.

ಮೊದಲ ಹಂತದ ಗ್ರಾಮ ಪಂಚಾಯತ್ ಚುಣಾವಣೆಗೆ ಧಾರವಾಡ ಜಿಲ್ಲಾಡಳಿತ ಸಜ್ಜಾಗಿದ್ದು ಯಾವ ರೀತಿ ಗೊತ್ತಾ...?

ಧಾರವಾಡ ಹಾಗೂ ಅಳ್ನಾವರ  ತಾಲೂಕಿನ ಗ್ರಾಮ ಪಂಚಾಯತ ಚುನಾವಣಾಧಿಕಾರಿಗಳಿಗೆ ತರಬೇತಿ.

ಧಾರವಾಡ :  ಗ್ರಾಮ ಪಂಚಾಯತ ಚುಣಾವಣೆ ದಿನಾಂಕ ಘೋಷಣೆ ಆದ ಬೆನ್ನಲ್ಲೆ ಧಾರವಾಡ ಹಾಗೂ ಅಳ್ನಾವರ ತಾಲೂಕಿನ  ಗ್ರಾಮ ಪಂಚಾಯತ ಚುನಾವಣೆ ಕರ್ತವ್ಯಗಳನ್ನು ನಿರ್ವಹಿಸಲು ನೇಮಕವಾಗಿರುವ ಚುನಾವಣಾ ಅಧಿಕಾರಿ ಮತ್ತು ಸಹಾಯಕ ಚುನಾವಣಾ ಅಧಿಕಾರಿಗಳಿಗೆ  ಜಿಲ್ಲಾ ಚುನಾವಣಾಧಿಕಾರಿಗಳಾಗಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರ ಆದೇಶದಂತೆ  ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ  ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಧಾರವಾಡ ತಾಲೂಕಾ ಆಡಳಿತದಿಂದ ಆಯೋಜಿಸಲಾಗಿತ್ತು..
ಕಾರ್ಯಾಗಾರ ಉದ್ದೇಶಿಸಿ ತಹಸಿಲ್ದಾರ ಡಾ.ಸಂತೋಷ ಬಿರಾದರ ಅವರು ಪ್ರಾಸ್ತಾವಿಕವಾಗಿ  ಮಾತನಾಡಿ, ಗ್ರಾಮ ಪಂಚಾಯತ ಚುನಾವಣೆಗಳು ಪ್ರಜಾಪ್ರಭುತ್ವದ ಪ್ರಯೋಗಾಲಯಗಳು. ನಾಯಕರನ್ನು ತಯಾರುಗೊಳಿಸುವ ಶಾಲೆಗಳು.  ಈ ಪಂಚಾಯತ ಚುನಾವಣೆಯನ್ನು ಯಶಸ್ವಿಯಾಗಿ ಜರುಗಿಸುವಲ್ಲಿ ಚುನಾವಣಾಧಿಕಾರಿಗಳ ಮತ್ತು ಸಹಾಯಕ ಚುನಾವಣಾಧಿಕಾರಿಗಳ ಪಾತ್ರ ಮುಖ್ಯವಾಗಿದೆ ಎಂದರು.
ಧಾರವಾಡ ತಾಲ್ಲೂಕಿನಲ್ಲಿ ಒಟ್ಟು 35 ಗ್ರಾಮ ಪಂಚಾಯತಿಗಳಿದ್ದು, ಮಾರಡಗಿ ಗ್ರಾಮ ಪಂಚಾಯತ ಅವಧಿ ಇನ್ನು ಇರುವದರಿಂದ ಅದನ್ನು ಹೊರತುಪಡಿಸಿ ಉಳಿದ 34 ಗ್ರಾಮ ಪಂಚಾಯತಗಳಿಗೆ ಹಾಗೂ ಅಳ್ನಾವರ ತಾಲೂಕಿನ 4 ಗ್ರಾಮ ಪಂಚಾಯತಿಗಳಿಗೆ ಸಾರ್ವತ್ರಿಕ ಚುನಾವಣೆ ಜರುಗಿಸಲು ಎಲ್ಲ ಪೂರ್ವ ಸಿದ್ದತೆ ಮಾಡಿಕೊಳ್ಳಲಾಗಿದೆ.

