.

ಸಿಬಿಐ ಅಧಿಕಾರಿಗಳಿಂದ ಹಲವರ ವಿಚಾರಣೆ..ಇಲ್ಲಿದೆ ಪುಲ್ ಮಾಹಿತಿ..

ದೀಪಾವಳಿ ಹಬ್ಬವನ್ನ‌ ಮುಗಿಸಿ‌ಕ್ಕೊಂಡು ಮತ್ತೆ ಸಿಬಿಐ ಅಧಿಕಾರಿಗಳು ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ‌ ಸಂಬಂಧ ಪಟ್ಟಂತೆ ಕಳೆದ ಎರಡು ದಿನಗಳಿಂದ ಆರೋಪಿಗಳನ್ನ ಮತ್ತು ವಿನಯ ಕುಲಕರ್ಣಿ ಅವರ ಸಹೋದರರನ್ನ ಧಾರವಾಡ ಉಪನಗರ ಪೋಲಿಸ್ ಠಾಣೆಗೆ ಕರೆಸಿ ವಿಚಾರಣೆಯನ್ನ ನಡೆಸುತ್ತಿದ್ದಾರೆ..

ಯೋಗೇಶಗೌಡ ಕೊಲೆಯ ಪ್ರಕರಣ ವಿಚಾರವಾಗಿ ಸಿಬಿಐ ಅಧಿಕಾರಿಗಳು ಇಂದು ವಿನಯ ಕುಲಕರ್ಣಿ ಅವರ ಸೋದರ ಮಾವನಾದ ಚಂದ್ರಶೇಖರ್ ಇಂಡಿ, ಸಹೋದರ ವಿಜಯ ಕುಲಕರ್ಣಿ , ಕೊಲೆಯ ಪ್ರಮುಖ ಆರೋಪಿ ಬಸವರಾಜ್ ಮುತ್ತಗಿ,‌ ವಿನಯ ಕುಲಕರ್ಣಿ ಆಪ್ತ ಕಾರ್ಯದರ್ಶಿಯಾಗಿದ್ದ ಸೋಮು ನ್ಯಾಮಗೌಡ, ಯೂನೂಸ್ ಹುಲ್ಗುರ್, ಮುಕ್ತುಂ ಸೊಗಲದ, ಅವರನ್ನು ಧಾರವಾಡ ಉಪನಗರ ಪೋಲಿಸ್ ಠಾಣೆಗೆ ಕರೆಸಿ 5 ಘಂಟೆಗಳ ಕಾಲ ವಿಚಾರಣೆಯನ್ನ ಮಾಡಿದ್ದಾರೆ. ಸಿಬಿಐ ಅಧಿಕಾರಿಗಳು ವಿಚಾರಣೆ ಮಾಡಿದ್ದಾರೆ..
ಸಿಬಿಐ ಅಧಿಕಾರಿಗಳಿಂದ ಹಲವರ ವಿಚಾರಣೆ..ಇಲ್ಲಿದೆ ಪುಲ್ ಮಾಹಿತಿ.. ಸಿಬಿಐ ಅಧಿಕಾರಿಗಳಿಂದ ಹಲವರ ವಿಚಾರಣೆ..ಇಲ್ಲಿದೆ ಪುಲ್ ಮಾಹಿತಿ.. Reviewed by News10Karnataka Admin on November 21, 2020 Rating: 5

No comments:

Powered by Blogger.