಸುತ್ತಿದ್ದಾರೆ. ತನ್ಮೂಲಕ ಇನ್ನೊಂದು ಜೀವ ಉಳಿಸುವ ಮಾನವೀಯ ಕಾರ್ಯ ಮಾಡಿರುವುದು ಶ್ಲಾಘನೀಯ ಎಂದು ಹೇಳಿದರು.

ಕಾರ್ಖಾನೆಯ ಸಿಬ್ಬಂದಿಯ ಈ ಮಹತ್ತರ ಕೆಲಸಕ್ಕೆ ನನ್ನ ಹೃದಯಸ್ಪರ್ಶಿ ಸಲಾಂ ಎಂದು ಚನ್ನರಾಜ ಹಟ್ಟಿಹೊಳಿ ಹೇಳಿದ್ದಾರೆ . ರಕ್ತದಾನ ಶಿಬಿರದ ಈ ಸಂದರ್ಭದಲ್ಲಿ ಕಾರ್ಖಾನೆಯ ಎಲ್ಲ ವಿಭಾಗಗಳ ಕಾರ್ಮಿಕರು, ಆಡಳಿತ ಮಂಡಳಿ ಸದಸ್ಯರು, ಬೆಳಗಾವಿ ಕೆ.ಎಲ್.ಇ ಆಸ್ಪತ್ರೆಯ ವೈದ್ಯರು, ರಕ್ತದಾನ ವಿಭಾಗದ ಮುಖ್ಯಸ್ಥರು, ಶುಶ್ರೂಷಕರು ಉಪಸ್ಥಿತರಿದ್ದರು.
ಚನ್ನರಾಜ್ ಹಟ್ಟಿಹೋಳಿ ಹುಟ್ಟುಹಬ್ಬ ಆಚರಣೆ ಮಾಡಿಕ್ಕೊಂಡಿದ್ದು ಹೇಗೆ ಎಲ್ಲಿ...ಇಲ್ಲಿದೆ ಡಿಟೇಲ್... ಚನ್ನರಾಜ್ ಹಟ್ಟಿಹೋಳಿ ಹುಟ್ಟುಹಬ್ಬ ಆಚರಣೆ ಮಾಡಿಕ್ಕೊಂಡಿದ್ದು ಹೇಗೆ ಎಲ್ಲಿ...ಇಲ್ಲಿದೆ ಡಿಟೇಲ್... Reviewed by News10Karnataka Admin on November 20, 2020 Rating: 5

No comments:

Powered by Blogger.