.

ವಿಧಾನ ಪರಿಷ್ಯತ್ ಸದಸ್ಯ ಮಹಾಂತೇಶ ಕವಟಗಿಮಠ ಅವರ ಕೆಲಸ ಅಭಿವೃದ್ದಿ ಪಥದತ್ತ...ಅಷ್ಟಕ್ಕೂ ಅವರು ಮಾಡಿರುವ ಕೆಲಸ‌ ಎನೂ..?

ಬೆಳಗಾವಿ ಚಿಕ್ಕೋಡಿ : ಕರ್ನಾಟಕ ಸರ್ಕಾರ "ನೀರಾವರಿ ಇಲಾಖೆ " ವತಿಯಿಂದ ಚಿಕ್ಕೋಡಿ- ಸದಲಗಾ ವಿಧಾನ ಸಭಾ ಮತಕ್ಷೇತ್ರದ ಚಿಕ್ಕೋಡಿ ತಾಲೂಕಿನ ಚಿಂಚಣಿ ಗ್ರಾಮದ ಪ.ಜಾತಿಯ ರೈತರ ಜಮೀನಿಗಳಿಗೆ ಲಕ್ಷ್ಮೀದೇವಿ ಏತ ನೀರಾವರಿ ಮೂಲಕ ನೀರಾವರಿ (ಪೈಪ್ ಲೈನ್ ) ಸೌಲಭ್ಯ ಕಲ್ಪಿಸಲು ರೂ.3. ಕೋಟಿ ಮತ್ತು ಸಾಮನ್ಯ ವರ್ಗದ ರೈತರ ಜಮೀನುಗಳಿಗೆ ನೀರಾವರಿ ಸೌಲಬ್ಯ ಕಲ್ಪಿಸಲು ಶ್ರೀ ಬಸವೇಶ್ವರ ಏತ ನೀರಾವರಿ ಯೋಜನೆಗೆ ರೂ.3 ಕೋಟಿ 60 ಲಕ್ಷಗಳ ಅನುದಾನವನ್ನು ಸರಕಾರದಿಂದ  ಮಂಜೂರಾತಿ ಕೊಡಸಿ ಮಂಜೂರಾದ ಕಾಮಗಾರಿಗಳಿಗೆ ಚಾಲನೆಯನ್ನ ವಿಧಾನ ಪರಿಷ್ಯತ್ ಸದಸ್ಯ ಮಹಾಂತೇಶ ಕವಟಗಿಮಠ ಅವರು ಮಾಡಿದ್ದಾರೆ..

ಉದ್ಘಾಟನೆ ಮಾಡಿ ಕಾರ್ಯಕ್ರಮವನ್ನು ದ್ದೆಶಿಸಿ  ಮಾತನಾಡಿದ  ಅವರು ಎರಡು ನೀರಾವರಿ ಯೋಜನೆಯಿಂದ ಒಟ್ಟು 175 ಎಕರೆ, 50 ರೈತ ಕುಟುಂಬಗಳಿಗೆ ಅನುಕೂಲವಾಗಲಿದೆ, ಈ ಸಂಧರ್ಭದಲ್ಲಿ ಚಿಂಚಣಿ ಸಿದ್ದ ಸಂಸ್ಥಾನ ಮಠದ ಪೂಜ್ಯ ಶ್ರೀ ಅಲ್ಲಮಪ್ರಭು ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು.

ಚಿಂಚಣಿ ಗ್ರಾಮದ ತಾಲ್ಲೂಕು ಪಂಚಾಯತ್ ಸದಸ್ಯರಾದ ಶ್ರೀ ಅಭಯ ಪಾಟೀಲ, ಶ್ರೀ ಸತೀಶ ಪಾಟಿಲ, ಶ್ರೀ ಅಪ್ಪಾಸಾಬ ಚೌಗಲಾ ಶ್ರೀ ಲಕ್ಷ್ಮಣ ಢಂಗೇರ, ಶ್ರೀ  ಸುಭಾಷ ಚೌಗಲಾ ಸುಕುಮಾರ ಅಪ್ಪಾಜಿಗೋಳ ಶ್ರೀ ಸುಕುಮಾರ ಅಪ್ಪಾಜಿಗೋಳ, ಶ್ರೀ ಚೊಂಚನ್ನವರ, ಶ್ರೀ ಅನೀಲ ಪಾಟೀಲ, ಶ್ರಿ ಕಾಮಣೆ ಸರ್ ಶ್ರೀ ಸುರೇಶ ಹೆಗಡೆ,ನೀರಾವರಿ ನಿಗಮದ ಅಧಿಕಾರಳಾದ ಎಇಇ ಶ್ರ ಪಿ ಸದಾಶಿವ ಎಸ್ ಒ ಶ್ರೀ ಕಮಲಾಕರ ಹಾಗೂ ಚಿಂಚಣಿ ಗ್ರಾಮದ ರೈತರು, ಗ್ರಾಮಸ್ಥರು ಉಪಸ್ಥಿತರಿದ್ದರು.
ವಿಧಾನ ಪರಿಷ್ಯತ್ ಸದಸ್ಯ ಮಹಾಂತೇಶ ಕವಟಗಿಮಠ ಅವರ ಕೆಲಸ ಅಭಿವೃದ್ದಿ ಪಥದತ್ತ...ಅಷ್ಟಕ್ಕೂ ಅವರು ಮಾಡಿರುವ ಕೆಲಸ‌ ಎನೂ..? ವಿಧಾನ ಪರಿಷ್ಯತ್ ಸದಸ್ಯ ಮಹಾಂತೇಶ ಕವಟಗಿಮಠ ಅವರ ಕೆಲಸ ಅಭಿವೃದ್ದಿ ಪಥದತ್ತ...ಅಷ್ಟಕ್ಕೂ ಅವರು ಮಾಡಿರುವ ಕೆಲಸ‌ ಎನೂ..? Reviewed by News10Karnataka Admin on November 27, 2020 Rating: 5

No comments:

Powered by Blogger.