.

ಕುಲಕರ್ಣಿ ಸಹೋದರರಿಗೆ ಸಿಬಿಐ ಕೊಟ್ಟ ಬಿಗ್ ಶಾಕ್ ಎನ್ ಗೊತ್ತಾ...?

 ಧಾರವಾಡ ಜಿಲ್ಲಾಪಂಚಾಯತ್ ಯೋಗೀಶ್ ಗೌಡ ಕೊಲೆ ವಿಚಾರಕ್ಕೆ ಸಂಭಂದ ಪಟ್ಟಂತೆ ಇಂದು ಬೆಳಂ ಬೆಳಿಗ್ಗೆ ಸಿಬಿಐ ಅಧಿಕಾರಿಗಳು ಮಾಜಿ ಸಚಿವ ವಿನಯ ಕುಲಕರ್ಣಿ, ಸಹೋದರ ವಿಜಯ ಕುಲಕರ್ಣಿ ಅವರನ್ನ ವಶಕ್ಕೆ ಪಡೆದುಕ್ಕೊಂಡು ಕಳೆದ 5 ಘಂಟೆಗಳಿಂದ ಧಾರವಾಡದ ಉಪನಗರ ಪೋಲಿಸ್ ಠಾಣೆಯಲ್ಲಿ ವಿಚಾರಣೆ ಮಾಡುತ್ತಿದ್ದಾರೆ ಸಿಬಿಐ ಅಧಿಕಾರಿಗಳು, ಇನ್ನುಆಜಿ ಸಚಿವರನ್ನ ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆಯುತ್ತಿದ್ದಂತೆ ಧಾರವಾಡದಲ್ಲಿ ಭಾರಿ ಸಂಚಲನ ಮೂಡಿಸಿದೆ ಜೊತೆಗೆ ಕಾಂಗ್ರೆಸ್ ಕಾರ್ಯಕರ್ತರು ಉಪನಗರ ಪೋಲಿಸ್ ಠಾಣೆಯತ್ತ ಮುಖ ಮಾಡುತ್ತಿದ್ದಾರೆ...

ಪೋಲಿಸ್ ಠಾಣೆಯ ಎದುರಿಗೆ ನೂರಾರು ಕಾರ್ಯಕರ್ತರು ಒಂದು ಕಡೆ ಜಮಾವಣೆ ಗೊಂಡರೆ, ಮತ್ತೊಂದಡೆ ಸಿಬಿಐ ಅಧಿಕಾರಿಗಳು ಕುಲಕರ್ಣಿ ಸಹೋದರರಿಗೆ ವಿಚಾರಣೆ ಮಾಡುತ್ತಿದ್ದಾರೆ..ಇನ್ನು ಕೊಲೆ ಪ್ರಕರಣದ ಆರೋಪವನ್ನ ಎದುರಿಸುತ್ತಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರು ಇದೆ ನವೆಂಬರ 7 ರಂದು ಹುಟ್ಟು ಹಬ್ಬವನ್ನ ಆಚರಣೆ ಮಾಡಿಕ್ಕೊಳ್ಳಬೇಕಿತ್ತು...ಆದರೆ ಕುಲಕರ್ಣಿ ಅವರ ನಿವಾಸ ಮಾತ್ರ ಇಂದು ಕಾರ್ಯಕರ್ತರಿಲ್ಲದೆ ಬೀಕೋ ಎನ್ನುತ್ತಿದೆ...


ವಿನಯ ಕುಲಕರ್ಣಿ ನಿರ್ದೂಷಿಯಾಗಿ ಹೊರಬರುತ್ತಾರೆ ಎಂದು ಜನರು ಹೇಳುತ್ತಿದ್ದಾರೆ..ವಿನಯ ಕುಲಕರ್ಣಿ ರಾಜ್ಯಮಟ್ಟದಲ್ಲಿ ಬೆಳೆಯುತ್ತಿರುವ ನಾಯಕ. ಅವರನ್ನು ಹತ್ತಿಕ್ಕುವ ಕೆಲಸವನ್ನು ಆಡಳಿತ ಪಕ್ಷ ಮಾಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಆಕ್ರೊಶ ವ್ಯಕ್ತ ಪಡಿಸುತ್ತಿದ್ದಾರೆ.. ಯೋಗೀಶಗೌಡ ಕೊಲೆಯಾದಾಗ ನಾವೂ ಅದನ್ನು ಖಂಡಿಸಿದ್ದೆವು. ಆದರೆ, ಇದರಲ್ಲಿ ವಿನಯ ಕುಲಕರ್ಣಿ ಅವರ ಪಾತ್ರ ಇಲ್ಲ. ಸಿಬಿಐ ಮೇಲೆ ನಮಗೆ ನಂಬಿಕೆ ಇದೆ. ವಿನಯ್ ಅವರು ಈ ಪ್ರಕರಣದಲ್ಲಿ ನಿರ್ದೂಷಿಯಾಗಿ ಹೊರ ಬರುತ್ತಾರೆ ಎಂಬ ನಂಬಿಕೆ ಇದೆ..ಎಂದು ಹೇಳಿದ್ದಾರೆ..


ಒಟ್ಟಿನಲ್ಲಿ ಸಿಬಿಐ ಅಧಿಕಾರಿಗಳು ಸಹೋದರರನ್ನ ವಿಚಾರಣೆ ಮಾಡಿ ಇಷ್ಟಕ್ಕೆ ಕೂ ಬಿಡ್ತಾರಾ...ಇನ್ನು ಮುಂದು ವರೆಸುತ್ತಾರಾ ಎಂಬುದನ್ನ ಕಾದು ನೋಡಬೇಕಿದೆ...
ಕುಲಕರ್ಣಿ ಸಹೋದರರಿಗೆ ಸಿಬಿಐ ಕೊಟ್ಟ ಬಿಗ್ ಶಾಕ್ ಎನ್ ಗೊತ್ತಾ...? ಕುಲಕರ್ಣಿ ಸಹೋದರರಿಗೆ ಸಿಬಿಐ ಕೊಟ್ಟ ಬಿಗ್ ಶಾಕ್ ಎನ್ ಗೊತ್ತಾ...? Reviewed by News10Karnataka Admin on November 05, 2020 Rating: 5

No comments:

Powered by Blogger.