ಧಾರವಾಡ ಹಾಗೂ ಅಳ್ನಾವರ ತಾಲ್ಲೂಕಿನಲ್ಲಿರುವ  ಒಟ್ಟು 38 ಗ್ರಾಮ ಪಂಚಾಯತಿಗಳ ಚುನಾವಣೆಗಾಗಿ 45 ಜನ ಚುನವಣಾ ಅಧಿಕಾರಿಗಳು ಮತ್ತು 50 ಜನ ಸಹಾಯಕ ಚುನಾವಣಾ ಅಧಿಕಾರಿಗಳು ಹಾಗೂ 38 ಜನ ಗ್ರಾಮ ಪಂಚಾಯತ ಗಣಕೀಕರಣ ಸಿಬ್ಬಂದಿಗಳಿಗೆ ತರಬೇತಿ  ಆಯೋಜಿಸಲಾಗಿದೆ ಎಂದು ಹೇಳಿದರು.ತರಬೇತಿಯಲ್ಲಿ ಕರ್ತವ್ಯಕ್ಕೆ ನೇಮಕವಾಗಿರುವ ಅಧಿಕಾರಿಗಳು ತರಬೇತಿದಾರರಿಂದ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಬೇಕು. ಮತ್ತು  ರಾಜ್ಯ  ಚುನಾವಣಾ ಆಯೋಗದಿಂದ ನೀಡಿರುವ  ಗ್ರಾಮ ಪಂಚಾಯತ ಚುನಾವಣಾ ಕೈಪಿಡಿಯನ್ನು ಪ್ರತಿಯೊಬ್ಬ ಅಧಿಕಾರಿ ಮನನ ಮಾಡಿಕೊಂಡು, ಚುನಾವಣಾ ಕಾನೂನುಗಳನ್ನು ಪಾಲಿಸಿ, ಚುನಾವಣಾ ದಿನಗಳಲ್ಲಿ ಕಟ್ಟುನಿಟ್ಟಾಗಿ‌ಜಾರಿಗೊಳಿಸಬೇಕೆಂದು  ಅವರು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ  ಚಿಕ್ಕೋಡಿ ಪಿ.ಯು ಕಾಲೇಜ್  ಉಪನ್ಯಾಸಕ ಎನ್.ವಿ.ಶಿರಗಾಂಕರ ಮತ್ತು  ತಾಲೂಕಾ ಮಟ್ಟದ ತರಬೇತಿದಾರರಾದ  ಬಸವರಾಜ ದೇಸೂರ, ಪಿ.ಆರ್.ನಾಗರಾಳ, ಎಸ್.ರವಿನಾಯಕ ಹಾಗೂ ಎಮ್.ಸಿ.ಎಲಿಗಾರ ಅವರು ಚುನಾವಣಾ ತರಬೇತಿ ನೀಡಿದರು.
 ತರಬೇತಿ ಕಾರ್ಯಾಗಾರದಲ್ಲಿ ಧಾರವಾಡ ತಹಸಿಲ್ದಾರ ಕಚೇರಿ ಚುನಾವಣಾ ವಿಭಾಗದ ಶಿರಸ್ತೆದಾರ ಹಣಮಂತ ಕೊಚ್ಚರಗಿ, ಅಳ್ನಾವರ ತಾಲೂಕಿನ ಚುನಾವಣಾ ಶಿರಸ್ತೆದಾರ ಎಸ್.ಪಿ.ಹೆಬ್ಬಳ್ಳಿ,  ಕಂದಾಯ ನಿರೀಕ್ಷಕ ಮಂಜುನಾಥ ಗೂಳಪ್ಪನವರ, ರಮೇಶ ಮೆಹರವಾಡೆ , ವಿವಿಧ      ಗ್ರಾಮಲೆಕ್ಕಾಧಿಕಾರಿಗಳು, ಚುನಾವಣಾ ವಿಭಾಗದ ಸಿಬ್ಬಂದಿಗಳು ಭಾಗವಹಿಸಿದ್ದರು.


ಮೊದಲ ಹಂತದ ಗ್ರಾಮ ಪಂಚಾಯತ್ ಚುಣಾವಣೆಗೆ ಧಾರವಾಡ ಜಿಲ್ಲಾಡಳಿತ ಸಜ್ಜಾಗಿದ್ದು ಯಾವ ರೀತಿ ಗೊತ್ತಾ...? ಮೊದಲ ಹಂತದ ಗ್ರಾಮ ಪಂಚಾಯತ್ ಚುಣಾವಣೆಗೆ ಧಾರವಾಡ ಜಿಲ್ಲಾಡಳಿತ ಸಜ್ಜಾಗಿದ್ದು ಯಾವ ರೀತಿ ಗೊತ್ತಾ...? Reviewed by News10Karnataka Admin on November 30, 2020 Rating: 5

No comments:

Powered by Blogger.